Top

ರಾಬರಿಗಾಗಿ ನಡೆದ ಭೀಕರ ಹತ್ಯೆ

ವೃದ್ಧೆ ಮತ್ತು ವೃದ್ಧೆಯ ಪುತ್ರನ ಸ್ನೇಹಿತ ದೇವಬ್ರತಾ ಎಂಬಾತನನ್ನ ಚಾಕುವಿನಿಂದ ಇರಿದು ಕೊಂದಿದರು.

ರಾಬರಿಗಾಗಿ ನಡೆದ ಭೀಕರ ಹತ್ಯೆ
X

ಬೆಂಗಳೂರು: ಅದೊಂದು ಭೀಕರ ಹತ್ಯೆ. ಮೇಲ್ನೋಟಕ್ಕೆ ನಿರ್ದಿಷ್ಟ ಕಾರಣಕ್ಕೆ ಹತ್ಯೆ ನಡೆದಿದೆ ಎನ್ನಲಾಗಿದ್ರೂ ಆ ಕೊಲೆಯ ಹಿಂದೆ ನಿಗೂಢ ಕಥೆ ಇದೆ. ಅಷ್ಟಕ್ಕೂ ಆ ಹತ್ಯೆಯಾದವರು ಯಾರು(?) ಯಾವ ರೀತಿ ಹತ್ಯೆ ನಡೀತು(?).

ಪುಟ್ಟೇನಹಳ್ಳಿಯ ಸಂತೃಪ್ತಿ ಲೇಔಟ್ ನಲ್ಲಿನಡೆದ ಘಟನೆ ಇದು. ಅರ್ಧ ಬಾಗಿಲು ಓಪನ್ ಆದ ಹಿನ್ನೆಲೆ ಮನೆಗೆ ಬಂದ ಕೆಲಸದವರಿಗೆ ನಿಜಕ್ಕೂ ಶಾಕ್ ಕಾದಿತ್ತು. ಮನೆಯವರನ್ನ ಕರೆದ್ರೂ ರೆಸ್ಪಾನ್ಸ್ ಮಾಡದ ಹಿನ್ನೆಲೆ ಒಳ ಹೋಗಿ ನೋಡಿದಾಗ ಒಬ್ಬ ಅರೆಬೆತ್ತಲೆಯಾಗಿ ರಕ್ತ ಚೆಲ್ಲಿ ಬಿದ್ದಿದ್ದರೆ ಮತ್ತೊಬ್ಬಾಕೆ ಕತ್ತು ಕುಯ್ದ ಸ್ಥಿತಿಯಲ್ಲಿ ಬಿದ್ದಿದ್ಲು. ಮಮತಾ ಬಸು ಎಂಬ ವೃದ್ಧೆ ಮತ್ತು ವೃದ್ಧೆಯ ಪುತ್ರನ ಸ್ನೇಹಿತ ದೇವಬ್ರತಾ ಎಂಬಾತನನ್ನ ಚಾಕುವಿನಿಂದ ಇರಿದು ಕೊಂದಿದರು.

ಒರಿಸ್ಸಾ ಮೂಲದ ದೆವಬ್ರತಾನಿಗೆ ನಗರದಲ್ಲಿ ಉದ್ಯೋಗ ಸಿಕ್ಕಿತ್ತು.ವರ್ಕ್ ಫ್ರಂ ಹೋಂ ಆದ ಕಾರಣ ಒರಿಸ್ಸಾದಿಂದ ತನ್ನ ಸ್ನೇಹಿತ ವೃದ್ಧೆಯ ಪುತ್ರನಿಗೆ ಕರೆ ಮಾಡಿದ್ದ ದೇವಬ್ರತಾ. ಸ್ವಲ್ಪ ದಿನಗಳ ಕಾಲ ಉಳಿದುಕೊಳ್ಳೊಕೆ ವ್ಯವಸ್ಥೆ ಮಾಡೋದಕ್ಕೆ ಕೇಳಿಕೊಂಡಿದ್ದ ಹೀಗಾಗಿ ತಾಯಿ ಮಗ ಜೊತೆಯಲ್ಲಿರದ ಕಾರಣ ಮತ್ತು ತನ್ನ ತಾಯಿ ಒಬ್ಬಳೆ ಇರುವ ಕಾರಣ ನಂಬಿಕೆ ಮೇರಗೆ ಮಮತಾ ಬಸು ಇದ್ದ ಮನೆಯಲ್ಲಿಯೇ ಉಳಿದುಕೊಳ್ಳೊದಕ್ಕೆ ಹೇಳಿದ್ದ. ಹೀಗಾಗಿ ಕಳೆದ 15 ದಿನಗಳ ಹಿಂದೆಯಷ್ಟೆ ದೇವಬ್ರತಾ ನಗರಕ್ಕೆ ಬಂದಿದ್ದ ಕಾಲೇಜಿನಲ್ಲಿ ಲೆಕ್ಚರರ್ ಕೆಲಸಕ್ಕೆಂದು ಬಂದಿದ್ದವನು ಕೆಲ ದಿನಗಳ ಕಾಲ ಮನೆಯಲ್ಲಿಯೇ ಕೆಲಸ ಮಾಡ್ತಿದ್ದ.

ಸದ್ಯ ಇಬ್ಬರೇ ಇರುವ ಈ ಮನಗೆ ನುಗ್ಗಿರುವ ಹಂತಕರು ಇಬ್ಬರನೂ ಕೂಡ ಚಾಕುವಿನಿಂದ ತಿವಿದು ಕೊಂದು ಮನೆಯಲ್ಲಿದ್ದ ಚಿನ್ಬಾಭರಣ ಎಟಿಎಂ ಕಾರ್ಡ್ ಸೇರಿ ಹಲವು ವಸ್ತುಗಳನ್ನ ದೋಚಿದ್ದಾರೆ. ಅಷ್ಟಲ್ಲದೆ ಪೊಲೀಸರಿಗೆ ಗೊತ್ತಾಗಬಾರದೆಂದು ಮನೆಯಲ್ಲಿದ್ದ ಸಿಸಿಟಿವಿಯ ಡಿವಿಆರ್ ಗಳನ್ನೂ ಹೊತ್ತೊಯ್ದಿದ್ದಾರೆ. ಇನ್ನು ಮನೆಗೆ ನುಗ್ಗಿದವರು ಯಾವುದೇ ವೆಪನ್ ಗಳನ್ನ ತೆಗೆದುಕೊಂಡು ಹೋಗಿಲ್ಲ. ಅಲ್ಲಿದ್ದ ಚಾಕುವಿನಿಂದಲೇ ಹತ್ಯೆ ನಡೆಸಿದ್ದಾರೆ. ಮತ್ತೊಂದು ಅಂಶ ಅಂದರೆ ಇಲ್ಲಿ ಮನೆಯನ್ನ ಜಾಲಾಡುವ ಕೆಲಸಗಳಗಾಗಲಿ ಮನೆಯ ಡೋರನ್ನ ಬಲವಂತವಾಗಿ ತಳ್ಳಿ ಡ್ಯಾಮೆಜ್ ಮಾಡುವಂತಹ ಫೋರ್ಸ್ ಫುಲ್ಲಿ ಆಕ್ಟೀವಿಟಿಸ್ ನಡೆದಿಲ್ಲ. ನೇರವಾಗಿ ಮನೆಯ ತಿಜೋರಿ ಬಳಿಯೇ ಹೋಗಿ ಚಿನ್ನಾಭರಣ ದೋಚಿದ್ದಾರೆ. ಹೀಗಾಗಿ ಇದು ಯಾರೋ ಪರಿಚಿತರೇ ನಡೆಸಿರುವ ಕೃತ್ಯದಂತೆ ಕಂಡು ಬಂದಿದ್ದು ಈಗಾಗಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಹಂತಕರ ಚಿತ್ರಗಳು ರಸ್ತೆಯಲ್ಲಿರುವ ಕೆಲ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಆ ದೃಶ್ಯಗಳ ಅನ್ವಯ ಈಗಾಗಲೆ ತನಿಖೆ ಮುಂದುವರೆದಿದೆ. ಈ ಪ್ರಕರಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Next Story

RELATED STORIES