ಪ್ರಥಮ್ ಕೊರೊನಾ ವಿರುದ್ಧದ ಹೋರಾಟಕ್ಕೆ ಆನೆಬಲ..!

ದೇಶದಲ್ಲಿ ಹಸಿವಿನಿಂದ ಬಳಲ್ತಿರೋ, ಅದೆಷ್ಟೋ ಜನರ ನೋವಿಗೆ ಸ್ಪಂದಿಸ್ತಿದ್ದಾರೆ ನಮ್ಮ ಸೆಲೆಬ್ರೆಟಿಗಳು. ಇದೀಗ ನಮ್ಮ ಸೆಲೆಬ್ರೆಟಿಗಳ ಮಹತ್ಕಾರ್ಯಕ್ಕೆ ರಾಜಕೀಯ ಧುರೀಣರು, ಮತ್ತವರ ಮಕ್ಕಳು ಕೂಡ ಕೈ ಜೋಡಿಸಿದ್ದಾರೆ. ಅಪ್ಪ ಕೊಟ್ಟ ಪಾಕೆಟ್ ಮನಿಯನ್ನು ಕೂಡಿಟ್ಟು, ಆ ಹಣದಿಂದ ಸಂಕಷ್ಟದಲ್ಲಿದ್ದವ್ರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಬಿಗ್ಬಾಸ್ ಖ್ಯಾತಿಯ ನಟ ಪ್ರಥಮ್, ತಮ್ಮದೇ ಆದ ಸ್ಯಾಂಡಲ್ವುಡ್ ಕೋವಿಡ್ ವಾರಿಯರ್ಸ್ ಅನ್ನೋ ತಂಡ ಕಟ್ಟಿಕೊಂಡು, ಹಸಿದವ್ರಿಗೆ ಅನ್ನ ಹಾಕೋ ಪುಣ್ಯದ ಕೆಲಸ ಮಾಡ್ತಿದ್ದಾರೆ. ಮತ್ತೊಂದ್ಕಡೆ ಪ್ರಥಮ್ ನಿರ್ದೇಶನದ ನಟಭಯಂಕರ ಸಿನಿಮಾ ಹೆಸ್ರಿನಲ್ಲಿ ಪ್ರಥಮ್ ಅಭಿಮಾನಿಗಳು ಕೂಡ ತಮ್ಮ ಕೈಲಾದ ಸೇವೆ ಮಾಡ್ತಿದ್ದಾರೆ.
ನಟಭಯಂಕರ ತಂಡ ಬಹುದಿನಗಳಿಂದ ಬೀದರ್ನಲ್ಲಿ ಸಂಕಷ್ಟದಲ್ಲಿರೋರಿಗೆ ಆಹಾರ ಪೂರೈಕೆ ಮಾಡ್ತಿದ್ದಾರೆ. ಅದು ಹೇಗಪ್ಪಾ ಅಂದ್ರೆ(?) ಬೆಂಗಳೂರಿನಿಂದ ಬೀದರ್ವರೆಗೂ ಅಂದ್ರೆ ಸುಮಾರು 700 ಕಿ ಮೀ. 10 ಬೈಕ್ಗಳಲ್ಲಿ , 15 ಹುಡುಗರ ತಂಡ ಆಹಾರ ಪದಾರ್ಥಗಳನ್ನು ಇಟ್ಕೊಂಡು ಅಲ್ಲಿವರೆಗೂ ಟ್ರಾವೆಲ್ ಮಾಡಿ, ಅಲ್ಲಿನ ಜನಕ್ಕೆ ನೆರವಾಗ್ತಿದ್ದಾರೆ.
ಪ್ರಥಮ್ರ ಈ ಕೆಲಸವನ್ನ ಗಮನಿಸಿರೋ ಜಾರಕಿಹೊಳಿ ಕುಟುಂಬದ ಕುಡಿಗಳಾದ ಸನತ್ ಮತ್ತು ಸರ್ವೋತ್ತಮ್ ಸ್ವತಃ ಪ್ರಥಮ್ಗೆ ಕಾಲ್ ಮಾಡಿ, ನಾವೂ ಕೂಡ ನಿಮ್ಮ ಕೆಲಸಕ್ಕೆ ಕೈ ಜೋಡಿಸ್ತಿವಿ ಅಂತ ಮುಂದೆ ಬಂದಿದ್ದಾರೆ. ಅಂದ್ಹಾಗೇ ಸನತ್ ಮತ್ತು ಸರ್ವೋತ್ತಮ್ ಇಬ್ಬರೂ ಸತೀಶ್ ಜಾರಕಿಹೊಳಿಯವರ ಸಹೋದರ ಭೀಮ್ಸೇನ್ ಜಾರಕಿಹೊಳಿಯವರ ಮಕ್ಕಳು. ಇನ್ನು ಇಂಜಿನಿಯನಿರಿಂಗ್ ಓದ್ತಿರೋ ಇವ್ರು ಅಪ್ಪನ ಹಣದಿಂದ ಅಲ್ಲದೇ, ತಾವು ಸೇವಿಂಗ್ ಮಾಡಿದ್ದ 30 ಸಾವಿರ ರೂಪಾಯಿಯನ್ನ ಸಂಕಷ್ಟದಲ್ಲಿದ್ದವ್ರಿಗೆ ದೇಣಿಗೆಯಾಗಿ ನೀಡಿದ್ದಾರೆ.
ಇಷ್ಟೇ ಅಲ್ಲ, ಕೊರೊನಾ ವಿರುದ್ಧದ ಪ್ರಥಮ್ ಮತ್ತು ತಂಡದ ಹೋರಾಟ ನೋಡಿ, ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್ ಮತ್ತು ಅವ್ರ ಪುತ್ರ ನಿಶಾಂತ್ ಕೂಡ ಸಹಾಯಕ್ಕೆ ಧಾವಿಸಿದ್ದಾರೆ. ಸುಮಾರು 50 ದಿನಸಿ ಕಿಟ್ಗಳನ್ನ ಪ್ರಥಮ್ ತಂಡಕ್ಕೆ ತಲುಪಿಸಿದ್ದಾರೆ. ಅಂದ್ಹಾಗೇ ಈ ಕಿಟ್ಗಳನ್ನ ಮಂಗಳಮುಖಿಯರಿಗೆ, ಕಾರ್ಮಿಕರಿಗೆ ತಲುಪಿಸಲಾಗಿದೆ.
ಇನ್ನು ನಟ ನಿರ್ದೇಶಕ ಪ್ರಥಮ್ ಕೂಡ ಸತತವಾಗಿ ತಮ್ಮ ಸಹಾಯ ಕಾರ್ಯವನ್ನ ಮುಂದುವರೆಸಿದ್ದಾರೆ. ಒಂದಷ್ಟು ಉಳ್ಳವರ ನೆರವು ಪಡೆದು, ತಾವು ಕೂಡ ಸ್ವಂತ ಖರ್ಚಿನಿಂದ ಸಂಕಷ್ಟದಲ್ಲಿರೋರಿಗೆ ಆಹಾರ ಪೂರೈಕೆ ಮಾಡ್ತಿದ್ದಾರೆ.
ಅರ್ಚನಾಶರ್ಮಾ. ಎಂಟರ್ಟೈನ್ಮೆಂಟ್ ಬ್ಯುರೋ,ಟಿವಿ5