Top

ಪತ್ನಿಯನ್ನೇ ಹೊರ ಹಾಕಿ ವಿಕೃತಿ ಮೆರೆದ ಪತಿ..!

'ಮಗುವಿಗೆ ನೀಲಿ ಕಣ್ಣು .. ಮಗು ನನ್ನದಲ್ಲ'ನನ್ನದಲ್ಲ'

ಪತ್ನಿಯನ್ನೇ ಹೊರ ಹಾಕಿ ವಿಕೃತಿ ಮೆರೆದ ಪತಿ..!
X

ಬೆಂಗಳೂರು: ಆಕೆ ಹತ್ತಾರು ಕನಸುಗಳನ್ನ ಹೊತ್ತು ಹೆತ್ತವರ ಇಚ್ಚೆಯಂತೆ ತೋರಿಸಿದ ಹುಡುಗನನ್ನ ವರಿಸಿದ್ಲು. ಮದುವೆಯಾದ ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ನನಗೆ ನೀನೆ ಲೈಫು ಎಂದಿದ್ದ ಪತಿರಾಯ ನಂತರದಲ್ಲಿ ಸೈಕೋಪಾಥ್ ಆಗ್ಬಿಟ್ಟಿದ್ದ. ಟ್ರಿಪ್ ಹೆಸರಲ್ಲಿ ಹೆಂಡ್ತಿಯಲ್ಲಿ ಊಟಿಗೆ ಕರೆದೊಯ್ದಿದ್ದವನು ಗೆಳೆಯನೊಂದಿಗೆ ಮಲಗು ಅಂತ ಪತ್ನಿಯನ್ನ ಪೀಡಿಸಲಿಕ್ಕೆ ಶುರು ಮಾಡಿದ್ದನು.

ಮೇಲ್ನೋಟಕ್ಕೆ ಒಂದೊಳ್ಳೆ ಜೊಡಿ ಇದು. ಆದರೆ, ಆ ಪತಿಯ ಮದದ ಹಿಂದೆ ಕಿರಾತಕನೊಬ್ಬನಿದ್ದಾನೆ ಅಂತ ಯಾರಿಗೂ ಅನಿಸೋದೇ ಇಲ್ಲ. ಆದರೆ, ಮದುವೆಯಾದ ಕೆಲ ದಿನಗಳಲ್ಲೆ ಪಾಪಿ ಪತಿ ತನ್ನ ಅಸಲಿ ವರಸೆಯನ್ನ ತೋರಿಸಲಿಕ್ಕೆ ಶುರು ಮಾಡಿಬಿಟ್ಟಿದ್ದ. ನಗರದ ಬನಶಂಕರಿಯ ಯುವತಿ 2018ರ ಜನವರಿಯಲ್ಲಿ ಬಿಟಿಎಂ ಲೇಔಟ್ ನಿವಾಸಿಯಾವಿರೋ ವಸೀಂ ಶರೀಫ್ ಎಂಬಾತನನ್ನ ವಿವಾಹವಾಗಿದ್ಲು. ಮದುವೆಯಾದ ಹೊರತರಲ್ಲಿ ಚೆನ್ನಾಗಿದ್ದ ಆರೋಪಿ ನಂತರದ ದಿನಗಳಲ್ಲಿ ಪತ್ನಿಗೆ ಕಪಲ್ ಸೆಕ್ಸ್​ಗೆ ಒತ್ತಾಯಿಸಿದ್ದಾನೆ. ಮೊದಲಿಗೆ ಪತ್ನಿಯನ್ನ ಗೋವಾಗೆ ಕರೆದೊಯ್ದಿರೋ ಆರೋಪಿ ವಸೀಂ ಪತ್ನಿಗೆ ಮಧ್ಯ ಸೇವಿಸುವಂತೆ ಒತ್ತಾಯಿಸಿದ್ದಾನೆ ಇದಕ್ಕೆ ಒಪ್ಪದಿದ್ದಾನೆ ಹಲ್ಲೆ ಮಾಡಿ ವಾಪಸ್ ಬೆಂಗಳೂರಿಗೆ ಕರೆತಂದಿದ್ದಾನೆ. ನಂತರ ಊಟಿಗೆ ಕರೆದೊಯ್ದಿರೋ ಆರೋಪಿ, ಊಟಿಯ ಖಾಸಗಿ ಹೋಟೆಲ್ ನಲ್ಲಿ ನಾನು ನನ್ನ ಗೆಳೆಯನ ಪತ್ನಿ ಜೊತೆ ಸೆಕ್ಸ್ ಮಾಡ್ತೀನಿ. ನೀನು ನನ್ನ ಗೆಳೆಯನ ಜೊತೆ ಸೆಕ್ಸ್ ಮಾಡು ಅಂತ ಪತ್ನಿಗೆ ಪೀಡಿಸಿದ್ದಾನೆ.

ಇಷ್ಟೆಲ್ಲ ಸಾಲದ್ದಕ್ಕೆ ಮನೆಯಲ್ಲೆ ಎಣ್ಣೆ ಪಾರ್ಟಿ ಮಾಡ್ತಿದ್ದ ಸೈಕೋ ಪತಿ ವಸೀಂ, ತನ್ನ ಗೆಳೆಯರನ್ನ ಮನೆಗೆ ಪಾರ್ಟಿಗೆ ಇನ್ವೈಟ್ ಮಾಡಿ ಪತ್ನಿಯ ಕೈಯ್ಹಲ್ಲಿ ಡ್ರಿಂಕ್ಸ್ ಸಪ್ಲೈ ಮಾಡಿದ್ದಾನೆ. ನಂತರ ಫ್ರೆಂಡ್ಸ್ ಬಂದಿದ್ದಾರೆ ಅವರ ಜೊತೆ ಸೆಕ್ಸ್ ಮಾಡು ಅಂತ ಪೀಡಿಸಲಿಕ್ಕೆ ಶುರು ಮಾಡಿದ್ದಾನೆ. ಪತ್ನಿಗೆ ಎರಡು ಬಾರಿ ಅಬಾರ್ಷನ್ ಮಾಡಿಸಿರೋ ಆರೋಪಿ ವಸೀಂ, ಮೂರನೇ ಬಾರಿ ಹೆಣ್ಣು ಮಗು ಜನನವಾದಾಗ ಮಗುವಿಗೆ ನೀಲಿ ಕಣ್ಣೀದೆ. ಇದು ನನಗೆ ಹುಟ್ಟಿರೋ ಮಗುವನ್ನ ಅಂತ ಪತ್ನಿಯನ್ನ ಮನೆಯಿಂದ ಹೊರಹಾಕಿ ವಿಕೃತಿ ಮೆರೆದಿದ್ದಾನೆ.

ಸದ್ಯ ತನಗಾದ ಅನ್ಯಾಯದ ಬಗ್ಗೆ ನೊಂದ ಮಹಿಳೆ ಪೂರ್ವ ವಲಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿರೋ ದೂರಿನನ್ವಯ ಆರೋಪಿ ಸೈಕೋ ಪತಿಯ ಮಾಹಿತಿ ಕಲೆಹಾಕಿರೋ ಪೊಲೀಸರು ವಿಚಾರಣೆಗೆ ಹಾಜರಾಗಲಿಕ್ಕೆ ನೋಟಿಸ್ ಕೊಡಲು ಸಿದ್ಧತೆ ನಡೆಸಿದ್ದಾರೆ.

Next Story

RELATED STORIES