Top

ಬ್ಯಾಂಕ್​ನೊಳಗೆ ನುಗ್ಗಿ ಹತ್ಯೆಗೈದ್ದಿದ್ದ ಆರೋಪಿಗಳ ಮೇಲೆ ಪೊಲೀಸ್​ ಫೈರಿಂಗ್​

ರೌಡಿಶೀಟರ್​ ಬಾಬ್ಲಿಯನನ್ನು ಹಾಡಗಲೇ ಬ್ಯಾಂಕ್​ನೊಳಗೆ ನುಗ್ಗಿ ಕೊಲೆಗೈದಿದ್ದ ಆರೋಪಿಗಳು

ಬ್ಯಾಂಕ್​ನೊಳಗೆ ನುಗ್ಗಿ ಹತ್ಯೆಗೈದ್ದಿದ್ದ ಆರೋಪಿಗಳ ಮೇಲೆ ಪೊಲೀಸ್​ ಫೈರಿಂಗ್​
X

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಪೋಲೀಸರ​ ಗನ್​ ಸದ್ದು ಮಾಡಿದ್ದು, ರೌಡಿಶೀಟರ್​ ಬಾಬ್ಲಿ ಕೊಲೆಯ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರದೀಪ್ ಅಲಿಯಾಸ್​​ ಚೊಟ್ಟೆ ಮತ್ತು ರವಿ ಗುಂಡೇಟು ತಿಂದ ಬಂಧಿತ ಆರೋಪಿಗಳು.

ಆರೋಪಿಗಳು ರೌಡಿಶೀಟರ್​ ಬಾಬ್ಲಿಯನ್ನು ಹಾಡಗಲೇ ಬ್ಯಾಂಕ್​ನೊಳಗೆ ನುಗ್ಗಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಕೋರಮಂಗಲ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೇಗೂರು ಕೆರೆಯ ಬಳಿ ಆರೋಪಿಗಳಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು, ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರದೀಪ್ ಮತ್ತು ರವಿ ಪಿಎಸ್​ಐ ಸಿದ್ದಪ್ಪ ಹಾಗೂ ಎಎಸ್​ಐ ರವೀಂದ್ರ ಎನ್ನುವವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡುಹಾರಿಸಿದ್ದಾರೆ.

Next Story

RELATED STORIES