ಭಾರತ ಮೊದಲ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿದು ಇಂದಿಗೆ 37 ವರ್ಷ

ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆದ್ದುಬೀಗಿ ಇಂದಿಗೆ 37 ವರ್ಷಗಳು ತುಂಬಿದೆ. ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭಾರತ ತಂಡವು 43 ರನ್ಗಳಿಂದ ಸೋಲಿಸಿ, ಮೊದಲ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು.
ಅಂದು ಭಾರತ ವಿಶ್ವಕಪ್ ವಿಜೇತ ತಂಡವನ್ನು ಆಲ್ರೌಂಡರ್ ಕಪಿಲ್ ದೇವ್ ಅವರು ನೇತೃತ್ವವಹಿಸಿಕೊಂಡಿದ್ದರು. ಫೈನಲ್ ಪಂದ್ಯದ ಇಲೆವೆನ್ನಲ್ಲಿ ಸುನಿಲ್ ಗವಾಸ್ಕರ್, ಕೆ. ಶ್ರೀಕಾಂತ್, ಮೊಹಿಂದರ್ ಅಮರನಾಥ್, ಯಶ್ಪಾಲ್ ಶರ್ಮಾ, ಎಸ್ಎಂ ಪಾಟೀಲ್, ಕಪಿಲ್ ದೇವ್ (ನಾಯಕ), ಕೀರ್ತಿ ಆಜಾದ್, ರೋಜರ್ ಬಿನ್ನಿ, ಮದನ್ ಲಾಲ್, ಸೈಯದ್ ಕಿರ್ಮಾನಿ, ಮತ್ತು ಬಲ್ವಿಂದರ್ ಸಂಧು ತಂಡದಲ್ಲಿ ಇದ್ದರು. ವಿಶ್ವಕಫ್ ಗೆಲುವಿನ ಬಳಿಕ, ಕ್ರಿಕೆಟ್ಗೆ ದೇಶದಲ್ಲಿ ಭರ್ತಿ ಸಿಕ್ಕಿತು, ಪ್ರತಿ ಮಗುವೂ ಕ್ರಿಕೆಟಿಗನಾಗಲು ಬಯಸುವ ಅಭಿಮಾನಿಗಳಿಗೆ ಕ್ರೀಡೆ ಧರ್ಮವಾಗಿ ಬೆಳೆಯಿತು.
#OnThisDay in 1983, India won their maiden Men's @cricketworldcup title 🏆
— ICC (@ICC) June 25, 2020
Kapil Dev and his side stunned defending champions West Indies, beating them by 43 runs in a memorable final at Lord's 🙌 pic.twitter.com/DVchvVLH5P
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆರಿಬಿಯನ್ನರು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಕಪಿಲ್ ದೇವ್ ನೇತೃತ್ವದ ಭಾರತ ತಂಡವು ಕೇವಲ 183 ರನ್ಗಳನ್ನು ಗಳಿಸಿತು. ಆಂಡಿ ರಾಬರ್ಟ್ಸ್ ಮೂರು ವಿಕೆಟ್ ಪಡೆದರೆ ಮಾಲ್ಕಮ್ ಮಾರ್ಷಲ್, ಮೈಕೆಲ್ ಹೋಲ್ಡಿಂಗ್ ಮತ್ತು ಲ್ಯಾರಿ ಗೋಮ್ಸ್ ಅವರು ವೆಸ್ಟ್ ಇಂಡೀಸ್ ಪರ ತಲಾ ಎರಡು ವಿಕೆಟ್ ಪಡೆದರು.
ಭಾರತ ಪರ ಕೆ. ಶ್ರೀಕಾಂತ್ 38 ರನ್ ಗಳಿಸಿದನ್ನು ಬಿಟ್ಟರೇ ಉಳಿದೆಲ್ಲಾ ಬ್ಯಾಟ್ಸ್ಮೆನ್ಗಳು 30 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
183ರನ್ ಚೇಸಿಂಗ್ ಇಳಿದ ವಿಂಡೀಸ್ ತಂಡ 33ರನ್ ಗಳಿಸಿದ್ದ ವಿವಿಯನ್ ರಿಚರ್ಡ್ಸ್ ಅವರನ್ನು ಮದನ್ ಲಾಲ್ ಅವರು ಔಟ್ ಮಾಡಿ ಎದುರಾಳಿ ತಂಡವನ್ನು 57ರನ್ಗಳಿಗೆ 3 ವಿಕೆಟ್ ಉರುಳಿಸಿ ಭಾರತ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.
ಇದರಬೆನ್ನಲ್ಲೇ ಕೆರಿಬಿಯನ್ ಆಟಗಾರರು ಹೆಚ್ಚುಹೊತ್ತು ಮೈದಾನದಲ್ಲಿ ಗಟ್ಟಿಯಾಗಿ ಉಳಿಯಲು ಸಾಧ್ಯವಾಗದೇ ಕೆರಿಬಿಯನ್ನರು 76ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮೊಹಿಂದರ್ ಅಮರನಾಥ್ ಅವರು ಮೈಕೆಲ್ ಹೋಲ್ಡಿಂಗ್ ಅವರ ಅಂತಿಮ ವಿಕೆಟ್ ಉಳಿಸಿದ ಬಳಿಕ ಭಾರತ ತಂಡ ಮೊದಲ ವಿಶ್ವಕಪ್ ಪ್ರಶಸ್ತಿಗೆ ಮುತ್ತಿಟ್ಟಿತು. ಕೊನೆಗೆ ವೆಸ್ಟ್ ಇಂಡೀಸ್ ತಂಡ 140 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ತಂಡಕ 43ರನ್ಗಳಿಂದ ಜಯ ಸಾಧಿಸಿತು.