Top

ಹೈದರಾಬಾದ್​​ಗೆ ಅಕ್ರಮ ಆಕ್ಸಿಜನ್​ ಸಾಗಾಟ: ಆರೋಪಿ ಅರೆಸ್ಟ್​

30 ಆಕ್ಸಿಜನ್​ ಸಿಲಿಂಡರ್​ ಜಪ್ತಿ

ಹೈದರಾಬಾದ್​​ಗೆ ಅಕ್ರಮ ಆಕ್ಸಿಜನ್​ ಸಾಗಾಟ: ಆರೋಪಿ ಅರೆಸ್ಟ್​
X

ಕಲಬುರಗಿ: ಅಕ್ರಮವಾಗಿ ಬೇರೆ ರಾಜ್ಯಗಳಿಗೆ ಆಕ್ಸಿಜನ್​​ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಕಲಬುರಗಿ ಡ್ರಗ್ಸ್​ ಕಂಟ್ರೋಲ್​ ಅಧಿಕಾರಿಗಳು ಬಂಧಿಸಿದ್ದಾರೆ. ಮಹ್ಮದ್ ಇರ್ಫಾನ್ ಹಾಗೂ ಶೇಖ್ ಅಮೀದ್ ಬಂಧಿತ ಆರೋಪಿಗಳು.

ಆರೋಪಿಗಳು ಕಲಬುರಗಿ ಹೊರವಲಯ ನಂದೂರ್ ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಗ್ಯಾಸ್ ಪ್ಲಾಂಟ್​ನಿಂದ ಅಕ್ರಮವಾಗಿ ಹೈದರಬಾದ್​ಗೆ ಆಕ್ಸಿಜನ್ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಡ್ರಗ್ಸ್​ ಕಂಟ್ರೋಲ್​ ತಂಡ ಕಾರ್ಯಾಚರಣೆಗಿಳಿದಿದ್ದು, ನಿನ್ನೆ ತಡರಾತ್ರಿ ವಾಹನ ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ. ಆರೋಪಿಗಳಿಂದ 30 ಆಕ್ಸಿಜನ್ ಸಿಲಿಂಡರ್ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ.

ಪ್ರಕರಣ ಸಂಬಂಧ ವಿಜಯ ಗ್ಯಾಸ್ ಪ್ಲಾಂಟ್​ ಮಾಲೀಕ ವಿಜಯ ಮೇಹತಾ ಮತ್ತು ಹೈದ್ರಾಬಾದ್​ನ ಇಂಟೀ ಗ್ರೋ ಆಸ್ಪತ್ರೆಯ ಡಾ. ಫೈಜುಲ್ಲಾಖಾನ್ ವಿರುದ್ಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Next Story

RELATED STORIES