Top

ಸಿದ್ದರಾಮಯ್ಯ ನನ್ನ ಮೇಲೆ ಎಫ್​​ಐಆರ್​ ದಾಖಲಿಸಲು ಹೇಳಿದ್ದಾರೆ, ನಾನು ಸ್ವಾಗತಿಸುತ್ತೇನೆ

ಸಿದ್ದರಾಮಯ್ಯ ನನ್ನ ಮೇಲೆ ಎಫ್​​ಐಆರ್​ ದಾಖಲಿಸಲು ಹೇಳಿದ್ದಾರೆ, ನಾನು ಸ್ವಾಗತಿಸುತ್ತೇನೆ
X

ಬೆಂಗಳೂರು: ಕೊರೊನಾ ಹಿನ್ನೆಲೆ ಲಾಕ್​ಡೌನ್​ ಮಾಡಲಾಗಿದೆ ಮೋದಿ ಅವರ ಮಾತಿಗೆ ಬೆಲೆ ಕೊಟ್ಟು ಸೋಂಕಿತರನ್ನು ತಪಾಸಣೆ ಮಾಡಲಾಗುತ್ತಿದೆ ಆದರೆ ಕೆಲವರು ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರಾಣುಕಾಚಾರ್ಯ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಸಾರ್ವಜನಿಕರು ಮನೆ ಒಳಗಿದ್ದು ಲಾಕ್​ಡೌನ್​​ಗೆ ಸ್ಪಂದಿಸುತ್ತಿದ್ದಾರೆ. ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗಿ ಆದವರನ್ನು ತಪಾಸಣೆಗೆ ಒಳಗಾಗಲು ಸೂಚನೆ ನೀಡಲಾಗಿದೆ. ಕೆಲಸವರು ತಪಾಸಣೆ ಮಾಡಿಸಿಕೊಂಡಿದ್ದಾರೆ. ಆದರೆ, ಕೆಲವರು ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ ಅಂತಹ ಕೆಲವರನ್ನು ಅನಿವಾರ್ಯವಾಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಅವರು ದಾದಿಯರ ಮೇಲೆ ಗೂಂಡಾಗಿರಿ ಮಾಡಿದರು ಎಂದರು.

ಇನ್ನು ಯಾರು ವೈರಸ್ ಹರಡುತ್ತಾರೆ ಅವರನ್ನು ಗುಂಡಿಟ್ಟು ಹೊಡಿರಿ ಅಂತ ಹೇಳಿದ್ದು ಸತ್ಯ. ಸಿದ್ದರಾಮಯ್ಯ ನನ್ನ ವಿರುದ್ಧ ಎಫ್​ಐಆರ್ ದಾಖಲಿಸಲು ಹೇಳಿದ್ದಾರೆ. ನಾನು ನಿಮ್ಮ ಮಾತನ್ನು ಸ್ವಾಗತಿಸುತ್ತೇನೆ. ಸಿದ್ದರಾಮಯ್ಯನವರೇ ನಿಮಗೆ ದಾದಿಯರ ಮೇಲೆ ಉಗುಳಿದಾಗ ಅನುಕಂಪ ಬರಲಿಲ್ವೇ (?) ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಸಿದ್ದರಾಮಯ್ಯ ಅವರಿಗೆ ಮರು ಪ್ರಶ್ನೆ ಮಾಡಿದ್ದಾರೆ.

Next Story

RELATED STORIES