Top

ಬೆಡ್​ ಬ್ಲಾಕಿಂಗ್​ ಕೇಸ್​ ಸಿಸಿಬಿಗೆ ವರ್ಗಾವಣೆ

ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದ ಬೆಡ್​ ಬ್ಲಾಕಿಂಗ್​​ ದಂಧೆ​

ಬೆಡ್​ ಬ್ಲಾಕಿಂಗ್​ ಕೇಸ್​ ಸಿಸಿಬಿಗೆ ವರ್ಗಾವಣೆ
X

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದ ಕೊರೊನಾ ಸೋಂಕಿತರ ಬೆಡ್​ ಬ್ಲಾಕಿಂಗ್​ ದಂಧೆ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಲಾಗಿದೆ.

ಬೆಂಗಳೂರಿನಲ್ಲಿ ಕೊರನಾ ಸೊಂಕಿತರಿಗೆ ಬೆಡ್​ ಸಿಗುತ್ತಿಲ್ಲ ಎನ್ನುವ ವಿಚಾರವಾಗಿ ಮಾಹಿತಿ ಕಲೆ ಹಾಕಿದ್ದ ಸಂಸದ ತೇಜಸ್ವಿ ಸೂರ್ಯ​, ಬೆಡ್​ ಬ್ಲಾಕಿಂಗ್​ ದಂಧೆಯನ್ನು ನಿನ್ನೆ ಬೆಳಕಿಗೆ ತಂದಿದ್ದರು ಪ್ರಕರಣ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ರೋಹಿತ್ ಮತ್ತು ನೇತ್ರಾ ಎನ್ನುವವರನ್ನು ಬಂಧಿಸಲಾಗಿತ್ತು.

ಇದೀಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕರಣವನ್ನು ಸಿಸಿಬಿ ವರ್ಗಾವಣೆ ಮಾಡಿದ್ದಾರೆ.

Next Story

RELATED STORIES