Top

ಸರ್ಕಾರಕ್ಕೆ ಕೊರೊನಾ 3ನೇ ಅಲೆಯ ಎಚ್ಚರಿಕೆ ನೀಡಿದ ತಜ್ಞರ ಸಮಿತಿ

ಎರಡನೇ ಅಲೆಕ್ಕಿಂತ ಮೂರನೇ ಅಲೆ ಇನ್ನೂ ಭಯಾನಕ

ಸರ್ಕಾರಕ್ಕೆ ಕೊರೊನಾ 3ನೇ ಅಲೆಯ ಎಚ್ಚರಿಕೆ ನೀಡಿದ ತಜ್ಞರ ಸಮಿತಿ
X

ಬೆಂಗಳೂರು: ಕೊರೊನಾ ಎರಡನೇ ಅಲೆಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ತತ್ತರಿಸಿ ಹೋಗಿದೆ. ಈ ಬಾರಿ ಕೊರೊನಾ ಸೋಂಕಿತರ ಸಾವು ನೋವು ಅಧಿಕವಾಗಿದ್ದು, ಸರ್ಕಾರ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದೆ. ಈ ಮಧ್ಯೆಯೇ ತಜ್ಞರು ದೇಶದಲ್ಲಿ ಕೊರೊನಾ ಮೂರನೇ ಅಲೆ ಎಚ್ಚರಕೆ ನೀಡಿದ್ದಾರೆ.

ಈ ವರ್ಷದ ಅಕ್ಟೋಬರ್​ ತಿಂಗಳಲ್ಲಿ ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿದ್ದು, ಭಾರೀ ಪ್ರಮಾಣದ ಸಾವು ನೋವು ನಿಶ್ಚಿತ ಎನ್ನಲಾಗಿದೆ. ಎರಡನೇ ಅಲೆಕ್ಕಿಂತ ಮೂರನೇ ಅಲೆ ಇನ್ನೂ ಭಯಾನಕವಾಗಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆಯಿದೆ ಎನ್ನಲಾಗಿದೆ.

ಟಾಸ್ಕ್ ಫೋರ್ಸ್ ಮುಖ್ಯಸ್ಥ ಎಂ.ಕೆ ಸುದರ್ಶನ್​ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಕೊರೊನಾ ಲಸಿಕೆ ಪಡೆದಿರೋರು ಸೋಂಕಿನಿಂದ ಸೇಫ್​ ಆಗಲಿದ್ದಾರೆ. ಆದರೆ ಲಸಿಕೆ ಪಡೆಯದ 18 ವರ್ಷದೊಳಗಿನ ಮಕ್ಕಳಿಗೆ ಮೂರನೇ ಅಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಇನ್ನು ಯುರೋಪ್ ದೇಶಗಳಲ್ಲಿ ಮೂರನೇ ಅಲೆ ತಡೆಯಲು ಸಜ್ಜಾಗುತ್ತಿದ್ದು, ಭಾರತದಲ್ಲೂ ವೈದ್ಯಕೀಯ ವ್ಯವಸ್ಥೆ ಸುಧಾರಿಸುವುದು ಅತ್ಯಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳ ಬೇಕು. ರಾಜಕೀಯ ಸಮಾವೇಶ, ಱಲಿ,ಹಬ್ಬ, ಉತ್ಸವ, ಜಾತ್ರೆ, ಮೆರವಣಿಗೆ ಬ್ರೇಕ್​ ಹಾಕಿ ಎಂದು ಕೋವಿಡ್ ತಜ್ಞರ ಸಮಿತಿ ಅಧ್ಯಕ್ಷ ಡಾ. ಸಿ ಎನ್ ಮಂಜುನಾಥ್ ಸಲಹೆ ನೀಡಿದ್ದಾರೆ. ಈ ಬಾರಿಯಾದರೂ ಸರ್ಕಾರ ತಜ್ಞರ ನಿರ್ಧಾರವನ್ನು ಗಂಭೀರ ವಾಗಿ ಪರಿಗಣಿಸುತ್ತಾ ಕಾದು ನೋಡಬೇಕಿದೆ.

Next Story

RELATED STORIES