Top

ಇರಾನಿ ಗ್ಯಾಂಗ್​ ಅಂದರ್ ​50 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವಶ

  • ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಇರಾನಿ ಗ್ಯಾಂಗ್ !
  • ಟ್ರಾಕ್ಟರ್ ಕದ್ದು ರೈತರಿಗೆ ವಂಚನೆ
  • ಹೊಸ ನೊಂದಣಿಗೆ ಆರ್ ಟಿ ಓ ಸಿಬ್ಬಂಧಿಗಳು ಭಾಗಿ..?

ಇರಾನಿ ಗ್ಯಾಂಗ್​ ಅಂದರ್ ​50 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ವಶ
X

ಬೆಂಗಳೂರು: ಅಲ್ಲಿ ಏರಿಯಾ ಏರಿಯಾನೇ ಕಳ್ಳರಿಂದ ಕೂಡಿದೆ. ತಲೆಮಾರಿನಿಂದಲೂ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿರುವ ಆ ಗುಂಪಿಗೆ ನುಗ್ಗಿದ ಖಾಕಿ ಕೆಲವರನ್ನ ಹೆಡೆಮುರಿಕಟ್ಟಿದೆ ಜೊತೆಗೆ ಟ್ರಾಕ್ಟರ್ ಕಳ್ಳರನ್ನೂ ಕೂಡ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಇರಾನಿ ಗ್ಯಾಂಗ್ ಬಗ್ಗೆ ಗೊತ್ತಲ್ಲ. ಸೀಝನ್​ಗೆ ಒಮ್ಮೆ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ಖದೀಮರು ಈಗ ಮತ್ತೊಮ್ಮೆ ಬಂಧಿತರಾಗಿದ್ದಾರೆ. ಈ ಹಿಂದೆ ನಗರಕ್ಕೆ ವಿಪರೀತ ಕಾಟ ಕೊಟ್ಟಿದ್ದ ತಂಡ ಈಗ ಮತ್ತೊಮ್ಮೆ ಹಾವಳಿ ಇಟ್ಟು ಬಂಧಿತರಾಗಿದ್ದಾರೆ. ಸಲೀಂ ಇರಾನಿ ಆಜಾದ್ ಇರಾನಿ ಮತ್ತು ಅವ್ನೂ ಇರಾನಿ ಎಂಬಾತರೇ ಬಂಧಿತರು.


ಬರೋಬ್ಬರಿ 1 ಕೆ.ಜಿ 20 ಗ್ರಾಂ ಚಿನ್ನ ಅಂದರೆ ಹೆಚ್ಚು ಕಮ್ಮಿ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನ ಇರಾನಿ ಗ್ಯಾಂಗ್ನಿಂದ ಪೊಲೀಸರು ರಿಕವರಿ ಮಾಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಧಾರವಾಡಗೆ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಇದೇ ಇರಾನಿ ಗ್ಯಾಂಗ್ ಅಟ್ಯಾಕ್ ಮಾಡಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

ಧಾರವಾಡದ ಕುಗ್ರಾಮವಾಗಿರುವ ಆ ಒಂದು ಕೊಂಪೆಯಲ್ಲಿ ಕುಟುಂಬ ಕುಟುಂಬವೇ ಕಳ್ಳತನ ವೃತ್ತಿಯಲ್ಲಿರುವವರು. ದೇಶದ ವಿವಿಧೆಡೆ ಹೋಗಿ ಕಳ್ಳತನ ಮಾಡಿ ನಂತರ ಅದೇ ಕೊಂಪೆಗೆ ಬಂದು ಎಸ್ಕೇಪ್ ಆಗುತ್ತಿದ್ದರು. ಈ ಮಾಹಿತಿ ಅನ್ವಯ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಆದರೂ ಪಟ್ಟು ಬಿಡದೆ ಅಷ್ಟು ಜನರ ನಡುವೆ ನುಗ್ಗಿ ಆರೋಪಿಗಳನ್ನ ಬಂಧಿಸಿದ್ದಾರೆ.


ಇನ್ನು ಅದೇ ರೀತಿ ಕಾಮಾಕ್ಷಿಪಾಳ್ಯ ಪೊಲೀಸರು ಕೂಡ ಟ್ರಾಕ್ಟರ್ ಕಳ್ಳರನ್ನ ಬಂಧಿಸಿದ್ದಾರೆ. ಮಂಡ್ಯದ ಆನಂದ್, ಕೆ. ಲೋಕೇಶ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿ 21 ಟ್ರಾಕ್ಟರ್​ಅನ್ನು ವಶಕ್ಕೆ ಪಡೆದಿದ್ದಾರೆ. ಅಂದ್ಹಾಗೆ ಇದರ ಒಟ್ಟು ಮೊತ್ತ ಒಂದು ಕೋಟಿಗೂ ಹೆಚ್ಚು. ಇಂತಹ ಕದ್ದ ಟ್ರ್ಯಾಕ್ಟರ್ ನ್ನು ತುಮಕೂರು, ಕುಣಿಗಲ್ ಕಡೆಯ ರೈತರಿಗೆ ಹೊಸ ನೊಂದಣಿ ಮಾಡಿಸಿ ಮಾರಾಟ ಮಾಡುತ್ತಿದ್ದರು.


ಇನ್ನು ಹೊಸ ನೊಂದಣಿ ಮಾಡಿಸಲು ಆರ್​ಟಿಓ ಸಿಬ್ಬಂದಿಗಳೇನಾದರು ಆರೋಪಿಗಳಿಗೆ ಸಾಥ್ ನೀಡುತ್ತಿದ್ರಾ(?) ಎಂಬ ಶಂಕೆ ಕೂಡ ವ್ಯಕ್ತವಾಗಿದ್ದು ತನಿಖೆ ಮುಂದುವರೆದಿದೆ.

Next Story

RELATED STORIES