Top

ಸೋಮವಾರ ರಿಲೀಸ್ ಆಗಲಿದೆ ದರ್ಶನ್ ಹೊಸ ಅವತಾರ..!

ಸೋಮವಾರ ರಿಲೀಸ್ ಆಗಲಿದೆ ದರ್ಶನ್ ಹೊಸ ಅವತಾರ..!
X

ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಸಿನಿಮಾ ರಾಬರ್ಟ್​. ರಾಬರ್ಟ್​ ದರ್ಶನಕ್ಕೆ ಡಿ ಫ್ಯಾನ್ಸ್​ ಹಗಲು ರಾತ್ರಿ ಚಡಪಡಿಸ್ತಿದ್ದಾರೆ. ಸಿನಿಮಾ ರೆಡಿಯಾಗಿದ್ರೂ ನೋಡೋ ಅವಕಾಶ ಇಲ್ಲ. ಸಿನಿಮಾ ನೊಡೋಕ್ಕಾಗದೇ ನಿರಾಶೆಯಾಗಿರೋ ಅಭಿಮಾನಿಗಳಿಗೆ ರಾಬರ್ಟ್​ ಚಿತ್ರತಂಡದಿಂದ ಸ್ವೀಟ್ ನ್ಯೂಸ್ ಸಿಕ್ಕಿದೆ.

ರಾಬರ್ಟ್​. ಪೋಸ್ಟರ್ ನೋಡಿದ್ದಾಯ್ತು. ಟೀಸರ್, ಮೇಕಿಂಗ್, ಲಿರಿಕಲ್ ವಿಡಿಯೋ ಸಾಂಗ್ಸ್​ ನೋಡಿದ್ದಾಯ್ತು. ಇನ್ನೇನಿದ್ರೂ ಸಿನಿಮಾ ನೋಡೋದೊಂದೇ ಬಾಕಿ ಅಂತ ಫಿಕ್ಸ್​ ಆಗಿದರು ಡಿ ಫ್ಯಾನ್ಸ್. ಆದರೆ, ಮೇಲಿಂದ ಮೇಲೆ ಅಭಿಮಾನಿಗಳಿಗೆ ನಿರಾಶೆ ಆಗ್ತಾನೇ ಇದೆ.

ಎಲ್ಲಾ ಅಂದುಕೊಂಡತೆ ಆಗಿದ್ರೆ ಏಪ್ರಿಲ್​ 9ಕ್ಕೆ ರಾಬರ್ಟ್​ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ಬೇಕಿತ್ತು. ಆ ನಂತರ ಕೊರೊನಾ ಲಾಕ್​ಡೌನ್​ ಸಮಸ್ಯೆ ಅಂತ ಮೇ ಒಂದು ಕಾರ್ಮಿಕರ ದಿನಾಚರಣೆಗೆ ಅಂತ ಪೋಸ್ಟ್​ಪೋನ್​ ಆಯ್ತು. ಆದರೆ, ಅದೂ ಕೂಡ ಸಾಧ್ಯವಾಗ್ಲಿಲ್ಲ. ಇದೀಗ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ರಾಬರ್ಟ್​ ದರ್ಶನ ಪಕ್ಕಾ ಎನ್ನಲಾಗ್ತಿದೆ. ಆದರೆ, ಅದೂ ಕೂಡ 100 ಪರ್ಸೆಂಟ್ ಗ್ಯಾರೆಂಟಿನಾ ಅನ್ನೋದು ಮಾತ್ರ ಗೊತ್ತಿಲ್ಲ.

ರಾಬರ್ಟ್​​​​​ ಸಿನಿಮಾಗಾಗಿ ಕಾಯ್ತಿರೋ ಡಿ ಫ್ಯಾನ್ಸ್​ಗೆ ಬೇಸರ ಕಡಿಮೆ ಮಾಡೋಕ್ಕೆ ಚಿತ್ರತಂಡ ಸ್ವೀಟ್​ ನ್ಯೂಸ್​ವೊಂದನ್ನ ಕೊಟ್ಟಿದೆ. ರಂಜಾನ್​ ಹಬ್ಬದ ಪ್ರಯುಕ್ತ ರಾಬರ್ಟ್​ ಚಿತ್ರದ ಮತ್ತೊಂದು ಹೊಸ ಪೋಸ್ಟರ್​ ರಿಲೀಸ್ ಮಾಡಲಿದೆ ಚಿತ್ರತಂಡ. ಹೀಗಂತ ಸ್ವತಃ ನಿರ್ದೇಶಕ ತರುಣ್ ಸುಧೀರ್​ ಟ್ವೀಟ್ ಮಾಡಿದ್ದಾರೆ.

ಹಾಗಾದ್ರೆ ರಾಬರ್ಟ್​ ಮುಂದಿನ ಪೋಸ್ಟರ್ ಹೇಗಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಕಾಡ್ತಿದೆ. ಈ ಹಿಂದೆ ರಾಬರ್ಟ್​ ಟೈಟಲ್​ಗೆ ತಕ್ಕಂತೆ ಕತ್ತಿನಲ್ಲಿ ಕ್ರಾಸ್ ಇರುವ ಚೈನ್​​ ಧರಿಸಿ, ಕ್ರಿಶ್ಚಿಯನ್​ ಲುಕ್​ನಲ್ಲಿ ಮಿಂಚಿದ್ದ ದರ್ಶನ್​, ಆಂಜನೇಯನ ಲುಕ್​ನಲ್ಲಿ ದರ್ಶನ ಕೊಟ್ಟಿದರು. ಇದೀಗ ರಂಜಾನ್​ ಹಬ್ಬವಾಗಿರೋದ್ರಿಂದ ಮುಸ್ಲಿಂ ಲುಕ್​ನಲ್ಲಿರೋ ಪೋಸ್ಟರ್​ ರಿಲೀಸ್​ ಮಾಡ್ಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್​.

ಒಟ್ನಲ್ಲಿ ರಾಬರ್ಟ್​ ಸಿನಿಮಾಗಾಗಿ ಕಾಯ್ತಿರೋ ಅಭಿಮಾನಿಗಳಿಗೆ ದಚ್ಚು ಹೊಸ ಅವತಾರ ನೋಡೋ ಅವಕಾಶ ಮಾತ್ರ ಸಿಕ್ಕಿದೆ. ಆದಷ್ಟು ಬೇಗ ಕೊರೊನಾ ಮತ್ತು ಲಾಕ್​ಡೌನ್​ ಸಮಸ್ಯೆ ದೂರಾಗಿ ನೆಚ್ಚಿನ ನಟನ ದರ್ಶನ ಸಿಗ್ಲಿ ಅಂತ ಕಾಯ್ತಿದ್ದಾರೆ ಡಿ ಫ್ಯಾನ್ಸ್​.

Next Story

RELATED STORIES