Top

'ಪೊಲೀಸರ ಸುರಕ್ಷತೆಯೂ ನಮಗೆ ಮುಖ್ಯ. ಪೊಲೀಸರ ಕೆಲಸ ಅತ್ಯಂತ ಶ್ಲಾಘನೀಯ'

ಪೊಲೀಸರ ಸುರಕ್ಷತೆಯೂ ನಮಗೆ ಮುಖ್ಯ. ಪೊಲೀಸರ ಕೆಲಸ ಅತ್ಯಂತ ಶ್ಲಾಘನೀಯ
X

ಬೆಂಗಳೂರು: ಟಿವಿ5 ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, ಪ್ರತಿ ದಿನ ಕರೋನಾ ಬೆಳವಣಿಗೆ, ಸರ್ಕಾರದ ಕ್ರಮ, ಸಾರ್ವಜನಿಕರನ್ನು ಎಚ್ಚರಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಕರೋನಾ ಟಾಸ್ಕ್ ಫೋರ್ಸ್ ಮಾಡಲಿದೆ ಎಂದಿದ್ದಾರೆ.

ಸಾರ್ವಜನಿಕರಿಗೆ ಮಾಹಿತಿ ಕೊಡುವುದು. ಸರ್ಕಾರ ಬಿಗಿಯಾದ ಕ್ರಮ ಕೈಗೊಳ್ಳುತ್ತಿದೆ. ಈ ಬಗ್ಗೆ ಜನರಿಗೆ ಮಾಹಿತಿ ಕೊಟ್ಟು ಮುಂಜಾಗ್ರತಾ ಕ್ರಮ ತಗೊಳ್ತೀವಿ. ಯಾವ ರೀತಿ ಕರೋನಾ ಸೋಂಕಿತರ ಮೇಲೆ ನಿಗಾ ಇಡಬೇಕು ಎಂಬ ಬಗ್ಗೆ ಟಾಸ್ಟ್ ಪೋರ್ಸ್ ಕೆಲಸ ಮಾಡಲಿದೆ. ಆರೋಗ್ಯ, ಕಂದಾಯ, ವೈದ್ಯಕೀಯ ಶಿಕ್ಷಣ, ಗೃಹ ಇಲಾಖೆಗಳ ನಡುವೆ ಸಮನ್ವಯತೆಯ ಕೆಲಸ ಟಾಸ್ಕ್ ಫೋರ್ಸ್ ಮಾಡುತ್ತದೆ ಎಂದಿದ್ದಾರೆ.

ಅಲ್ಲದೇ, ಪೊಲೀಸರ ಕಾರ್ಯ ಶ್ಲಾಘನೆ ಮಾಡಿದ ಬೊಮ್ಮಾಯಿ, ನಮ್ಮ ಪೋಲಿಸರು 24/7 ಕೆಲಸ ಮಾಡ್ತಿದ್ದಾರೆ. ಪೊಲೀಸರ ಸುರಕ್ಷತೆಯೂ ನಮಗೆ ಮುಖ್ಯ. ಪೊಲೀಸರ ಕೆಲಸ ಅತ್ಯಂತ ಶ್ಲಾಘನೀಯ. ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನಾವು ಕೊಡುತ್ತೇವೆ ಎಂದಿದ್ದಾರೆ.

Next Story

RELATED STORIES