Top

ಅರ್ಥ ಪೂರ್ಣ ಹುಟ್ಟಹಬ್ಬ ಆಚರಿಸಿಕೊಂಡ ಪಡ್ಡೆಹುಲಿ

ಅರ್ಥ ಪೂರ್ಣ ಹುಟ್ಟಹಬ್ಬ ಆಚರಿಸಿಕೊಂಡ ಪಡ್ಡೆಹುಲಿ
X

ಕೊರೊನಾ ಸಮಸ್ಯೆಯಿಂದ ಸಂಕಷ್ಟಕ್ಕೀಡಾದವರಿಗೆ ನಮ್ಮ ಸ್ಯಾಂಡಲ್​ವುಡ್​ನ ಸೆಲೆಬ್ರೆಟಿಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಪ್ರತಿದಿನ ಹಸಿದವ್ರಿಗೆ ಊಟ ಹಾಕುತ್ತಿದ್ದಾರೆ. ರಸ್ತೆಗಿಳಿದು, ಮನೆಮನೆಗೂ ಭೇಟಿ ನೀಡಿ ದಿನಸಿ, ತರಕಾರಿ, ಆಹಾರ ನೀಡೋ ಮೂಲಕ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಅದೇ ಹಾದಿಯಲ್ಲಿ ಪಡ್ಡೆಹುಲಿ ಖ್ಯಾತಿಯ ನಟ ಶ್ರೇಯಸ್​ ಕೂಡ ತಮ್ಮ ಹುಟ್ಟುಹಬ್ಬದ ಸಾರ್ಥಕತೆ ಮೆರೆದಿದ್ದಾರೆ.

ಸ್ಯಾಂಡಲ್​ವುಡ್​ನ ಪ್ರತಿಯೊಬ್ಬ ಸೆಲೆಬ್ರೆಟಿಗಳು ಮತ್ತವರ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಹಸಿದವರಿಗೆ ಅನ್ನ ಹಾಕುತ್ತಿದ್ದಾರೆ. ಬಡವರಿಗೆ ದಿನಸಿ-ತರಕಾರಿ ಹಂಚುವ ಕೆಲಸ ಮಾಡುತ್ತಿದ್ದಾರೆ. ಕೊರೊನ ಭಯದಿಂದ ಎಲ್ಲರೂ ಮನೆಯೊಳಗೆ ಇದ್ದರೆ ಕೆಲ ಸೆಲೆಬ್ರೆಟಿಗಳು ಬೀದಿಗಿಳಿದು ಮನೆಮನೆಗೂ ಆಹಾರ ಪೂರೈಕೆ ಮಾಡೋ ನಿಟ್ಟಿನಲ್ಲಿ ಮಾನವೀಯತೆ ಮರೆತಿದ್ದಾರೆ.

ಇದೇ ಹಾದಿಯಲ್ಲಿ ನಿರ್ಮಾಪಕ ಕೆ. ಮಂಜು ಪುತ್ರ, ಪಡ್ಡೆಹುಲಿ ಚಿತ್ರ ಖ್ಯಾತಿಯ, ನಟ ಶ್ರೇಯಸ್ ಕೂಡ ಹಸಿದವರಿಗೆ ಸಹಾಯ ಹಸ್ತಚಾಚಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಶ್ರೇಯಸ್ ಅರ್ಥಪೂರ್ಣವಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡಿದ್ದಾರೆ. ಕೇಕ್​ ಕತ್ತರಿಸಿ, ಬತ್​ಡೇ ಸೆಲೆಬ್ರೇಟ್ ಮಾಡೊ ಬದಲು, ಬಡವರಿಗೆ ಆಹಾರ ಪೂರೈಕೆ ಮಾಡೋ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.

ಕೇವಲ ಹುಟ್ಟುಹಬ್ಬದ ದಿನ ಮಾತ್ರವಲ್ಲದೇ ಕಳೆದ ದಿನಗಳಿಂದ್ಲೇ ಸ್ವತಃ ಶ್ರೇಯಸ್ ಸುಮಾರು 30 ಕ್ಕೂ ಹೆಚ್ಚು ಏರಿಯಾಗಳಿಗೆ ಭೇಟಿ ನೀಡಿ, ಸ್ಲಂ ನಿವಾಸಿಗಳಿಗೆ ಊಟ ಹಂಚುವ ಕೆಲಸ ಮಾಡಿದ್ದಾರೆ.

ಸದ್ಯ ಹಸಿದವರಿಗೆ ಅನ್ನ ನೀಡೋದಕ್ಕಿಂತ, ಪುಣ್ಯದ ಕೆಲಸ ಮತ್ತೊಂದಿಲ್ಲ, ಇರುವವರು, ಇಲ್ಲದವರೊಂದಿಗೆ ಹಂಚಿ ತಿನ್ನೋದಕ್ಕಿಂತ ಸಾರ್ಥಕ ಜೀವನ ಮತ್ತೊಂದಿಲ್ಲ, ನಮ್ಮ ಕಡೆಯಿಂದ ನಮ್ಮೆಲ್ಲಾ ಚಿತ್ರರಂಗದ ಸೆಲೆಬ್ರೆಟಿಗಳಿಗೊಂದು ಸೆಲ್ಯೂಟ್.

Next Story

RELATED STORIES