Top

ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

ಆಶಾ ಸಾಫ್ಟ್ ಅಂತ ಸಾಫ್ಟ್​​ವೇರ್​ಗೆ ಮಾಹಿತಿ ಹಾಕಲು ಹೇಳಿದ್ದಾರೆ. 5 ರಿಂದ 6 ಸಾವಿರಕ್ಕೆ ಕೆಲಸ ಮಾಡಿದ್ರೆ ಬರುವುದು ಕೇವಲ 2 ಸಾವಿರ ಮಾತ್ರ

ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ
X

ಬೆಂಗಳೂರಿನ ಪ್ರೀಡಂ ಪಾರ್ಕ್​ ಬಳಿ ಕನಿಷ್ಠ ವೇತನ ನಿಗದಿ ಮಾಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಧರಣಿ

ಬೆಂಗಳೂರು: ಜನವರಿಯಿಂದ ಕನಿಷ್ಠ ವೇತನಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್​ ಬಳಿ ಧರಣಿ ನಡೆಸುತ್ತಿದ್ದಾರೆ.

ನಗರದಲ್ಲಿ ಧರಣಿ ನಡೆಸುತ್ತಿರುವ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆಯರ ರಾಜ್ಯಾಧ್ಯಕ್ಷೆ ನಾಗಲಕ್ಷ್ಮೀ ಅವರು, ಆಶಾ ಸಾಫ್ಟ್ ಅಂತ ಸಾಫ್ಟ್​​ವೇರ್​ಗೆ ಮಾಹಿತಿ ಹಾಕಲು ಹೇಳಿದ್ದಾರೆ. 5 ರಿಂದ 6 ಸಾವಿರಕ್ಕೆ ಕೆಲಸ ಮಾಡಿದ್ರೆ ಬರುವುದು ಕೇವಲ 2 ಸಾವಿರ ಮಾತ್ರ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು 35 ಸಾವಿರ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಬೆಲೆ ಇಲ್ಲ. ನಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ. 12 ಸಾವಿರ ಸಂಬಳ ನಿಗದಿಗೆ ಬೇಡಿಕೆ ಈಡಲಾಗಿದೆ. ಜುಲೈನಲ್ಲಿ ಅನಿರ್ದಿಷ್ಟವಧಿ ಧರಣಿ ಆಯ್ತು. ಸಿಎಂ, ಡಿಸಿಎಂ, ಆರೋಗ್ಯ ಸಚಿವರು ಹೋರಾಟ ನಿಲ್ಲಿಸಿ, ನಿಮ್ಮ ಬೇಡಿಕೆಗೆ ಕ್ರಮ ಎಂದರು ಏನು ಆಗಲಿಲ್ಲ ಎಂದಿದ್ದಾರೆ.

ಸದ್ಯ ಕೊರೊನಾ ವಾರಿಯರ್ಸ್​​ಗೆ ದುಡಿದ ಹಣ ಕಿತ್ತು ಕೊಳ್ತಾ ಇದ್ದೀರಾ(?) ಸುಳ್ಳು ಭರವಸೆ ನಂಬಿ ಮೋಸ ಮಾಡಿದ್ದಾರೆ. ಹೋರಾಟಕ್ಕೆ ಬರದಂತೆ ತಡೆಯಲು ಪೊಲೀಸರ ಬಳಸಿದ್ದಾರೆ. ನಮ್ಮನ್ನ ಫೇಸ್ ಮಾಡಲು ಸರ್ಕಾರಕ್ಕೆ ಆಗಲ್ಲ. ಹೆಣ್ ಮಕ್ಕಳಿಗೆ ಉತ್ತರ ಕೊಡದಷ್ಟು ಸರ್ಕಾರಕ್ಕೆ ಭಯಪಟ್ಟಿದೆ. ಹೆಣ್ ಮಕ್ಕಳಿಗೆ ರಕ್ಷಣೆ ಅಲ್ಲ, ಇವತ್ತು ಪೊಲೀಸ್​ ಸ್ಟೇಷನ್​ಗೆ ಕರೆದುಕೊಂಡು ಹೋಗಿದ್ದೀರಾ(?) ಏನ್ ಸರ್ಕಾರ ಇದು. ಸಿಎಂ ಸೇರಿದಂತೆ ಸಂಬಂಧಪಟ್ಟ ಮಂತ್ರಿಗಳು ಬರುವ ವರೆಗೂ ಹೋರಾಟ ಮಾಡುತ್ತೇವೆ ಎಂದು ಆಶಾ ಕಾರ್ಯಕರ್ತೆಯರ ರಾಜ್ಯಾಧ್ಯಕ್ಷೆ ನಾಗಲಕ್ಷ್ಮೀ ಅವರು ಬಿಗಿ ಪಟ್ಟು ಹಿಡಿದಿದ್ದಾರೆ.

Next Story

RELATED STORIES