Top

ಬಿಟ್ ಕಾಯಿನ್​ನಿಂದ ಡ್ರಗ್ ಇಂಪೋರ್ಟ್, ದುಬಾರಿ ಬೆಲೆಗೆ ಸೇಲ್

ಲಾಕ್​ಡೌನ್​ನಲ್ಲಿ 6 ರಿಂದ 10 ರವರೆಗೆ ಮಾತ್ರ ಡ್ರಗ್ ಸೇಲ್..!

ಬಿಟ್ ಕಾಯಿನ್​ನಿಂದ ಡ್ರಗ್ ಇಂಪೋರ್ಟ್, ದುಬಾರಿ ಬೆಲೆಗೆ ಸೇಲ್
X

ಬೆಂಗಳೂರು: ಡ್ರಗ್ ಟೆರರಿಜಂ ದೇಶದಲ್ಲಿ ಅವ್ಯಾಹತವಾಗಿ ಮುಂದುವರಿದಿದೆ. ಮಾದಕವಸ್ತುಗಳನ್ನ ಯಾರ ಅಡೆ ತಡೆ ಇಲ್ಲದೆ ಸಪ್ಲೈ ಮಾಡಿ ದೇಶದ ಯುವಕರನ್ನ ಚಟಕ್ಕೀಡು ಮಾಡಿ ಪ್ರಚೋದಿಸೋದೆ ಈ ಡಾರ್ಕ್ ವೆಬ್ ನ ಮುಖ್ಯ ಉದ್ದೇಶ. ಇಂತಹ ಡೇಂಜರಸ್ ವೆಬ್ ಸೈಟ್ ನಿಂದ ಮತ್ತೊಂದು ಕೃತ್ಯ ಹೊರ ಬಿದ್ದಿದೆ. ಎಂದಿನಂತೆ ಡ್ರಗ್ಸ್ ಕೇಸಲ್ಲಿ ಒಂದಷ್ಟು ಜನರ ಬಂಧನ, ಸೀಜ್ ಕೂಡ ಆಗಿದೆ.

ಸಿಂಥಡಿಕ್ ಡ್ರಗ್ ಒಂದು ಬಾರಿ ತೆಗೆದುಕೊಂಡರೆ ಚಟಕ್ಕೆ ಬಿದ್ದಂತೆಯೇ. ಮಾದಕ ನಶೆಯಿಂದ ತನ್ನತ್ತ ಸಂಪೂರ್ಣವಾಗಿ ಸೆಳೆದುಕೊಂಡು ತನ್ನ ದಾಸರನ್ನಾಗಿ ಮಾಡುತ್ತೆ. ಅಂತಹ ಸಿಂಥಟಿಕ್ ಡ್ರಗ್​ಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಸಿಸಿಬಿ ಬಂಧಿಸಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗದ ಈ ಡ್ರಗ್ ಗಳು ಬಂದಿದ್ದು ಒನ್ಸ್ ಅಗೇನ್ ಇದೇ ಡಾರ್ಕ್ ವೆಬ್​ನಿಂದ. ಡಾರ್ಕ್ ವೆಬ್​ನಿಂದ ತರಿಸಿಕೊಂಡು ದುಬಾರಿ ರೇಟಿಗೆ ಮಾರಾಟ ಮಾಡುತ್ತಿದ್ದ ಬಯಾನ್ ಅನ್ಸಾರಿ, ಅರ್ನಾಲ್ಡ್ ಡಿಸೋಝಾ, ಅನಿರುದ್ ವೆಂಕಟಾಚಲಂ, ಕನಿಷ್ಕ್ ರೆಡ್ಡಿ ಮತ್ತು ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಲ್ಲಿ ಬಯಾನ್ ಅನ್ಸಾರಿ ಎಂಬಾತ ಶ್ರೀರಂಗಪಟ್ಟಣದ ಬಳಿ ರೆಸಾರ್ಟ್ ಮಾಡಿಕೊಂಡಿದ್ದ. ಸಾಕಷ್ಟು ಇಂಟೀರಿಯತ್ ಆದ ಕಾರಣ ತನ್ನ ಡ್ರಗ್ ದಂಧೆಗೆ ರೆಸಾರ್ಟ್ ಸಾಕಷ್ಟು ಸೇಫ್ ಆಗಿತ್ತು. ನಗರದಲ್ಲಿ ಸಿಕ್ಕಿ ಬೀಳುವವರಗೂ ಈತನ ದಂಧೆ ಹೊರ ಬಂದೇ ಇರಲಿಲ್ಲ. ಆ ರೆಸಾರ್ಟ್​ನಲ್ಲಿಯೇ ಡ್ರಗ್​ಗಳನ್ನ ಸ್ಟಾಕ್ ಮಾಡಿ ಅಗತ್ಯಕ್ಕೆ ತಕ್ಕಂತೆ ಬೇರೆಡೆ ಕಳಿಸುತ್ತಿದ್ದ. ಇನ್ನು ಈತ ಡ್ರಗ್ ತರಿಸಿಕೊಳ್ತಿದ್ದೇ ಡಾರ್ಕ್ ವೆಬ್​ನ ಮುಖಾಂತರ. ಡಾರ್ಕ್ ವೆಬ್​ಬಿಟ್ ಕಾಯಿನ್ ಇನ್ವೆಷ್ಟ್ ಮಾಡಿ Wicr-Me ಎಂಬ ಆಪ್​ನ ಲಿಂಕ್ ಪಡೆಯುತ್ತಿದ್ದ. ಆ ಆ್ಯಪ್​ನಲ್ಲಿ ಯಾವ ಯಾವ ಡ್ರಗ್ ಬೇಕೋ ಅದನ್ನ ತರಿಸಿಕೊಳ್ತಿದ್ದ. ಇನ್ನು ಬಯಾನ್ ಅನ್ಸಾರಿ ಆಂಡ್ ಟೀಂ ಕನ್ನಮಂಗಲ ನೈಜೀರಿಯನ್ಪ್ರಜೆ ಜೊತೆ ಸೇರಿ ಡ್ರಗ್ ಮಾರಾಟ ಮಾಡುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ರು. ತಕ್ಷಣ ಎನ್​ಕೌರಿ ಮಾಡಿ ಸರ್ಚ್ ಮಾಡಿದಾಗ ಇಬರ ಬಳಿ ಇದ್ದಿದ್ದು ಬರೋಬ್ಬರಿ 30 ಲಕ್ಚ ಸಿಂಥಟಿಕ್ ಡ್ರಗ್. ಡ್ರಗ್ ವ್ಯಸನಿಗಳಿಂದ ತುಂಬಾ ಬೇಡಿಕೆ ಇರುವ 150 ಎಲ್​ಎಸ್​ಡಿ ಪೇಪರ್ ಮತ್ತು 119 ಎಂಡಿಎಂಎಂ ಟ್ಯಾಬ್ಲೆಟ್​ಗಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನೋಂದು ವಿಚಾರ ಅಂದ್ರೆ ಲಾಕ್​ಡೌನ್ ನಲ್ಲಿ ಇವರ ರೂಲ್ಸು ಸ್ಟ್ರಿಕ್ಟ್ ಅಂತೆ. ಲಾಲ್​ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನ ಖರೀದಿಸಲು ಅವಕಾಶ ಕೊಟ್ಟಿದ್ರಲ್ಲ ಅದೇ ಸಮಯದಲ್ಲಿ ಮಾತ್ರ ಇವರು ಡ್ರಗ್​ಗಳನ್ನ ಮಾರಾಟ ಮಾಡುತ್ತಿದರು. ಸಮಯ ಮೀರಿದ್ರು ಡ್ರಗ್ಸ್​​ಗಾಗಿ ಬಂದವರನ್ನ ವಾಪಾಸ್ ಕಳಿಸುತಿದ್ರಂತೆ.

ಇನ್ನು ಡಾರ್ಕ್ ವೆಬ್ ವಿಚಾರಕ್ಕೆ ಬಂದ್ರೆ ಈ ವೆಬ್ ಸೈಟ್ ಕ್ರಿಮಿನಲ್​ಗಳಿಗೆಂದೇ ಮಾಡಲ್ಪಟ್ಟಿರುವಂತದ್ದು. ಅನೇಕ ಕ್ರಿಮಿನಲ್ ಚಟುವಟಿಕೆ ಜೊತೆಗೆ ಅಪರಾಧ ಮಾಡುವ ವೇಳೆ ಸಿಕ್ಕಿಬಿದ್ದರೆ ಎಸ್ಕೇಪ್ ಆಗೋದು ಹೇಗ ಎಂಬುದರ ಬಗ್ಗೆಯೂ ಮಾಹಿತಿ ನೀಡುತ್ತಂತೆ. ಸದ್ಯ ಸಿಸಿಬಿ ಅಧಿಕಾರಿಗಳು ಕಾಡುಗೋಡಿಯಲ್ಲಿ ದೂರು ದಾಖಲಿಸಿ ಆರೋಪಿಗಳನ್ನ ತಮ್ಮ ಕಷ್ಟಡಿಗೆ ಪಡೆದಿದ್ದಾರೆ.

Next Story

RELATED STORIES