ಇವರೇ ಹೀಗೆ ಮಾಡಿದರೆ ಸಾಮಾನ್ಯ ಜನರ ಗತಿಯೇನು....!?

X
TV5 Kannada23 March 2020 1:16 PM GMT
ರಾಯಚೂರು: ಇವರು ಹೇಳುವುದೊಂದು ಮಾಡುವುದು ಇನ್ನೊಂದು. ಇಡೀ ದೇಶವೇ ಕರೋನ ವೈರಸ್ ತಡೆಗಟ್ಟಲು ಹರಸಾಹಸ ಪಡುತ್ತಿದೆ. ಇನ್ನೊಂದು ಕಡೆ ಸಾರ್ವಜನಿಕರಿಗೆ ಕೆಲವು ಸರಕಾರದ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇಂತಹದರಲ್ಲಿ ರಾಯಚೂರು ಜಿಲ್ಲಾಪಂಚಾಯತ್ ಸಿ ಇ ಓ ಅವರು ಒಂದು ಸಣ್ಣ ಕೋಣೆಯಲ್ಲಿ ನಲವತ್ತು ಗ್ರಾಮ ಪಂಚಯಾತ್ ನ ಅರವತ್ತಕ್ಕೂ ಹೆಚ್ಚು ಸಿಬ್ಬಂದ್ದಿಗಳನ್ನು ಒಟ್ಟು ಸೇರಿಸಿ ವಿಡಿಯೋ ಕಾನ್ಪರೆನ್ಸ್ ಮಾಡುತಿದ್ದಾರೆ.
ಅದು ಸ್ವಚ್ಚ ಭಾರತ ಮಿಷನ್ ಯೋಜನೆ ಅಡಿಯಲ್ಲಿ. ಈ ವಿಸಿ ಗೆ ಪಂಚಾಯತ್ ಸಿಬ್ಬಂದ್ದಿಗಳು ಭಯದಿಂದಲೆ ಪಾಲ್ಗೊಂಡಿದ್ದಾರೆ. ಸರಕಾರ ಗುಂಪು ಸೇರ ಬೇಡಿ, ಸೇರಿದರೆ ಕರೋನ ಹರಡುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ. ಅದಕ್ಕಾಗಿ ನಿನ್ನೆ ದೇಶವನ್ನು ಲಾಕ್ ಡೌನ್ ಮಾಡಿದೆ. ಇಂತಹ ಸಂದರ್ಭದಲ್ಲಿ ವಿಸಿ ವಿಡಿಯೋ ಕಾನ್ಫರೆನ್ಸ್ ಮಾಡುವುದಕ್ಕೆ ಸಿಬ್ಬಂದ್ದಿ ಭಯದಿಂದಲೆ ವಿರೋಧ ವ್ಯಕ್ತಪಡಿಸುತಿದ್ದಾರೆ. ಆದರೆ ಮೇಲಧಿಕಾರಿಗಳ ಆದೇಶಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲು ಹಿಂದೇಟು ಹಾಕುತಿದ್ದಾರೆ.
Next Story