Top

ಸಿಲಿಕಾನ್ ಸಿಟಿಯಲ್ಲಿ 10 ಲಕ್ಷದ ಗಡಿದಾಟುತ್ತೆ ಕೊವೀಡ್​ 19?

ನಗರದಲ್ಲಿ ಈಗಾಗಲೇ ಎರಡೂ ವರೆ ಲಕ್ಷ ಸೋಂಕಿನ ಸಂಖ್ಯೆ ದಾಟಿರೋ ಕೊರೋನಾ 10 ಲಕ್ಷದ ಗಡಿದಾಟುವ ಆತಂಕ ಈಗ ಆರಂಭವಾಗಿದೆ.

ಸಿಲಿಕಾನ್ ಸಿಟಿಯಲ್ಲಿ 10 ಲಕ್ಷದ ಗಡಿದಾಟುತ್ತೆ ಕೊವೀಡ್​ 19?
X

ಬೆಂಗಳೂರು: ಕೊರೋನಾ ಕಾಲಿಟ್ಟ ಆರಂಭದಲ್ಲಿ ದೇಶದಲ್ಲೇ ಬೆಂಗಳೂರು ಮೆಚ್ಚುಗೆ ಗಳಿಸಿತ್ತು. ವೂಹಾನ್ ವೈರಸ್ ಕಟ್ಟಿಹಾಕುವಲ್ಲಿ ಸಿಲಿಕಾನ್ ವ್ಯಾಲಿ ಸಕ್ಸಸ್ ಕಂಡಿತ್ತು. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ನಾಗಾಲೋಟಕ್ಕಿಳಿದಿದೆ. ನಗರದಲ್ಲಿ ಈಗಾಗಲೇ ಎರಡೂ ವರೆ ಲಕ್ಷ ಸೋಂಕಿನ ಸಂಖ್ಯೆ ದಾಟಿರೋ ಕೊರೋನಾ 10 ಲಕ್ಷದ ಗಡಿದಾಟುವ ಆತಂಕ ಈಗ ಆರಂಭವಾಗಿದೆ.

ವೂಹಾನ್ ವೈರಸ್ ಬೆಂಗಳೂರಿನಲ್ಲಿ ಆರಂಭದ ದಿನಗಳಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ದೇಶದ ಇತರೆ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಅಬ್ಬರಿಸಿ ಆರ್ಭಟಿಸಿದ್ದ ಚೀನೀ ವೈರಸ್ ಬೆಂಗಳೂರಿನಲ್ಲಿ ತನ್ನ ನಿಜ ಆಟ ತೋರಿರಲಿಲ್ಲ. ಆದರೆ, ದೇಶದಲ್ಲಿ ಬೇರೆ ನಗರಗಳಲ್ಲಿ ಸೋಂಕು ಇಳಿಯುತ್ತಿರೋ ಈ ದಿನಗಳಲ್ಲಿ ಬೆಂಗಳೂರಿನಲ್ಲಿ ಮಾತ್ರ ಕೋರೋನಾ ಮಿತಿ ಮೀರಿ ಹಬ್ಬುತ್ತಿದೆ. ಸದ್ಯ ನಗರದಲ್ಲಿ ಇದುವರೆಗೆ 2,67,362 ಮಂದಿಗೆ ಸೋಂಕು ತಗುಲಿದೆ. ಇದಿಷ್ಟೇ ಆಗಿದರೆ ಅಷ್ಟೊಂದು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇರ್ಲಿಲ್ಲ. ಆದರೆ, ಈಗ ಬಿಬಿಎಂಪಿ ನೀಡಿರೋ ದಾಖಲೆ ಇದ್ಯಲ್ಲ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸುವಂತಿದೆ. ನಿಜ ಸದ್ಯ ಬೆಂಗಳೂರಿನಲ್ಲಿ 16,22,788 ಮಂದಿ ಪ್ರಾಥಮಿಕ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದವರಾಗಿದ್ದು ಕ್ವಾರಂಟೈನ್​ನಲ್ಲಿದ್ದಾರೆ.

ವಲಯವಾರು ಕ್ವಾರಂಟೈನ್ ನಲ್ಲಿರೋರ ಸಂಖ್ಯೆ

ಸೌಥ್ ಝೋನ್ - 3,64,839 ಸಂಪರ್ಕಿತರು

ಪ್ರೈಮರಿ - 1,11,570

ಸೆಕೆಂಡರಿ - 2,53,269

ವೆಸ್ಟ್ ಝೋನ್ - 2,52,169 ಸಂಪರ್ಕಿತರು

ಪ್ರೈಮರಿ - 1,16,511

ಸೆಕೆಂಡರಿ - 1,35,658

ಈಸ್ಟ್ ಝೋನ್ - 2,24,069 ಸಂಪರ್ಕಿತರು

ಪ್ರೈಮರಿ - 1,17,516

ಸೆಕೆಂಡರಿ - 1,06,553

ಬೊಮ್ಮನಹಳ್ಳಿ - 2,15,697 ಸಂಪರ್ಕಿತರು

ಪ್ರೈಮರಿ - 1,08,645

ಸೆಕೆಂಡರಿ - 1,07,052

ಆರ್.ಆರ್.ನಗರ - 1,87,990 ಸಂಪರ್ಕಿತರು

ಪ್ರೈಮರಿ - 91,984

ಸೆಕೆಂಡರಿ - 96,006

ಮಹದೇವಪುರ - 1,63,007 ಸಂಪರ್ಕಿತರು

ಪ್ರೈಮರಿ - 90,633

ಸೆಕೆಂಡರಿ - 72,344

ಯಲಹಂಕ - 1,08,530 ಸಂಪರ್ಕಿತರು

ಪ್ರೈಮರಿ - 51,338

ಸೆಕೆಂಡರಿ - 57,192

ದಾಸರಹಳ್ಳಿ - 1,06,487 ಸಂಪರ್ಕಿತರು

ಪ್ರೈಮರಿ - 53,115

ಸೆಕೆಂಡರಿ - 53,272

ಬೆಂಗಳೂರಿನ 8 ವಲಯಗಳಲ್ಲಿ ಬರೋಬ್ಬರಿ 16 ಲಕ್ಷದ 22 ಸಾವಿರದ 788 ಮಂದಿ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದವರಿದ್ದಾರೆ. ಈ ಪೈಕಿ 7,41,342 ಮಂದಿ ಪ್ರೈಮರಿ ಕಾಂಟಾಕ್ಟ್ ಹೊಂದಿದ್ದಾರೆ. ಇನ್ನು 8 ಲಕ್ಷದ 81,446 ಮಂದಿ ಸೆಕೆಂಡರಿ ಕಾಂಟಾಕ್ಟ್ ಹೊಂದಿದವರಿದ್ದಾರೆ. ಈ ಕ್ವಾರಂಟೈನ್ ನಲ್ಲಿರೋ ಸಂಖ್ಯೆಯನ್ನ ನೋಡಿದ್ರೆ ನಗರದ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟುತ್ತಾ ಅನ್ನೋ ಆತಂಕ ಶುರುವಾಗಿದೆ. ಇದರ ಮಧ್ಯೆ ಬಿಬಿಎಂಪಿ ಕರೋನಾ ಟೆಸ್ಟ್ ಸಂಖ್ಯೆಯನ್ನೂ 35 ರಿಂದ 38 ಸಾವಿರದ ವರೆಗೂ ಏರಿಸಿದೆ. ಪ್ರತಿದಿನ ಪಾಸಿಟಿವ್ ಬರೋ ಪ್ರಮಾಣದ 10 ಪಟ್ಟು ಹೆಚ್ಚು ಕೊರೋನಾ ಟೆಸ್ಟ್ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಇನ್ನು ಬೆಂಗಳೂರಿನಲ್ಲಿ ಶೇಕಡಾ 55 ರಷ್ಟು ಮಂದಿ ಹೋಂ ಐಸೋಲೇಷನ್ ನಲ್ಲಿದ್ದು 45 ರಷ್ಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಬೆಂಗಳೂರಿನ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದೇ ಆದರೆ, ಮತ್ತೆ ಹಾಸಿಗೆ ಸಮಸ್ಯೆ ತಲೆದೋರುವ ಸಾಧ್ಯತೆ ಯೂ ಹೆಚ್ಚಿದೆ.

ಸದ್ಯ ಬೆಂಗಳೂರು ಸದ್ಯ ಕೊರೋನಾ ಹಾಟ್ ಸ್ಪಾಟ್ ಆಗ್ತಿರೊದಂತೂ ಸತ್ಯ. ಆರಂಭದಲ್ಲಿ ತಣ್ಣಗಿದ್ದ ಕೊರೋನಾ ಸದ್ಯ ಲಂಗು ಲಗಾಮಿಲ್ಲದೇ ಅಂಟುತ್ತಾ ಸಾಗ್ತಿದೆ. ಸದ್ಯ ಪಾಲಿಕೆ ನೀಡಿರೋ ಕ್ವಾರಂಟೈನ್ ಲೀಸ್ಟ್ ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದಂತೂ ಸತ್ಯ.

Next Story

RELATED STORIES