Top

ಫ್ಯಾಂಟಮ್ ಸೆಟ್​​, 6 ಕೋಟಿ ಬಜೆಟ್.. ಲಕ್ಷ ಲಕ್ಷ ಗಿಡಗಳು.. 50 ದಿನ ಶೂಟಿಂಗ್

ಫ್ಯಾಂಟಮ್ ಸೆಟ್​​, 6 ಕೋಟಿ ಬಜೆಟ್.. ಲಕ್ಷ ಲಕ್ಷ ಗಿಡಗಳು.. 50 ದಿನ ಶೂಟಿಂಗ್
X

ಕೋವಿಡ್- 19 ಆರ್ಭಟಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಸದ್ಯಕ್ಕೆ ಸಿನಿಮಾ ಶೂಟಿಂಗ್​ ಬೇಡವೇ ಬೇಡ ಅಂತ ಫಿಲ್ಮ್​ ಮೇಕರ್ಸ್​ ಕೈಚೆಲ್ಲಿ ಕೂತಿದ್ದಾರೆ. ಆದರೆ, ಫ್ಯಾಂಟಮ್​ ಸಿನಿಮಾ ಟೀಂ, ಡೆಡ್ಲಿ ವೈರಸ್​ಗೆ ಸಡ್ಡು ಹೊಡಿತ್ತಿದೆ. ಮುನ್ನಚ್ಚರಿಕೆ ಕ್ರಮಗಳನ್ನ ಕೈಗೊಂಡು ಚಿತ್ರಕ್ಕಾಗಿ ಅದ್ಧೂರಿ ಸೆಟ್​ಗಳನ್ನ ನಿರ್ಮಾಣ ಮಾಡ್ತಿದೆ. ಮುಂದಿನ ವಾರ ವಿಕ್ರಾಂತ್​ ರೋಣ ಕಿಚ್ಚ ಶೂಟಿಂಗ್​ ಸೆಟ್​ಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ.

ಫ್ಯಾಂಟಮ್. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಸಾರಥ್ಯದ ಸಸ್ಪೆನ್ಸ್​ ಥ್ರಿಲ್ಲರ್​. ಟೈಟಲ್​ನಿಂದ್ಲೇ ಒಂದು ರೇಂಜ್​ಗೆ ಕುತೂಹಲ ಕೆರಳಿಸಿರೋ ಈ ಚಿತ್ರದಲ್ಲಿ ಸುದೀಪ್​​​ ಕೀ ರೋಲ್​ ಪ್ಲೇ ಮಾಡ್ತಿದ್ದಾರೆ. ದೇವನಹಳ್ಳಿ ಬಳಿ ಸೆಟ್​ ಹಾಕಿ ಫಸ್ಟ್​ ಶೆಡ್ಯೂಲ್​ ಶೂಟಿಂಗ್ ಕಂಪ್ಲೀಟ್​ ಮಾಡಿದ್ದ ಚಿತ್ರತಂಡ ಸೆಕೆಂಡ್​ ಶೆಡ್ಯೂಲ್​ಗೆ ಪ್ಲಾನ್​ ಮಾಡ್ತಿದೆ. ಕೊರೊನಾ ಹಾವಳಿಯಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಆದರೆ, ಕೊರೊನಾಗೆ ಜಗ್ಗದೇ ಫ್ಯಾಂಟಮ್​ ಶೂಟಿಂಗ್​ಗೆ ಮಾಸ್ಟರ್​ ಪ್ಲಾನ್​ ಶುರುವಾಗಿದೆ.

ಕೊರೊನಾ ಮಿಂಚಿನ ವೇಗದಲ್ಲಿ ಹರಡುತ್ತಿರುವ ಸಮಯದಲ್ಲಿ ಸಿನಿಮಾ ಶೂಟಿಂಗ್​ ಶುರು ಮಾಡೋದು ಸರೀನಾ(?) ಯಾವುದೇ ಸಮಸ್ಯೆ ಇಲ್ಲದೇ ಶೂಟಿಂಗ್​ ನಡೆಸೋಕ್ಕೆ ಸಾಧ್ಯಾನಾ ಅನ್ನೋ ಚರ್ಚೆ ನಡೀತಿದೆ. ಸೂಪರ್​ಸ್ಟಾರ್​ಗಳೇ ಸದ್ಯಕ್ಕೆ ಶೂಟಿಂಗ್​ ಬೇಡ ಅಂತಿದ್ದಾರೆ. ಆದರೆ, ಫ್ಯಾಂಟಮ್​ ಟೀಂ 150 ಜನ ಕಾರ್ಮಿಕರನ್ನ ಬಳಸಿಕೊಂಡು ಹೈದ್ರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್​ಗಳನ್ನ​ ನಿರ್ಮಾಣ ಮಾಡ್ತಿದೆ. ಕೆಜಿಎಫ್​ ಖ್ಯಾತಿಯ ಆರ್ಟ್​ ಡೈರೆಕ್ಟರ್​ ಶಿವಕುಮಾರ್​ ಫ್ಯಾಂಟಮ್​​​ ಚಿತ್ರಕ್ಕೆ ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದಾರೆ.

ಥ್ರಿಲ್ಲರ್​ ಫ್ಯಾಂಟಮ್​ ಚಿತ್ರಕ್ಕಾಗಿ ಕಾಡಿನಲ್ಲಿ ಶೂಟಿಂಗ್​ ನಡೆಸಬೇಕಿತ್ತು. ಆದರೆ, ಒಂದಷ್ಟು ಭಾಗವನ್ನ ಸೆಟ್​ ಹಾಕಿ ಶೂಟ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿತ್ತು. ಅದಕ್ಕಾಗಿ ಹೈದ್ರಬಾದ್​ನಲ್ಲಿರೋ ಅನ್ನಪೂರ್ಣ ಸ್ಟುಡಿಯೋದಲ್ಲಿ ಸೆಟ್​ ಹಾಕುವ ಕೆಲಸ ಶುರುವಾಗಿತ್ತು. ರಾಜಮಂಡ್ರಿಯಿಂದ ಲಾರಿಗಳಲ್ಲಿ ಲಕ್ಷ ಲಕ್ಷ ಗಿಡ-ಮರಗಳನ್ನ ತರಲಾಗಿತ್ತು. ಅಷ್ಟರಲ್ಲಿ ಕೊರೊನಾ ಅಟ್ಟಹಾಸ ಶುರುವಾಗಿ ಲಾಕ್​ಡೌನ್​ ಜಾರಿಯಾಯ್ತು. ಇದೀಗ ತೆಲಂಗಾಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಫ್ಯಾಂಟಮ್​ ಚಿತ್ರಕ್ಕಾಗಿ ಕಾಡಿನ ಸೆಟ್​ ಹಾಕುವ ಕೆಲಸ ನಡೀತಿದೆ.

ಶಾಲಿನಿ ಆರ್ಟ್ಸ್​​ ಬ್ಯಾನರ್​ನಲ್ಲಿ ನಿರ್ಮಾಪಕ ಜಾಕ್​ ಮಂಜು ಫ್ಯಾಂಟಮ್​ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ. ಕ್ವಾಲಿಟಿ ವಿಚಾರದಲ್ಲಿ ರಾಜಿಯಾಗದೇ ಬಹಳ ಅದ್ಧೂರಿಯಾಗಿ ಚಿತ್ರವಬ್ನ ತೆರೆಗೆತರುವ ಪ್ರಯತ್ನ ಮಾಡ್ತಿದ್ದಾರೆ. ಸೆಟ್‍ನಲ್ಲಿ ವೈದ್ಯಕೀಯ ತಂಡವನ್ನು ನಿಯೋಜಿಸಿ, ಸಿನಿಕಾರ್ಮಿಕರ ಬಗ್ಗೆ ಕಾಳಜಿ ವಹಿಸಲಾಗಿದೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸೆಟ್​ ನಿರ್ಮಾಣದ ಕೆಲಸ ನಡೀತಿದೆ. ದೊಡ್ಡ ಕಾಡು, ಕಾಡಿನಲ್ಲಿ ಸುಂದರ ಜಲಪಾತ, ಮುರಿದ ಸೇತುವೆ ಹೀಗೆ ವಿಭಿನ್ನವಾಗಿ ಸೆಟ್​​ ನಿರ್ಮಾಣ ಮಾಡಲಾಗ್ತಿದೆ.

ಇನ್ನೊಂದು ವಾರದಲ್ಲಿ ಫ್ಯಾಂಟಮ್​ ಚಿತ್ರದ ಸೆಟ್​​ ಸಂಪೂರ್ಣವಾಗಿ ನಿರ್ಮಾಣವಾಗಲಿದೆ. ಶೀಘ್ರದಲ್ಲೇ ಸುದೀಪ್​ ಅಂಡ್​ ಟೀಂ ಶೂಟಿಂಗ್​ಗಾಗಿ ಹೈದರಾಬಾದ್​ಗೆ ತೆರಳಲಿದೆ. ಸೆಟ್​ನಲ್ಲಿ ಹಗಲು ರಾತ್ರಿ ಚಿತ್ರದ ಕ್ರೂಷಿಯಲ್ ಸೀಕ್ವೆನ್ಸ್​ನ ಶೂಟ್​ ಮಾಡುವ ಪ್ಲಾನ್​ನಲ್ಲಿದ್ದಾರೆ ಅನೂಪ್ ಭಂಡಾರಿ. ಕಾಡಿನ ಸೆಟ್​​ನಲ್ಲಿ ನೈಟ್​ ಎಫೆಕ್ಟ್​​ನಲ್ಲೂ ಶೂಟಿಂಗ್​ ನಡೆಸೋ ಲೆಕ್ಕಚಾರವಿದೆ. ಖಡಕ್​ ಟೈಟಲ್, ಕಿಚ್ಚನ ವಿಕ್ರಾಂತ್​ ರೋಣ ಕ್ಯಾರೆಕ್ಟರ್​ ಮತ್ತು ಲುಕ್ಕಿನಿಂದ ಫ್ಯಾಂಟಮ್​ ಸಿನಿಮಾ ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ.

ಕೊರೊನಾ ಸಮಸ್ಯೆ ಶುರುವಾದ ನಂತ್ರ ಶೂಟಿಂಗ್​ ಪ್ರಾರಂಭಿಸ್ತಿರೋ ಮೊದಲ ಕನ್ನಡ ಸಿನಿಮಾ ಫ್ಯಾಂಟಮ್​. ಚಿತ್ರದಲ್ಲಿ ನಿರೂಪ್​ ಭಂಡಾರಿ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲಾಕ್​ಡೌನ್​ ಟೈಮಲ್ಲಿ ಸುದೀಪ್​ ಮನೆಯಲ್ಲೇ ವರ್ಕ್​ಔಟ್​ ಮಾಡಿ ವಿಕ್ರಾಂತ್​ ರೋಣ ಪಾತ್ರಕ್ಕಾಗಿ ದೇಹ ಹುರಿಗೊಳಿಸಿಕೊಂಡಿದ್ದಾರೆ. ಅಭಿಮಾನಿಗಳಂತೂ ವಿಕ್ರಾಂತ್​ ರೋಣ ಆರ್ಭಟ ನೋಡೋಕ್ಕೆ ಕಾಯ್ತಿದ್ದಾರೆ. ಶೀಘ್ರದಲ್ಲೇ ಫ್ಯಾಂಟಮ್ ಪ್ರಪಂಚಕ್ಕೆ ಕಿಚ್ಚನ ಎಂಟ್ರಿಯಾಗಲಿದೆ.

Next Story

RELATED STORIES