Top

ರಾವಣ ರಾಜ್ಯದಲ್ಲಿ ಪೆಟ್ರೋಲ್​ ಬೆಲೆ ₹59 ರಾಮ ರಾಜ್ಯದಲ್ಲಿ ₹100-ಸಿದ್ದರಾಮಯ್ಯ

ರಾಮನ ಹೆಸರು ಹೇಳುವವರಿಗೆ ಜನಸಾಮಾನ್ಯರ ಕಷ್ಟ ಅರ್ಥವಾಗಲ್ವೇ..?

ರಾವಣ ರಾಜ್ಯದಲ್ಲಿ ಪೆಟ್ರೋಲ್​ ಬೆಲೆ ₹59 ರಾಮ ರಾಜ್ಯದಲ್ಲಿ ₹100-ಸಿದ್ದರಾಮಯ್ಯ
X

ಬೆಂಗಳೂರು: 19 ಬಾರಿ ಬಿಜೆಪಿ ಕೇಂದ್ರ ಸರ್ಕಾರ ಪೆಟ್ರೋಲ್​ ಬೆಲೆ ಹೆಚ್ಚಿಸಿದೆ. ರಾವಣ ರಾಜ್ಯದಲ್ಲಿ ಪೆಟ್ರೋಲ್ ₹೫೯ ರಾಮನ ರಾಜ್ಯದಲ್ಲಿ ಪೆಟ್ರೋಲ್ ದರ ₹೧೦೦ ಇದೆ. ರಾಮನ ಹೆಸರನ್ನ ಹೇಳ್ತೀರ ನಿಮಗೆ ನಾಚಿಕೆಯಾಗಲ್ವೇ..? ಜನಸಾಮಾನ್ಯರ ಕಷ್ಟ ನಿಮಗೆ ಅರ್ಥವಾಗಲ್ವೇ..? ಎಂದು ವಿಪಕ್ಷ ನಾಯ ಸಿದ್ದರಾಮಯ್ಯ ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಅವರು ತೈಲ ಬೆಲೆ ಏರಿಕೆ ಖಂಡಿಸಿ ಇವತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾವು ಪ್ರತಿಭಟನೆ ಮಾಡ್ತಿದ್ದೇವೆ. ದೇಶದಾದ್ಯಂತ ಇದರ ಬಗ್ಗೆ ಕಾಂಗ್ರೆಸ್ ಹೋರಾಡುತ್ತಿದೆ. ಜನರ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ಸರ್ಕಾರವನ್ನ ಎಚ್ಚರಗೊಳಿಸುವ ಕೆಲಸ ಮಾಡ್ತಿದ್ದೇವೆ ಜನರೂ ಕೂಡ ತಮ್ಮ ಧ್ವನಿಯನ್ನ ಎತ್ತಬೇಕು ಎಂದು ಮನವಿ ಮಾಡಿಕೊಂಡರು.

ಇನ್ನು ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್​​ ೧೦೦ನಾಟ್ ಔಟ್ ಹೆಸರಿನಲ್ಲಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ಆರಂಭಿಸಿದೆ. ಸತತ ಐದು ದಿನಗಳ ಕಾಲ ನಿರಂತವಾಗಿ ನಡೆಯುವ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ದಿನೇಶ್​ ಗುಂಡುರಾವ್​ ಸೇರಿದಂತೆ ಅನೇಕ ಕಾಂಗ್ರೆಸ್​ ಮುಖಂಡರು ಭಾಗಿಯಾಗಿದ್ದಾರೆ.

Next Story

RELATED STORIES