Top

ಕಾಟನ್​ ಪೇಟೆ ಡ್ರಗ್ಸ್​ ಪ್ರಕರಣ: ನಾಪತ್ತೆಯಾಗಿರೋ ಆರೋಪಿಗಳಿಗಾಗಿ ತೀವ್ರ ಹುಡುಕಾಟ - ಸಂದೀಪ್​ ಪಾಟೀಲ್​

ಆರೋಪಿ ಪತ್ತೆಗಾಗಿ ನಮ್ಮ ಅಧಿಕಾರಿಗಳು ಆದಿತ್ಯ ಆಳ್ವಾ ಸಹೋದರಿಯನ್ನು ವಿಚಾರಣೆ ಮಾಡಲಾಗಿದೆ

ಕಾಟನ್​ ಪೇಟೆ ಡ್ರಗ್ಸ್​ ಪ್ರಕರಣ: ನಾಪತ್ತೆಯಾಗಿರೋ ಆರೋಪಿಗಳಿಗಾಗಿ ತೀವ್ರ ಹುಡುಕಾಟ - ಸಂದೀಪ್​ ಪಾಟೀಲ್​
X

ಬೆಂಗಳೂರು: ಆರೋಪಿ ಆದಿತ್ಯ ಆಳ್ವಾ ಪತ್ತೆ ಕಾರ್ಯ ನಾವು ಮಡುತ್ತಿದ್ದೇವೆ. ಬೆಂಗಳೂರಿನಲ್ಲಿ ಆಳ್ವಾ ಮನೆಯ ಶೋಧಕಾರ್ಯ ಮಾಡಿದ್ವಿ ಎಂದು ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್ ಅವರು ಗುರುವಾರ ಹೇಳಿದ್ದಾರೆ.

ಕಾಟನ್​ಪೇಟೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಆರೋಪಿ ಪತ್ತೆಗಾಗಿ ಮುಂಬೈನಲ್ಲಿರು ಆದಿತ್ಯ ಆಳ್ವಾ ಸಹೋದರಿ ಮನೆ ಶೋಧ ಮಾಡಲಾಗಿದೆ. ಕೋರ್ಟ್​ನಿಂದ ಸರ್ಚ್ ವಾರೆಂಟ್ ಪಡೆದು ಇಬ್ಬರು ಇನ್ಸ್ಪೆಕ್ಟರ್​ಗಳು ತೆರಳಿ ಶೋಧ ಮಾಡಿದ್ದಾರೆ. ಆರೋಪಿ ಪತ್ತೆಗಾಗಿ ನಮ್ಮ ಅಧಿಕಾರಿಗಳು ಆದಿತ್ಯ ಆಳ್ವಾ ಸಹೋದರಿಯನ್ನು ವಿಚಾರಣೆ ಮಾಡಲಾಗಿದೆ ಎಂದಿದ್ದಾರೆ.

ನಾಪತ್ತೆಯಾಗಿರೋ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಆಶ್ವಿನ್ ಬೂಗಿಯನ್ನ ಬಂಧನ ಮಾಡಲಾಗಿದೆ. ಸದ್ಯ ಆದಿತ್ಯಾ ಆಳ್ವ ನಾಪತ್ತೆಯಾಗಿದ್ದು, ಮುಂಬೈನಲ್ಲಿ ಅವರ ಸಹೋದರಿ ಮನೆಯಲ್ಲಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಸರ್ಚ್ ವಾರೆಂಟ್ ಪಡೆದು ಅವರ ನಿವಾಸದಲ್ಲಿ ಪರಿಶೀಲನೆ ನಡೆಸಲಾಗಿತ್ತು. ಅವರ ಸಹೋದರಿಯನ್ನ ಸಹ ವಿಚಾರಣೆ ಮಾಡಲಾಗಿದೆ. ಸದ್ಯ ತನಿಖಾ ಹಂತದಲ್ಲಿ ಬೇರೇನೂ ಮಾಹಿತಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.


Next Story

RELATED STORIES