ಟಿಕ್​ಟಾಕ್​ ಸ್ಟಾರ್​ನನ್ನ ಗುಂಡಿಟ್ಟು ಕೊಲೆ ಮಾಡಿದ ದುಷ್ಕರ್ಮಿಗಳು

ನವದೆಹಲಿ: ಟಿಕ್​ಟಾಕ್​ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಬಟ್ಟೆ ಹೆಸರು ಮಾಡಿದ್ದ 24 ವರ್ಷದ ಮೊಹೀತ್ ಮೊರ್ ಎಂಬಾತನನ್ನು ಮಂಗಳವಾರ ದೆಹಲಿ ಬಳಿ ಮೂವರು ಅನಾಮಿಕರು ಗುಂಡು ಹಾರಿಸಿ ಕೊಲೆ ಮಾಡಿರುವ ದೃಶ್ಯಸಿಸಿಟಿವಿಯಲ್ಲಿ ಸೆರೆಯಾಗಿದೆ. ಟಿಕ್​ಟಾಕ್​ ಸ್ಟಾರ್ ಮೊಹೀತ್ ಮೊರ್ ಸುಮಾರು 5... Read more »

ಅರುಣಾಚಲ ಪ್ರದೇಶದಲ್ಲಿ ಉಗ್ರರ ಅಟ್ಟಹಾಸ – ಶಾಸಕರು ಸೇರಿ 8 ಮಂದಿ ಸಾವು

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸ್ಥಳೀಯ ಶಾಸಕ ಹಾಗೂ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎನ್‌ಪಿಪಿ ಅಭ್ಯರ್ಥಿ ತಿರಾಂಗ್ ಅಬೋಹ್‌ರನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಬೋಗಾಪನಿ ಎಂಬಲ್ಲಿ ನ್ಯಾಷನಲ್ ಸೋಷಿಯಲಿಸ್ಟ್‌ ಕೌನ್ಸಿಲ್ ಆಫ್ ನಾಗಲ್ಯಾಂಡ್​ನ ಉಗ್ರರು ಈ ದಾಳಿ... Read more »

ಪುಲ್ವಾಮದಲ್ಲಿ ಗುಂಡಿನ ದಾಳಿ ಒಬ್ಬ ಯೋಧ ಹುತಾತ್ಮ, ಇಬ್ಬರು ಉಗ್ರರರು ಔಟ್​..!

ಜಮ್ಮು ಮತ್ತು ಕಾಶ್ಮೀರ: ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಇಂದು ಮುಂಜಾನೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಭದ್ರತಾ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಸಿಆರ್‌ಪಿಎಫ್‌, ರಾಷ್ಟ್ರೀಯ ರೈಫಲ್ಸ್‌ ಹಾಗೂ ವಿಶೇಷ ಕಾರ್ಯಾಚರಣೆ ತಂಡಗಳು ನಡೆಸುತ್ತಿದ್ದ ಶೋಧ... Read more »

ಸಾರ್ವಜನಿಕವಾಗಿಯೇ ಹೊಡೆದಾಡಿಕೊಂಡ ರಾಜಕೀಯ ನಾಯಕರು

ನವದೆಹಲಿ: ತೆಲಂಗಾಣದಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ಇಬ್ಬರು ನಾಯಕರು ಬಹಿರಂಗವಾಗಿಯೇ ಹೊಡೆದಾಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಟರ್ ಮೀಡಿಯೇಟ್ ಫಲಿತಾಂಶದಲ್ಲಾದ ಪ್ರಮಾದ ಕುರಿತು ಪ್ರತಿಭಟನೆ ನಡೆಸುತ್ತಿದ್ದಾಗ ಈ ಮಾರಾಮಾರಿ ನಡೆದಿದೆ. ಹನುಮಂತ ರಾವ್ ಮತ್ತು ನಾಗೇಶ್ ಮುಂದಿರಾಜ್ ಸಾರ್ವಜನಿಕವಾಗಿಯೇ ಕೈ ಕೈ... Read more »

ಭಾರತ ವಾಯುಪ್ರದೇಶದ ಗಡಿ ಉಲ್ಲಂಘಿಸಿದ ವಿಮಾನ ಇಳಿಸಿದ ಐಎಎಫ್​

ನವದೆಹಲಿ: ಅಮೆರಿಕಾದ ಜಾರ್ಜಿಯಾ ಸರಕು ಸಾಗಣೆ ವಿಮಾನವೊಂದು ಭಾರತದ ವಾಯುಪ್ರದೇಶ ಗಡಿ ಉಲ್ಲಂಘಿಸಿದೆ ಎಂದು ವರದಿ ಆಗಿದೆ. ಟಿಬಿಲಿಸಿಯಿಂದ ಪಾಕಿಸ್ತಾನದ ಕರಾಚಿ ಮಾರ್ಗವಾಗಿ ದೆಹಲಿಗೆ ಬರುತಿತ್ತು. ಈ ಸಂದರ್ಭದಲ್ಲಿ ಕರಾಚಿಯಿಂದ ಮಾರ್ಗ ಬದಲಿಸಿ ಗುಜರಾತ್‌ನ ಅಪರಿಚಿತ ಸ್ಥಳದ ಮೂಲಕ ಭಾರತೀಯ ವಾಯುಪ್ರದೇಶ ಪ್ರವೇಶಿಸಿದೆ. ಇದನ್ನು... Read more »

ಪ್ರಧಾನಿ ಮೋದಿ, ಬಂಗಾಳ ದೀದಿ ಜಗಳ- ಬೀದಿಗೆ ಬಂತು ರಂಪಾಟ, ನಿಲ್ಲುವುದು ಡೌಟ್​​​​​​..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾರ್ನಜಿ ಇವರಬ್ಬರ ಜಗಳ ಈಗ ಬೀದಿರಂಪಾಟ ಆಗಿದೆ. ಒಬ್ಬರಿಗಿಂತ ಒಬ್ಬರು ವ್ಯಾಘ್ರವಾಗ್ತಿದ್ದಾರೆ. ಇದು ಮೋದಿ ಮಾಡಿರುವ ಆರೋಪಕ್ಕೆ ದೀದಿ ಅಸಾಮಾನ್ಯ ಸವಾಲು ಹಾಕಿದ್ದಾರೆ. ಮೋದಿ – ದೀದಿ ಬೀದಿಜಗಳಕ್ಕೆ ಕೊನೆಯೇ ಇಲ್ಲದಂತಾಗಿದೆ.... Read more »

ಈ ಬಾರಿ ಐಪಿಎಲ್​​ನಲ್ಲಿ ಭರ್ಜರಿಯಾಗಿ ಧೂಳ್​​ ಎಬ್ಬಿಸಿದ ಕಲಿಗಳು..!

ನವದೆಹಲಿ: ಐಪಿಎಲ್, ಎಂದಾಕ್ಷಣ ನೆನಪಿಗೆ ಬರೋದು ಹೊಡಿಬಡಿ ಆಟ, ಸಿಕ್ಸರ್​, ಬೌಂಡರಿ ಬಾರಿಸೋ ಆಟಗಾರರು. ತಂಡ ಸೋಲುವ ಹಂತದಲ್ಲಿ ಎದುರಾಳಿ ವಿಕೆಟ್​ ಕಿತ್ತು ನೆರವಿಗೆ ಬರೋ ಬೌಲರ್ಸ್​ಗಳು. ಸ್ಲಾಗ್​ ಓವರ್ಸ್​ನಲ್ಲಿ ತಂಡದ ಮೊತ್ತವನ್ನ ಹಿಗ್ಗಿಸುವ ಪವರ್​ ಹಿಟ್ಟರ್ಸ್, ಇವೆರೆಲ್ಲಾ ಆಯಾ ತಂಡಗಳಿಗೆ ಆಪಾದ್ಬಾಂದವರು. ಆದರೆ,... Read more »

ಬಿಜೆಪಿ ಶಾಸಕ ಶ್ರೀರಾಮುಲುಗೆ ಕಾಂಗ್ರೆಸ್​​ ಮುಖಂಡರು ಶಾಕ್​..!

ಧಾರವಾಡ: ಬಿಜೆಪಿ ಶಾಸಕ ಶ್ರೀರಾಮುಲು ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್​​ ಮುಖಂಡರು ಧಾರವಾಡ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ದೂರು ಸಲ್ಲಿಸಿದ್ದಾರೆ. ದೂರು ನೀಡಲು ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್​​ ಮುಖಂಡರು ಚುನಾವಣಾ ಕಚೇರಿಗೆ ಆಗಮಿಸಿ ದೂರು... Read more »

‘ಮೋದಿ ದುರ್ಯೋಧನನಂತೆ ದುರಹಂಕಾರಿ’- ಪ್ರಿಯಾಂಕಾ ಗಾಂಧಿ

ನವದೆಹಲಿ: ಮಹಾಭಾರತದ ವಿಲನ್ ದುರ್ಯೋಧನನಿಗೆ ಮೋದಿ ಹೊಲಿಕೆ ಮಾಡಿ ಟಾಂಗ್‌ ಕೊಟ್ಟಿದ್ದಾರೆ ಪ್ರಿಯಾಂಕಾ. ಪ್ರಸಿದ್ಧ ಕವಿ ರಾಮ್‌ಧಾರಿ ಸಿಂಗ್ ದಿನಕರ್ ಕವಿತೆಯ ಸಾಲು ಉಲ್ಲೇಖಿಸಿದ್ದಾರೆ. ವಿನಾಶ ಹತ್ತಿರ ಬರುತ್ತಿದ್ದಂತೆ ಮನುಷ್ಯ ವಿವೇಕ ಕಳೆದುಕೊಳ್ತಾನೆ ಎಂಬ ಸಾಲನ್ನೂ ಹೇಳಿದ್ದಾರೆ. ಆದರೆ, ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.... Read more »

‘ಸಿಜೆಐ ರಂಜನ್​ ಗೊಗೊಯಿ ಅವರಿಗೆ ಕ್ಲೀನ್​​ಚಿಟ್’ -​ ತನಿಖೆ ವರದಿ ನೀಡಲು ಮಹಿಳೆ ಒತ್ತಾಯ

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರಿಗೆ ನ್ಯಾಯಾಲಯದ ಆಂತರಿಕ ಸಮಿತಿಯು ಕ್ಲೀನ್‌ ಚಿಟ್‌ ನೀಡಿರುವುದರಿಂದ ಆಕ್ರೋಶಗೊಂಡಿರುವ ದೂರುದಾರ ಮಹಿಳೆ, ಸಮಿತಿಯ ತನಿಖಾ ವರದಿಯ ಪ್ರತಿಯನ್ನು ತಮಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ತನಿಖಾ ವರದಿಯನ್ನು ನೀಡದೇ ಇರುವುದು... Read more »

‘ರಂಜನ್​ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಆಧಾರರಹಿತ’- ಆಂತರಿಕ ಸಮಿತಿ

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ವಿರುದ್ಧ ನ್ಯಾಯಾಲಯದ ಮಾಜಿ ಮಹಿಳಾ ನೌಕರ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಆಂತರಿಕ ತನಿಖಾ ಸಮಿತಿ ಆರೋಪ ಆಧಾರರಹಿತ ಎಂದು ಹೇಳಿದೆ. ನ್ಯಾಯಾಧೀಶರಾದ ಎಸ್.ಎ. ಬೋಬ್ಡೆ ತನಿಖಾ ಸಮಿತಿಯ... Read more »

ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ- 13 ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ

ನವದೆಹಲಿ: ಸೆಂಟ್ರಲ್​ ಬೋರ್ಡ್ ಆಫ್​ ಸೆಕೆಂಡರಿ​ ಎಜುಕೇಷನ್ಸ್​​​ (ಸಿಬಿಎಸ್​ಇ) 10ನೇ ತರಗತಿ ಫಲಿತಾಂಶವಿಂದು ಪ್ರಕಟವಾಗಿದ್ದು cbseresults.nic.in ಮತ್ತು cbse.nic.in ವೈಬ್​ ಸೈಟ್​ನಲ್ಲಿ ನೋಡಬಹುದು. ಮೊದಲ ಸ್ಥಾನ ಪಡೆದ 13 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಡೆಹ್ರಾಡೂನ್‌ ಮೂಲದವರಾಗಿದ್ದಾರೆ. ಇನ್ನುಳಿದವರು ಪಂಚಕುಲಾ, ಅಜ್ಮೇರ್, ಪ್ರಯಾಗ್‌ರಾಜ್ ಮತ್ತು ತ್ರಿವೇಂಡ್ರಂ... Read more »

‘ಫನಿ’ ಬಗ್ಗೆ ಸುಳಿವು, ಭಾರತೀಯ ಹವಾಮಾನ ಇಲಾಖೆಯ ಕಾರ್ಯಕ್ಕೆ ವಿಶ್ವಸಂಸ್ಥೆ ಪ್ರಶಂಸೆ

ನವದೆಹಲಿ: ಚಂಡಮಾರುತ ಬಂದು ಹೋದ ಬಳಿಕ ಒಡಿಶಾ ಕಸದ ತಿಪ್ಪೆಯಂತಾಗಿದೆ. 12 ಜಿಲ್ಲೆಗಳ ಜನರ ಬದುಕು ಬೀದಿಗೆ ಬಿದ್ದಿಗೆ. ಹೊಸ ಬದುಕು ಕಟ್ಟಿಕೊಳ್ಳಲು ಅವರ ಬಳಿ ಏನೂ ಉಳಿದಿಲ್ಲ. ಎಲ್ಲವೂ ಚಂಡಮಾರುತದ ಪಾಲಾಗಿದೆ. ಇತ್ತ ಚಂಡಮಾರುತ ಬಗ್ಗೆ ನಿಖರ ಮಾಹಿತಿ ನೀಡಿದ ಭಾರತೀಯ ಹವಾಮಾನ... Read more »

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಕಿಡಿಗೇಡಿಯಿಂದ ಕಪಾಳಮೋಕ್ಷ

ಹೊಸದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಯಾಕೋ ಗ್ರಹಚಾರ ಕೆಟ್ಟಿರುವಂತೆ ಕಾಣ್ತಿದೆ. ಪದೇ ಪದೇ ಅವರ ಮೇಲೆ ಹಲ್ಲೆ ಆಗ್ತಿದೆ. ಇಂದು ಕೂಡ ಕಾಪಳಮೋಕ್ಷ ಆಗಿದೆ. ಕಿಡಿಗೇಡಿಯ ಈ ಕೃತ್ಯ, ಸಾಂವಿಧಾನಿಕ ಹುದ್ದೆಯ ಘನತೆಗೆ ಚ್ಯುತಿ ತಂದಿದೆ. ಅರವಿಂದ ಕೇಜ್ರಿವಾಲ್‌ ಹೋರಾಟದ ಮೂಲಕವೇ ದೆಹಲಿ ಗದ್ದುಗೆ... Read more »

ಪೆಟ್ರೋಲ್​ ಟ್ಯಾಂಕ್​ ಮೇಲೆ ಯುವತಿ ಕೂರಿಸಿಕೊಂಡು ಬೈಕ್​ ರೈಡಿಂಗ್​, ವಿಡಿಯೊ ವೈರಲ್​​

ನವದೆಹಲಿ: ಯುವಕನೊರ್ವ ಯುವತಿಯನ್ನು ಪಲ್ಸರ್​ ಬೈಕ್​ನ ಪೆಟ್ರೋಲ್​ ಟ್ಯಾಂಕ್​ ಮೇಲೆ ಕೂಡಿಸಿಕೊಂಡು ಅಡ್ಡದಿಡ್ಡಿ ವಾಹನ ಸವಾರಿ ಮಾಡಿದಲ್ಲದೇ, ಸಂಚಾರಿ ನಿಯಮ ಕೂಡ ಉಲ್ಲಂಘಿಸಿದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ಯುವಕ-ಯುವತಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. #Rajouri garden motor cycle... Read more »

‘ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧದ ತೆರೆವು ಇಲ್ಲ’- ಸುಪ್ರೀಂಕೋರ್ಟ್

ನವದೆಹಲಿ: ಬಂಡಿಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರಿಕೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಇದೆ. ಬಂಡೀಪುರದ ಮೂಲೆಹೊಳೆ ಮೂಲಕ ಕೇರಳ ರಾಜ್ಯಕ್ಕೆ ರಾತ್ರಿ ಸಂಚಾರ ಮುಕ್ತ ಮಾಡುವಂತೆ ಮನವಿ ಮಾಡಿದ್ದ ಕೇರಳ ಸರ್ಕಾರಕ್ಕೆ ಮುಖಭಂಗವಾಗಿದೆ.... Read more »