Top

ಲಾಕ್​ಡೌನ್​ ಕೋವಿಡ್​-19 ವೈರಸ್​​ ತಡೆಗಟ್ಟಲ್ಲ ಇದನ್ನು ನಿಲ್ಲಿಸಿ - ರಾಹುಲ್​ ಗಾಂಧಿ

ಲಾಕ್​ಡೌನ್​ ಕೋವಿಡ್​-19 ವೈರಸ್​​ ತಡೆಗಟ್ಟಲ್ಲ ಇದನ್ನು ನಿಲ್ಲಿಸಿ - ರಾಹುಲ್​ ಗಾಂಧಿ
X

ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್​ಡೌನ್ ಪರಿಹಾರವಲ್ಲ, ಸರ್ಕಾರವು "ಆಕ್ರಮಣಕಾರಿ ಮತ್ತು ಕಾರ್ಯತಂತ್ರ" ಪರೀಕ್ಷೆಗೆ ಹೋಗಬೇಕು ಭಾರತದಲ್ಲಿ ಹಾಟ್‌ಸ್ಪಾಟ್ ಮತ್ತು ಹಾಟ್‌ಸ್ಪಾಟ್ ಅಲ್ಲದ ಎರಡು ವಲಯಗಳು ಇರಬೇಕು ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅವರು ಗುರುವಾರ ಸಲಹೆ ನೀಡಿದ್ದಾರೆ.

ವೀಡಿಯೊ ಆ್ಯಪ್ ಮೂಲಕ ಮಾಧ್ಯಮಗಳನ್ನು ಉದ್ದೇಶಿಸಿ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಅವರು, ಲಾಕ್​ಡೌನ್ ವೈರಸ್​ಅನ್ನು ಯಾವುದೇ ರೀತಿಯಲ್ಲಿ ಸೋಲಿಸುವುದಿಲ್ಲ, ಇದು ಸ್ವಲ್ಪ ಸಮಯದವರೆಗೆ ವೈರಸ್ ಅನ್ನು ನಿಲ್ಲಿಸಲು ಮಾತ್ರ ಸಹಾಯ ಮಾಡುತ್ತದೆ. ಇದನ್ನು ಮಾಡಲು ಏಕೈಕ ಮಾರ್ಗವೆಂದರೆ ಪರೀಕ್ಷೆಯನ್ನು ಹೆಚ್ಚಿಸುವುದು, ವೈರಸ್​ಅನ್ನು ಬೆನ್ನಟ್ಟುವುದು ಇದು ಸರ್ಕಾರಕ್ಕೆ ನನ್ನ ಸಲಹೆ ಎಂದು ಅವರು ಹೇಳಿದ್ದಾರೆ.

ಇದೀಗ, ಸರ್ಕಾರವು ವೈರಸ್ ಅನ್ನು ಬೆನ್ನಟ್ಟುತ್ತಿದೆ, ಅದು ಭಾರತದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಸರಿಯಾದ ಫಲಿತಾಂಶವನ್ನು ನೀಡುವುದಿಲ್ಲ ಎಂದರು.

ಪ್ರಸ್ತುತ ಪರೀಕ್ಷಾ ಬೂತ್​ಗಳು ತುಂಬಾ ಕಡಿಮೆ. ನಾನು, ಪರೀಕ್ಷೆಯನ್ನು ಬೂತ್​ಗಳನ್ನು ಹೆಚ್ಚಿಸಲು ಪ್ರಸ್ತಾಪಿಸುತ್ತಿದ್ದೇನೆ. ಪರೀಕ್ಷೆಯನ್ನು ಆಕ್ರಮಣಕಾರಿ ಆಗಿ ಜಾರಿ ಮಾಡುವುದು. ರಾಜ್ಯಗಳ ಹೋರಾಟಕ್ಕೆ ಸಹಾಯ ಮಾಡಲು ಪರೀಕ್ಷೆಯನ್ನು ಗರಿಷ್ಠಗೊಳಿಸಿ ಮತ್ತು ಪರೀಕ್ಷೆಯನ್ನು ಕಾರ್ಯತಂತ್ರವಾಗಿ ಬಳಸಿ ಇದನ್ನು ಸರ್ಕಾರಕ್ಕೆ ನಾನು ನೀಡುತ್ತಿರುವ ಸಲಹೆ ಎಂದು ಅವರು ತಿಳಿಸಿದ್ದಾರೆ.

Next Story

RELATED STORIES