Top

7832 ಬೈಕುಗಳು 383 ಕಾರುಗಳು ಸೀಝ್

ಮಾಸ್ಕ್ ಹಾಕದ ರೌಂಡ್ಸ್ ಹಾಕ್ತಿದ್ದವರ ವಿರುದ್ದ 4 ಲಕ್ಷ 9 ಸಾವಿರ ಕೇಸ್ ದಾಖಲಿಸಲಾಗಿದ್ದು 2 ಕೋಟಿ 55 ಲಕ್ಷ ದಂಡವನ್ನು ಸ್ವೀಕರಿಸಲಾಗಿದೆ.

7832 ಬೈಕುಗಳು 383 ಕಾರುಗಳು ಸೀಝ್
X

ಬೆಂಗಳೂರು: ನಗರದಲ್ಲಿ ಜನತಾ ಲಾಕ್​ಡೌನ್ ಘೋಷಣೆ ಬಳಿಕ ಕೆಲವು ಅಗತ್ಯ ಸೇವೆಗಳಿಗೆ ವಿನಾಯಿತಿ ಸಿಕ್ಕಿತ್ತು. ಜನರಿಗೆ ಅಷ್ಟೇ ಸಾಕಾಗಿತ್ತು ಯಾವುದೇ ದಾಖಲೆಯಿಲ್ಲದೇ ಬೇಕಾಬಿಟ್ಟಿ ಓಡಾಟ ಮಾಡುತ್ತಿದರು. ಜನರ ಓಡಾಟಕ್ಕೆ ಬ್ರೇಕ್. ಮಾಸ್ಕ್ ರಹಿತರಿಗೆ ಫೈನ್ ಮೂಲಕ ಜನರಿಗೆ ಸರಿಯಾದ ಬಿಸಿ ಮುಟ್ಟಿಸಿದ್ದಾರೆ.

ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್ ಹಾಕಿ. ಸಾಮಾಜಿಕ ಅಂತರ ಕಾಪಾಡಿ. ಸುಖಾಸುಮ್ಮನೆ ಓಡಾಡಬೇಡಿ ಎಂದು ಎಷ್ಟೇ ಎಚ್ಚರಿಕೆ ಕೊಟ್ರು ಜನ ಮಾತ್ರ ಡೊಂಟ್ ಕೇರ್ ಮನಸ್ಥಿತಿಯಲ್ಲಿದರು ಇದಕ್ಕಾಗಿಯೇ ಪೊಲೀಸರು ದಂಡಂ ದಶಗುಣಂ ಪ್ರಯೋಗಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತ ಎಷ್ಟೇ ಹೇಳಿದ್ರು ಅಂಗಡಿ ಮುಗ್ಗಟ್ಟುಗಳ ಮುಂದೆ ಜನಸಂದಣಿ ಮಾರ್ಕೇಟ್ ಬಳಿ ಜನವೋ ಜನ. ಇವರನ್ನೆಲ್ಲ ಕಟ್ರೋಲ್ ಮಾಡೋಕೆ ಸೋಶಿಯಲ್ ಡಿಸ್ಟೇನ್ಸ್ ಮಾಡದವರಿಗೆ ಎಂಟು ವಿಭಾಗದಲ್ಲಿ ಒಂದು ಲಕ್ಷದ 16 ಸಾವಿರದ 212 ಪ್ರಕರಣ ದಾಖಲಿಸಿ 2 ಕೋಟಿ 79 ಲಕ್ಷ ದಂಡ ಕಟ್ಟಿಸಿಕೊಂಡಿದ್ದಾರೆ. ಇನ್ನು ಮಾಸ್ಕ್ ಹಾಕದ ರೌಂಡ್ಸ್ ಹಾಕ್ತಿದ್ದವರ ವಿರುದ್ದ 4 ಲಕ್ಷ 9 ಸಾವಿರ ಕೇಸ್ ದಾಖಲಿಸಲಾಗಿದ್ದು 2 ಕೋಟಿ 55 ಲಕ್ಷ ದಂಡವನ್ನು ಸ್ವೀಕರಿಸಲಾಗಿದೆ.

ಜನತಾ ಕರ್ಫ್ಯೂ ಆರಂಭವಾಗಿ ಏಳು ದಿನಗಳು ಕಳೆದಿವೆ. ಜನರು ತಾವಿ ಆತ್ಪತ್ರೆಗೆ ಹೋಗುತ್ತಿದ್ದೇವೆ. ಕೆಲಸಕ್ಕೆ ಹೋಗುತ್ತಿದ್ದೇವೆ. ಹೋಟೆಲ್​ಗೆ ಹೋಗಿದ್ವಿ. ಆರೋಗ್ಯ ಸರಿಯಿಲ್ಲ ಎಂದು ಕೆಲ ಸುಳ್ಳು ಸುಳ್ಳು ಹೇಳಿ ವಾಹನ ಚಲಾಯಿಸುತ್ತಿದ್ದವರಿಗೆ ಪೊಲೀಸರು ಸೀಜಿಂಗ್ ಶಾಕ್ ನೀಡಿದ್ದಾರೆ. ಸುಖಾಸುಮ್ಮನೆ ಅನಗತ್ಯವಾಗಿ ಓಡಾಡುತ್ತಿದ್ದ 7832 ದ್ವಿಚಕ್ರ ವಾಹನ. 386 ಆಟೋ, 383 ಕಾರುಗಳನ್ನು ಸೀಜ್ ಮಾಡಲಾಗಿದೆ. ಇನ್ನು ಉಲ್ಲಂಘನೆ ಮಾಡಿದ 14 ಹೋಟೆಲ್, 18 ಅಂಗಡಿಗಳು, 8 ಕಾಫಿ ಶಾಪ್ ಮತ್ತು ಮಾಲ್ ಸೇರಿದಂತೆ 41ಶಾಪ್ ಗಳ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿದೆ.

ಜನತಾ ಕರ್ಫ್ಯೂ ವೇಳೆ ಜನಸಮಾನ್ಯರು ಪೊಲೀಸರು ದಂಡ ಹಾಕ್ತಿರೋದಕ್ಕೆ ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ. ಆದರೆ, ಆರೋಗ್ಯದ ದೃಷ್ಟಿಯಿಂದ ಜನರು ದಂಡಕ್ಕೆ ಹೆದರಿಯಾದರು ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ, ಸುಮ್ಮನೆ ಓಡಾಡಬೇಡಿ ಎಂಬುದನ್ನು ಮನಗಾಣಬೇಕಾಗಿದೆ.

Next Story

RELATED STORIES