Top

ನಾಗಶೇಖರ್​ ಸಾರಥ್ಯದಲ್ಲಿ 'ಲವ್​ ಮಾಕ್ಟೇಲ್' ಚಿತ್ರ ತೆಲುಗಿಗೆ​ ರೀಮೇಕ್

ನಾಗಶೇಖರ್​ ಸಾರಥ್ಯದಲ್ಲಿ ಲವ್​ ಮಾಕ್ಟೇಲ್ ಚಿತ್ರ ತೆಲುಗಿಗೆ​ ರೀಮೇಕ್
X

ಕಡಿಮೆ ಬಜೆಟ್​ನಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ಜೋಡಿ, ನಿರ್ಮಿಸಿ ನಟಿಸಿದ ಲವ್​ ಮಾಕ್ಟೇಲ್​ ಸಿನಿಮಾ ಭರ್ಜರಿ ಸಕ್ಸಸ್​​ ಕಂಡಿದ್ದು ಗೊತ್ತೇಯಿದೆ. ಅಕ್ಕಪಕ್ಕದ ಇಂಡಸ್ಟ್ರಿ ಗಮನ ಸೆಳೆದ ಸಿನಿಮಾ ತೆಲುಗು ತಮಿಳಿಗೂ ರೀಮೇಕ್​ ಆಗುವ ಸುದ್ದಿ ಬಂದಿತ್ತು. ವಿಶೇಷ ಅಂದ್ರೆ, ಕನ್ನಡ ತಂತ್ರಜ್ಞರ ತಂಡವೇ ಚಿತ್ರವನ್ನ ತೆಲುಗು ಪ್ರೇಕ್ಷಕರ ಮುಂದಿಡ್ತಿದ್ದು, ಸೌತ್​​ ಟಾಪ್​ ಹೀರೋಯಿನ್​ ನಾಯಕಿಯಾಗುವ ಸುದ್ದಿ ಬಂದಿದೆ.

ಕನ್ನಡ ಸೂಪರ್​ ಹಿಟ್​ ಸಿನಿಮಾ ಲವ್​ ಮಾಕ್ಟೇಲ್. ಡಾರ್ಲಿಂಗ್​ ಕೃಷ್ಣ ನಿರ್ಮಿಸಿ, ನಿರ್ದೇಶಿಸಿ ನಟಿಸಿದ ಚಿತ್ರಕ್ಕೆ ಮಿಲನಾ ನಾಗರಾಜ್​ ನಿರ್ಮಾಪಕಿಯಾಗಿ, ನಾಯಕಿಯಾಗಿ ಸಾಥ್​ ಕೊಟ್ಟಿದ್ರು. ರಘು ದೀಕ್ಷಿತ್​ ಮ್ಯೂಸಿಕ್​ ಚಿತ್ರದ ಮತ್ತೊಂದು ಹೈಲೆಟ್. ಸಿಲ್ವರ್​ ಸ್ಕ್ರೀನ್​ ಮೇಲೆ ಮಾತ್ರವಲ್ಲದೇ ಓಟಿಟಿಯಲ್ಲೂ ಸಿನಿಮಾ ಸದ್ದು ಮಾಡಿತ್ತು. ಇತ್ತ ಲವ್​ ಮಾಕ್ಟೇಲ್ ಸೀಕ್ವೆಲ್​​ಗೆ ಸಿದ್ಧತೆ ನಡೀತಿದ್ರೆ, ಅತ್ತ ತೆಲುಗು ರೀಮೇಕ್​ ಕೆಲಸ ಶುರುವಾಗ್ತಿದೆ.

ಲವ್​ ಮಾಕ್ಟೇಲ್ ಸಿನಿಮಾ ಬೇರೆ ಭಾಷೆಗೆ ರೀಮೇಕ್ ಆಗುವ ಸುದ್ದಿ ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ, ಯಾರು ಮಾಡ್ತಾರೆ ಅನ್ನೋದು ಪಕ್ಕಾ ಆಗಿರಲಿಲ್ಲ. ಇದೀಗ ಕನ್ನಡದ ನಿರ್ದೇಶಕ ನಾಗಶೇಖರ್​​ ಅವರೇ ಚಿತ್ರವನ್ನ ತೆಲುಗಿಗೆ ರೀಮೇಕ್​ ಮಾಡ್ತಿದ್ದಾರೆ. ಡಿಫ್​ರೆಂಟ್​ ಕಾನ್ಸೆಪ್ಟ್​ ಸಿನಿಮಾಗಳಿಂದ ಟಾಲಿವುಡ್​ನಲ್ಲಿ ಗಮನ ಸೆಳೆದಿರೋ ಯುವನಟ ಚಿತ್ರಕ್ಕೆ ಸತ್ಯದೇವ್​ ಚಿತ್ರಕ್ಕೆ ನಾಯಕರಾದ್ರೆ, ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿ ಅನ್ನೋ ಸುದ್ದಿ ಬಂದಿದೆ.

ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಆದಿ ಮತ್ತು ನಿಧಿಮಾ ಪಾತ್ರಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಸತ್ಯದೇವ್​ ಮತ್ತು ತಮನ್ನಾ ತೆಲುಗಿನಲ್ಲಿ ಈ ಪಾತ್ರಗಳನ್ನ ಮಾಡಲಿದ್ದಾರೆ. ವಿಶೇಷ ಅಂದ್ರೆ, ಮೈನಾ ನಾಗಶೇಖರ್​​​ ನಿರ್ದೇಶನದ ಜೊತೆಗೆ ತಮ್ಮದೇ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಮಗದೊಂದು ವಿಶೇಷ ಅಂದ್ರೆ, ಕನ್ನಡ ಕ್ಯಾಮರಾಮ್ಯಾನ್​ ಸತ್ಯಾ ಹೆಗಡೆ ಚಿತ್ರದ ಛಾಯಾಗ್ರಹಣ ಜವಾಬ್ದಾರಿ ವಹಿಸಿಕೊಂಡಿದ್ಧಾರೆ. ಎಂ.ಎಂ ಕೀರವಾಣಿ ಪುತ್ರ ಕಾಲಭೈರವ ಲವ್​ ಮಾಕ್ಟೇಲ್ ರೀಮೇಕ್​ಗೆ ಟ್ಯೂನ್​ ಹಾಕಲಿದ್ದಾರೆ.

ಒಟ್ನಲ್ಲಿ ಕನ್ನಡದ ಸೂಪರ್​ ಹಿಟ್​ ಸಿನಿಮಾವನ್ನ ಕನ್ನಡ ತಂತ್ರಜ್ಞರೇ ತೆಲುಗಿಗೆ ರೀಮೇಕ್​ ಮಾಡ್ತಿರೋದು ವಿಶೇಷ. ಕೊರೊನಾ ಹಾವಳಿ ಮುಗಿದು, ಸೆಪ್ಟೆಂಬರ್​ ವೇಳೆಗೆ ತೆಲುಗು ಸಿನಿಮಾ ಸೆಟ್ಟೇರಲಿದೆ. ಯೂನಿವರ್ಸನ್​ ಸಬ್ಜೆಕ್ಟ್​ ಆಗಿರೋ ಲವ್ ಮಾಕ್ಟೇಲ್​ ತೆಲುಗು ಪ್ರೇಕ್ಷಕರನ್ನೂ ರಂಜಿಸೋದ್ರಲ್ಲಿ ಸಂದೇಹವಿಲ್ಲ.

Next Story

RELATED STORIES