Top

ಭಕ್ತರಿಲ್ಲದೆ ಅದ್ದೂರಿಯಾಗಿ ನಡೆಯಿತು ಕೃಷ್ಣ ಜನ್ಮಾಷ್ಟಮಿ

ಭಕ್ತರಿಲ್ಲದೆ ಅದ್ದೂರಿಯಾಗಿ ನಡೆಯಿತು ಕೃಷ್ಣ ಜನ್ಮಾಷ್ಟಮಿ
X

ಇತಿಹಾಸದಲ್ಲೇ ಮೊದಲ ಬಾರಿಗೆ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಲ್ಲದೆ ಶ್ರೀಕೃಷ್ಣನ ಜನ್ಮ ದಿನ ನಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಇಸ್ಕಾನ್ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿಷಿಧ್ಧವಾಗಿತ್ತು. ಆದರೆ ಮೊದಲ ಬಾರಿಗೆ ವರ್ಜುವಲ್ ಅನುಸಂದಾನ ಮಾಡುವ ಮೂಲಕ ಭಕ್ತರಿಗೆ ಶ್ರೀಕೃಷ್ಣನ ದರ್ಶನವಾಗಿದೆ.

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಆಚರಿಸುತ್ತಾರೆ.

ನಗರದ ಇಸ್ಕಾನ್ ದೇವಸ್ಥಾನದಲ್ಲೂ ಕೃಷ್ಣ ಜನ್ಮಾಸ್ಟಮಿಯನ್ನ ಪ್ರತಿ ವರ್ಷ ಅದ್ಧೂರಿಯಾಗಿ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾದಿಂದಾಗಿ ಭಕ್ತರಿಲ್ಲದೆ ಕೃಷ್ಣ ಜನ್ಮಾಷ್ಠಮಿಯನ್ನು ಆಚರಣೆ ಮಾಡಲಾಯಿತು. ಬೆಳಗ್ಗೆ 4 ಗಂಟೆಯಿಂದಲೇ ವಿಷೇಶ ಪೂಜೆ ನಡೆಸಲಾಯ್ತು. ಪೂಜೆಗೂ ಮುನ್ನಹಾಲು, ಜೇನುತುಪ್ಪಾ, ತುಪ್ಪಾ, ಮೊಸರು, ಸೇರಿದಂತೆ ಪಂಚಾಮೃತವನ್ನ ಅಭಿಷೇಕ ಮಾಡಲಾಯ್ತು.

ಇನ್ನು ಈ ವರ್ಷ ಕೊರೊನಾ ಮಹಾಮಾರಿಯಿಂದಾಗಿ ಇಸ್ಕಾನ್ ದೇವಸ್ಥಾನ ತೆರೆದಿರಲಿಲ್ಲ. ಆದರೆ ಕೃಷ್ಣ ಜನ್ಮಾಷ್ಠಮಿಯನ್ನು ಸರಳವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಹಾಗಂತ ಭಕ್ತರು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಮಿಸ್ ಮಾಡಿಕೊಳ್ಳಬಾರದು ಎಂಬ ದೃಷ್ಟಿಯಿಂದ ಇಸ್ಕಾನ್ ಯುಟ್ಯೂಬ್ ಚಾನಲ್ ಮೂಲಕ 40 ಗಂಟೆಗಳಿಗೂ ಹೆಚ್ಚು ಕಾಲ ಸ್ವಾಗತಂ ಕೃಷ್ಣ ಹೆಸರಿನಲ್ಲಿ ಲೈವ್ ಪ್ರೋಗ್ರಾಂ ಮಾಡಲಾಗುತ್ತಿದೆ.

ತೆಪ್ಪೋತ್ಸವ, ಅಭಿಷೇಕಗಳು ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಲೈವ್ ಮೂಲಕವೇ ಭಕ್ತರು ಕಣ್ತುಂಬಿಕೊಳ್ಳಬಹುದು. ಇನ್ನು ಇಂದು ರಾತ್ರಿಯವರೆಗೂ ಮಹಾಮಂಗಳಾರತಿ ಇದೆ. ಇನ್ನು ಈ ವರ್ಷ ಕೃಷ್ಣ ರಾಧೆಗೆ ಕಾಂಜಿವರಂ ರೇಷ್ಮೆ ಬಟ್ಟೆಯಲ್ಲಿ ಅಲಂಕಾರ ಮಾಡಲಾಗಿತ್ತು. ಪ್ರತಿ ವರ್ಷ ಭಕ್ತಾಧಿಗಳು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ವಜ್ರ ವೈಡ್ಯೂರ್ಯಗಳು ದೇವಸ್ಥಾನಕ್ಕೆ ಬರುತ್ತಿತ್ತು. ಆದರೆ ಕೊರೊನಾದಿಂದ ಯಾವುದೇ ಆಭರಣ ಬಂದಿಲ್ಲ. ಹೀಗಾಗಿ ಸರಳವಾಗಿ ರಾಧೆ ಕೃಷ್ಣರನ್ನು ಅಲಂಕಾರ ಮಾಡಲಾಗಿತ್ತು.

ಕೊರೊನಾ ಮಹಾಮಾರಿಯ ಎಫೆಕ್ಟ್ ಶ್ರೀಕೃಷ್ಣ ಜನ್ಮಾಷ್ಠಮಿಗೂ ತಟ್ಟಿದೆ. ಹಿಂದೆಂದೂ ನಡೆಯದ ಸರಳ ಶ್ರೀಕೃಷ್ಣ ಜನ್ಮಾಷ್ಠಮಿ ಈ ವರ್ಷ ನಡೆದಿದೆ. ನಾಳೆಯೂ ಹಲವಾರು ಕಾರ್ಯಕ್ರಮಗಳನ್ನು ಲೈವ್ ಮೂಲಕವೇ ಇಸ್ಕಾನ್ ಪ್ರಸ್ತುತ ಪಡಿಸುತ್ತಿದೆ.

Next Story

RELATED STORIES