Top

ಕೊರೊನಾ ಡೇಂಜರ್ ಸಿಟಿಯಿಂದ ಸೇಫ್ ಸಿಟಿನತ್ತ ಬೆಂಗಳೂರು

ಕೊರೊನಾ ಸೋಂಕು ಇಳಿಕೆ ಬೆನ್ನಲ್ಲೇ ಆಕ್ಟಿವ್ ಕೇಸ್ ಕೂಡ ಇಳಿಕೆ

ಕೊರೊನಾ ಡೇಂಜರ್ ಸಿಟಿಯಿಂದ ಸೇಫ್ ಸಿಟಿನತ್ತ ಬೆಂಗಳೂರು
X

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಡಿಸ್ಚಾರ್ಜ್ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಇದರಿಂದ ಬೆಂಗಳೂರಿನ ಆ್ಯಕ್ಟೀವ್ ಕೇಸ್​ಗಳ ಸಂಖ್ಯೆ ಇಳಿಕೆಯಾಗಿದೆ. ನಗರದಲ್ಲಿ ಎರಡೂವರೆ ಲಕ್ಷ ಇದ್ದ ಆ್ಯಕ್ಟೀವ್ ಕೇಸ್​ಗಳಿಗ 98,125ಕ್ಕೆ ಇಳಿಕೆ ಆಗಿದೆ. ಕಳೆದ 10 ದಿನಗಳಲ್ಲಿ 30,303 ಮಂದಿಗೆ ಸೋಂಕು ಕಾಣಿಸಿಕೊಂಡಿದ್ರೆ 92,740 ಮಂದಿ ಗುಣಮುಖರಾಗಿದ್ದಾರೆ. ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಸ ಪ್ರಕರಣ & ಡಿಸ್ವಾರ್ಜ್ ಚಿತ್ರಣ ನೋಡೋದಾದ್ರೆ.

ದಿನಾಂಕ - ಪಾಸಿಟಿವ್ ಕೇಸ್ - ಡಿಸ್ಚಾರ್ಜ್ ಕೇಸ್

ಮೇ 31 - 3991 - 20332

ಜೂನ್ 1 - 3418 - 5483

ಜೂನ್ 2 - 4095 - 8620

ಜೂನ್ 3 - 3533 - 7672

ಜೂನ್ 4 - 3221 - 6220

ಜೂನ್ 5 - 2686 - 8852

ಜೂನ್ 6 - 2944 - 10224

ಜೂನ್ 7 - 1992 - 11488

ಜೂನ್ 8 - 2028 - 7664

ಜೂನ್ 9 - 2395 - 6185

ಬೆಂಗಲೂರಿನಲ್ಲಿ ಮೇ 31ರಂದು ದಾಖಲಾದ ಪಾಸಿಟವ್ ಕೇಸ್​ಗಳ ಸಂಖ್ಯೆ 3,991 ಆದರೆ 20,332 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜೂನ್ 1 ರಂದು 3,418 ಪಾಸಿಟಿವ್ ಕೇಸ್ ಕಾಣಿಸಿಕೊಂಡಿದ್ರೆ 5,483 ಗುಣಮುಖರಾಗಿದ್ದಾರೆ. ಹಾಗೇ ಜೂನ್ 2 ರಂದು 4,095 ಹೊಸ ಕೇಸ್​ಗಳು ಬಂದಿದ್ದು, 8,620 ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಜೂನ್ 4ರಂದು 3221 ಹೊಸ ಪ್ರಕರಣಗಳಾದ್ರೆ 6220 ಜನ ಡಿಸ್ಚಾರ್ಜ್ ಆಗಿದ್ದಾರೆ.

ಜೂನ್ 5ರಂದು 2686 ಜನರಿಗೆ ಪಾಸಿಟವ್ ಬಂದಿದ್ರೆ 8852 ಮಂದಿ ಗುಣಮುಖರಾಗಿದ್ದಾರೆ. ಜೂನ್ 6 ರಂದು 2944 ಪಾಸಿಟಿವ್ ಕೇಸ್ಳು ದಾಖಲಾಗಿದ್ರೆ 10224 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜೂನ್ 7ರಂದು 1992 ಹೊಸ ಪ್ರಕರಣಗಳಾದ್ರೆ 11,488 ಗುಣಮುಖ ಪ್ರಕರಣಗಳು. ಜೂನ್ 8ರಂದು 2028 ಕೇಸ್​ಗಳು ಕಾಣಿಸಿಕೊಂಡು 7,664 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇ ಜೂನ್ 9ರಂದು 2,395 ಮಂದಿಗೆ ಸೋಂಕು ಕಾಣಿಸಿಕೊಮಡಿದ್ರೆ 6,185 ಮಮದಿ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ನಲ್ಲಿ ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ 30,303 ಪಾಸಿಟಿವ್ ಕೇಸ್​ಗಳು ಕಾಣಿಸಿಕೊಂಡಿದ್ರೆ 92,740 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಮೂಲಕ ನಗರದ ಆ್ಯಕ್ಟೀವ್ ಕೇಸ್​​ಳ ಸಂಖ್ಯೆ 98,125ಕ್ಕೆ ಇಳಿಕೆಯಾಗಿದೆ. ಮುಂದಿನ 15 ದಿನಗಳ ಕಾಲ ಇದೇ ಸರಾಸರಿಯಲ್ಲಿ ಡಿಸ್ಚಾರ್ಜ್ ಆದರೆ ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ ಮೂರಂಕಿ ತಲುಪುವ ಸಾಧ್ಯತೆ ಇದೆ.

Next Story

RELATED STORIES