Top

ಪರಪ್ಪನ ಅಗ್ರಹಾರದಲ್ಲಿ ಫಿಟ್ನೆಸ್ ಮಂತ್ರ: ಜೈಲಿನಲ್ಲಿ ಯೋಗ, ಧ್ಯಾನ

ಜೈಲು ಸಿಬ್ಬಂದಿಯ ಸದೃಢ ಆರೋಗ್ಯ ಹಾಗೂ ಖೈದಿಗಳ ಮನ ಪರಿವರ್ತನೆಗಾಗಿ ಹೊಸ ಕ್ರಮ

ಪರಪ್ಪನ ಅಗ್ರಹಾರದಲ್ಲಿ ಫಿಟ್ನೆಸ್ ಮಂತ್ರ: ಜೈಲಿನಲ್ಲಿ ಯೋಗ, ಧ್ಯಾನ
X

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿಯ ಸದೃಢ ಆರೋಗ್ಯಕ್ಕೆ ಹಿರಿಯ ಅಧಿಕಾರಿಗಳ ಸೂಚನೆ ನೀಡಿದ್ದು, ಇದರ ಜೊತೆಗೆ ಖೈದಿಗಳ ಮನ ಪರಿವರ್ತನೆಗಾಗಿ ಪರಪ್ಪನ ಅಗ್ರಹಾರದಲ್ಲಿ ಹೊಸ ಕ್ರಮ ಜಾರಿ ಮಾಡಲಾಗಿದೆ.

ಶ್ರೀ ರವಿಶಂಕರ್ ಗುರೂಜಿ ಆಶ್ರಮದ ವತಿಯಿಂದ ಖೈದಿಗಳ ಮನಪರಿವರ್ತನೆ ಮಾಡಲು ಜೈಲು ಸಿಬ್ಬಂದಿಗಳಿಗೆ ತರಬೇತಿ ಆರಂಭಗೊಂಡಿದೆ. ಪರಪ್ಪನ ಅಗ್ರಹಾರದಲ್ಲಿ 6 ಸಾವಿರಕ್ಕೂ ಹೆಚ್ಚು ಖೈದಿಗಳಿಗಾಗಿ 600 ಜೈಲು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಹತ್ತು ಗುಂಪುಗಳಾಗಿ ತರಬೇತಿ ನೀಡಲಾಗುತ್ತಿದೆ.

ಪ್ರತಿ ನಿತ್ಯ 6.30ರಿಂದ‌ 8.30ರವರೆಗೂ ಯೋಗ ತರಬೇತಿ ನಡೆಯುತ್ತಿದ್ದು,ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಗೂರೂಜಿ ಪುಸ್ತಕಗಳ ಬಗ್ಗೆ ಪ್ರವಚನ ಸಹ ಅಭ್ಯಾಸ ಮಾಡಿಸಲಾಗುತ್ತಿದೆ.

ಜೈಲು ಸಿಬ್ಬಂದಿ ತರಬೇತಿ ಪಡೆದ ಬಳಿಕ ಖೈದಿಗಳಿಗೆ ಯೋಗ ಧ್ಯಾನ ಟ್ರೈನಿಂಗ್​ ಕೊಡಲು ಸಿದ್ಧತೆ ನಡೆಸಲಾಗುತ್ತಿದೆ. ಸದೃಢ ದೇಹ ಹಾಗೂ ಆರೋಗ್ಯ ಜೊತೆಗೆ ಕೈದಿಗಳ ಮನಪರಿವರ್ತನೆಯಲ್ಲಿ ಸಕ್ರಿಯರಾದ ಜೈಲು ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಬಹುಮಾನದ ಭರವಸೆ ನೀಡಿದ್ದಾರೆ. ಒಂದು ವೇಳೆ ಸಿಬ್ಬಂದಿಯ ನಿರ್ಲಕ್ಷ್ಯ ಕಂಡು ಬಂದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.

Next Story

RELATED STORIES