Top

ಅಂತ್ಯಕ್ರಿಯೆಗೆ ಕಡಿಮೆ ಹಣ ಪಡೆಯಿರಿ ಎಂದ ವ್ಯಕ್ತಿ ಮೇಲೆ ಗಂಭೀರ ಹಲ್ಲೆ

ಸುತ್ತಿಗೆಯಿಂದ ಹಲ್ಲೆ ಮಾಡಿ ಹಲ್ಲು ಮುರಿದಿರುವ ಆರೋಪ

ಅಂತ್ಯಕ್ರಿಯೆಗೆ ಕಡಿಮೆ ಹಣ ಪಡೆಯಿರಿ ಎಂದ ವ್ಯಕ್ತಿ ಮೇಲೆ ಗಂಭೀರ ಹಲ್ಲೆ
X

ಬೆಂಗಳೂರು: ಅಂತ್ಯಕ್ರಿಯೆಗೆ ಕಡಿಮೆ ಹಣ ಪಡಿಯಿರಿ ಎಂದು ಹೇಳಿದಕ್ಕೆ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಬಡಾಮಕ್ಕಾನ್ ಮೈದಾನದ ಸ್ಮಶಾನದಲ್ಲಿ ಗುಂಡಿ ತೆಗೆಯಲು ₹10,000ದಿಂದ ₹15,000ಕ್ಕೆ ಡಿಮ್ಯಾಂಡ್​ ಮಾಡಲಾಗಿತ್ತು. ಮೌಲಾಪಾಷಾ ಎನ್ನುವವರು ಇದನ್ನು ಪ್ರಶ್ನಿಸಿ, ಕೊರೊನಾ ಸಂದರ್ಭದಲ್ಲಿ ಜನರ ಬಳಿ ಹಣ ಇರಲ್ಲ. ಅಂತ್ಯಕ್ರಿಯೆಗೆ ಕಡಿಮೆ ಹಣ ಪಡಿಯಿರಿ ₹1,500 ಮಾತ್ರ ನಿಗದಿ ಪಡಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ.

ಈ ವಿಚಾರಕ್ಕೆ ಕೋಪಗೊಂಡ ಸಾದಿಕ್ ಪಾಷಾ ಹಾಗೂ ತಂಡ ಸುತ್ತಿಗೆಯಿಂದ ಹಲ್ಲೆ ಮಾಡಿ. ಹಲ್ಲು ಮುರಿದು ವಿಕೃತಿ ಮೆರೆದಿದ್ದಾರೆ ಎಂದು ನಗರದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಮೌಲಾಪಾಷಾ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸದೇ ವಶಕ್ಕೆ ಪಡೆದು ವಾಪಾಸ್​ ಕಳುಹಿಸಿದ್ದಾರೆ ಎಂದು ಮೌಲಾಪಾಷಾ ಆರೋಪಿಸಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

Next Story

RELATED STORIES