Top

ಕಲ್ಲು, ಚಪ್ಪಲಿ ಎಸೆಯುತ್ತಾರೆ ಅಂತ ನಾವು ಮಾಡೋಕೆ ಆಗುತ್ತಾ - ಡಿಕೆಶಿ

ಮೂರು ಉಪಚುನಾವಣೆಯಲ್ಲಿ ನಾವು ಗೆಲ್ತೇವೆ.

ಕಲ್ಲು, ಚಪ್ಪಲಿ ಎಸೆಯುತ್ತಾರೆ ಅಂತ ನಾವು ಮಾಡೋಕೆ ಆಗುತ್ತಾ - ಡಿಕೆಶಿ
X

ಕಲಬುರಗಿ: ಕಲ್ಲು, ಚಪ್ಪಲಿ ಎಲ್ಲವನ್ನೂ ಎಸೆಯುತ್ತಾರೆ. ಅವರು ಮಾಡ್ತಾರೆ ಅಂತ ನಾವು ಮಾಡೋಕೆ ಆಗುತ್ತಾ(?) ಜನ ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ರಮೇಶ್ ಬೆಂಬಲಿಗರಿಂದ ಹಲ್ಲೆ ಪ್ರಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದಲ್ಲಿಂದು ಮಾತನಾಡಿದ ಅವರು, ನಾವು ರಾಜಕೀಯದಲ್ಲಿರೋರು, ಎಲ್ಲವನ್ನೂ ಸ್ಪೋರ್ಟೀವ್ ಆಗಿಯೇ ತೆಗೆದುಕೊಳ್ಳಬೇಕು. ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಹೋಗಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸಿಡಿ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಅವರು ಏನು ಬೇಕಾದರು ಮಾಡಿಕೊಳ್ಳಲಿ ಎಂದು ಹೇಳಿದರು.

ಮೂರು ಉಪಚುನಾವಣೆಯಲ್ಲಿ ನಾವು ಗೆಲ್ತೇವೆ. ಬೆಳಗಾವಿಯಲ್ಲಿ ನಮ್ಮ ಟಿಕೆಟ್ ಆಕಾಂಕ್ಷಿಗಳನ್ನ ಒಪ್ಪಿಸಿದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇವೆ. ಅವರು ಹೆಣ್ಣುಮಗಳನ್ನ ನಿಲ್ಲಿಸಿದ್ದಾರೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ. ಬಸವಕಲ್ಯಾಣ, ಮಸ್ಕಿಯಲ್ಲೂ ನಾವೇ ಗೆಲ್ತೇವೆ. ಬಿಜೆಪಿಯ ಆಡಳಿತ ವೈಫಲ್ಯ ಜನರಿಗೆ ಗೊತ್ತಾಗಿದೆ. ಕೋವಿಡ್ ನಿಯಂತ್ರಣದ ವೈಫಲ್ಯ, ಅಭಿವೃದ್ಧಿ ವಿಚಾರದಲ್ಲಿ ಹಿನ್ನೆಡೆ ಎಲ್ಲವೂ ಗೊತ್ತಿದೆ. ಹೀಗಾಗಿ ಜನ ಮೂರು ಕ್ಷೇತ್ರಗಳಲ್ಲಿ ಕೈಹಿಡಿಯುತ್ತಾರೆ ಎಂದು ಡಿ.ಕೆ ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Next Story

RELATED STORIES