Top

ಐಪಿಎಲ್​ 2020 : ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಈ ಸೀಸನ್​ನ ಆರಂಭದಲ್ಲಿ ಆಡಲ್ಲ..!

ಐಪಿಎಲ್​ 2020 : ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಈ ಸೀಸನ್​ನ ಆರಂಭದಲ್ಲಿ ಆಡಲ್ಲ..!
X

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ ಆರಂಭಕ್ಕೆ ಇನ್ನು ಕೇವಲ ಒಂದೇ ತಿಂಗಳು ಬಾಕಿಯಿದೆ. ಟಿ20 ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವಾಗಲೇ ಈ ಆವೃತ್ತಿಯಲ್ಲಿ ಕ್ರಿಕೆಟ್​ ಫ್ಯಾನ್ಸ್​ಗೆ ಹಿನ್ನಡೆಯ ಸಂಗತಿ ಎಂದು ಕೇಳಿಬಂದಿದೆ.

ಈ ಸೀಸನ್‌ನ ಮೊದಲ ವಾರದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳ ಆಟಗಾರರು ಭಾಗಿಯಾಗುತ್ತಿಲ್ಲ ತಿಳಿದುಬಂದಿದೆ. ವರದಿಯಲ್ಲಿ ಹೇಳಿರುವಂತೆ ಈ ಎರಡು ತಂಡಗಳ ಆಟಗಾರರು ಮೊದಲ ವಾರದಲ್ಲಿ ಆಡದಿದ್ದರೆ, ಸನ್ ರೈಸರ್ಸ್ ಹೈದಾರಾಬಾದ್ ತಂಡ, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಹಿನ್ನಡೆ ಉಂಟಾಗಲಿದೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು ಕ್ವಾರಂಟೈನ್ ದಿನಗಳಲ್ಲಿ ಬದಲಾವಣೆ ಮಾಡುವ ಮೂಲಕ ಅನುಕೂಲ ಮಾಡಿಕೊಡುವಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಲ್ಲಿ ಬೇಡಿಕೆ ಇಟ್ಟಿದ್ದವು. ಆದರೆ, ಇದಕ್ಕೆ ಬಿಸಿಸಿಐ ಅನುಮೋದನೆ ನೀಡಿಲ್ಲ. ಹೀಗಾಗಿ ಎರಡೂ ತಂಡಗಳ ಆಟಗಾರರಿಗೆ ಐಪಿಎಲ್ ಮೊದಲ ವಾರದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಇನ್‌ಸೈಡ್ ಸ್ಪೋರ್ಟ್ ವೆಬ್​ಸೈಟ್​ ವರದಿ ಮಾಡಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 13ನೇ ಆವೃತ್ತಿ ಐಪಿಎಲ್ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 19ರಂದು ಶುರುವಾಗುವ ಟೂರ್ನಿ ನವೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

Next Story

RELATED STORIES