Top

ಇಂದಿನಿಂದ ಅನಾವಶ್ಯಕವಾಗಿ ರಸ್ತೆಗಿಳಿದ್ರೆ ಬೀಳಲಿದೆ ಪಿಂಕ್ ನೋಟ್ ದಂಡ..!?

ಇಂದಿನಿಂದ ಅನಾವಶ್ಯಕವಾಗಿ ರಸ್ತೆಗಿಳಿದ್ರೆ ಬೀಳಲಿದೆ ಪಿಂಕ್ ನೋಟ್ ದಂಡ..!?
X

ಮೈಸೂರು: ಇಂದಿನಿಂದ ಅನವಶ್ಯಕವಾಗಿ ರೋಡಿಗೆ ಬಂದ್ರೆ 2 ಸಾವಿರ ದಂಡ ಹಾಕಲು ಮೈಸೂರು ಪೊಲೀಸರು ನಿರ್ಧರಿಸಿದ್ದಾರೆ.

ಮೈಸೂರಿನಲ್ಲಿ ಮಧ್ಯಾಹ್ನ 12ಗಂಟೆ ನಂತರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ಆಸ್ಪತ್ರೆ, ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಉಳಿದ ವ್ಯವಹಾರಗಳಿಗೆ ನಿರ್ಬಂಧ ಹೇರಲಾಗಿದೆ.

ನಿಯಮ ಉಲ್ಲಂಘಿಸಿ ವಾಹನ ಸಂಚಾರ ಮಾಡಿದ್ರೆ 2ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಮೈಸೂರು ನಗರ ಡಿಸಿಪಿ ಪ್ರಕಾಶ್ ಗೌಡ ಆದೇಶ ನೀಡಿದ್ದಾರೆ. ಈಗಾಗಲೇ 5ಸಾವಿರ ವಾಹನಗಳ ಸೀಜ್ ಮಾಡಲಾಗಿದ್ದು, ಹಲವು ವಾಹನಗಳಿಗೆ ಮೈಸೂರು ನಗರ ಪೊಲೀಸರು ದಂಡ ವಿಧಿಸಿದ್ದಾರೆ. ಒಟ್ಟು 1.68 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಮೈಸೂರು ಇನ್ನೂ ರೆಡ್ ಜೋನ್ ನಲ್ಲೇ ಇದೆ. ಹಾಗಾಗಿ ದಂಡ ಪ್ರಕ್ರಿಯೆ ಮುಂದುವರೆಯುತ್ತೆ. ಸಾರ್ವಜನಿಕ ಅನಗತ್ಯ ಓಡಾಟ ನಿಲ್ಲಿಸಬೇಕು ಎಂದು ಸಾರ್ವಜನಿಕರಿಗೆ ಮೈಸೂರು ಡಿಸಿಪಿ ಪ್ರಕಾಶ್ ಗೌಡ ಎಚ್ಚರಿಕೆ ನೀಡಿದ್ದಾರೆ.

Next Story

RELATED STORIES