'ಸಿಎಂ ಸುಮ್ಮನೆ ಕೂತರೆ ಬಿಎಸ್ವೈ ಇಮೇಜ್ಗೂ ಡ್ಯಾಮೇಜ್ ಆಗಲಿದೆ'

ಬೆಂಗಳೂರು: ರೈತ ಮಹಿಳೆಯಗೆ ಮುಚ್ಚು ಬಾಯಿ ರಾಸ್ಕಲ್ ಎಂದು ಅವಹೇಳನಕಾರಿ ಪದಬಳಕೆ ಮಾಡಿರುವ ಕಾನೂನು ಹಾಗೂ ಹಾಸನ ಜಿಲ್ಲೆ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮಾಧುಸ್ವಾಮಿಯವರದ್ದು ಇದು ಮೊದಲದೇನಲ್ಲ, ಈ ಹಿಂದೆಯೂ ಅವರು ಇದೇ ವರ್ತನೆ ತೋರಿದ್ದಾರೆ. ರೈತ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದಾರೆ ಅವರ ವಿರುದ್ಧ ದರ್ಪದಿಂದ ಈ ರೀತಿ ನಡೆದುಕೊಂಡಿದ್ದಾರೆ ಎಂದು ಅವರು ಹೇಳಿಕೆಯನ್ನು ಖಂಡಿಸಿದ್ದಾರೆ.
ಇನ್ನು ಸಚಿವರು ಅಂದ್ರೆ ಮಹಾರಾಜರೇನಲ್ಲ, ತೆರಿಗೆ ಹಣದಿಂದಲೇ ವೇತನ, ಮನೆ, ಗಾಡಿ ಸಿಗ್ತಿದೆ. ವಿಧಾನಸೌಧ ಮಂತ್ರಿಗಳದ್ದೇನಲ್ಲ, ವಿಧಾನಸೌಧ ಇರೋದು ಜನರಿಂದಾಗಿಯೇ. ಮುಖ್ಯಮಂತ್ರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಧುಸ್ವಾಮಿ ವಿರುದ್ಧ ಮಾತನಾಡಿದ್ದಾರೆ.
ಸದ್ಯ ರೈತ ಮಹಿಳೆಗೆ ಕೆಟ್ಟ ರೀತಿಯಲ್ಲಿ ವರ್ತಿಸಿದ್ದು ಖಂಡನೀಯ. ಸಿಎಂ ಸುಮ್ಮನೆ ಕೂತರೆ ಅವರ ಇಮೇಜ್ಗೂ ಡ್ಯಾಮೇಜ್ ಆಗಲಿದೆ. ಸರಿಯಾಗಿ ನಡೆದುಕೊಂಡರೆ ಮಾತ್ರ ಎಲ್ಲರಿಗೂ ಶೋಭೆ ತರುತ್ತೆ. ಮೊದಲು ಮಾಧುಸ್ವಾಮಿಯವರ ರಾಜೀನಾಮೆ ಪಡೆಯಬೇಕು ಎಂದು ಜೆ.ಸಿ ಮಾಧುಸ್ವಾಮಿ ರಾಜೀನಾಮೆಗೆ ದಿನೇಶ್ ಗುಂಡೂರಾವ್ ಅವರು ಒತ್ತಾಯ ಮಾಡಿದ್ದಾರೆ.