ಟೆಸ್ಟ್ನಲ್ಲಿ ವಿರಾಟ್ ಪಡೆಗೆ ಕಾಡಿದ ಮೂವರು ವಿಲನ್ಗಳು

ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿ ಗೆದ್ದು ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ, ರಿಯಲ್ ಟೆಸ್ಟ್ ಕ್ರಿಕೆಟ್ ಅಂತಾ ಕರೆಯಲ್ಪಡುವ ಟೆಸ್ಟ್ ಕ್ರಿಕೆಟ್ನಲ್ಲಿ ಮುಖಭಂಗ ಅನುಭವಿಸಿದೆ. ಅದ್ರಲ್ಲೂ ವಿಶ್ವದ ನಂ.1 ಟೆಸ್ಟ್ ತಂಡವಾಗಿರುವ ಟೀಮ್ ಇಂಡಿಯಾ, ಟೆಸ್ಟ್ ಕ್ರಿಕೆಟ್ನಲ್ಲಿ ಆ ಮೂವರು ಕಿವೀಸ್ ವೇಗಿಗಳ ದಾಳಿಗೆ ತತ್ತರಿಸಿ ಹೀನಾಯ ಸೋಲು ಅನುಭವಿಸಿತು.
ನ್ಯೂಜಿಲೆಂಡ್ ವಿರುದ್ಧದ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಕಿವೀಸ್ ಬೌಲರ್ಗಳ ದಾಳಿಗೆ ಕೊಹ್ಲಿ ಸೈನ್ಯ ಪತರಗುಟ್ಟಿತ್ತು. ವಿಶ್ವದ ಬಲಾಡ್ಯ ತಂಡಗಳ ಬೌಲರ್ಗಳ ಹುಟ್ಟಡಗಿಸಿದ್ದ ನಂ.1 ಟೆಸ್ಟ್ ತಂಡದ ಬ್ಯಾಟ್ಸ್ಮನ್ಗಳು ಕಿವೀಸ್ ಬೌಲರ್ಗಳ ಬೆಂಕಿಚೆಂಡುಗಳಿಗೆ ಬೆಂದು ಬೆಂಡಾಗಿ ಹೋಗಿದರು. 2ನೇ ಟೆಸ್ಟ್ ಪಂದ್ಯದಲ್ಲೂ ಆ ವೇಗಿಗಳ ಆಬ್ಬರಕ್ಕೆ ನಲುಗಿ ವೈಟ್ವಾಶ್ ಮುಖಭಂಗ ಅನುಭವಿಸಿತ್ತು.
ಟೆಸ್ಟ್ ಸರಣಿಯ ವೈಟ್ವಾಶ್ ಮುಖಭಂಗದಿಂದ ಟೀಮ್ ಇಂಡಿಯಾ ಪಾರಾಗಬೇಕಿದ್ದರೆ. ಕಿವೀಸ್ ತಂಡದ ಆ ಮೂವರು ವೇಗಿಗಳ ದಾಳಿಯನ್ನ ಸಮರ್ಥವಾಗಿ ಎದುರಿಸಬೇಕಿತ್ತು. ಆ ತ್ರಿಮೂರ್ತಿಗಳ ತಂತ್ರಪ್ರತಿತಂತ್ರವನ್ನ ಬೇದಿಸಬೇಕಿತ್ತು. ಆದ್ರೆ, ಕ್ರೈಸ್ಟ್ಚರ್ಚ್ನಲ್ಲೂ ಆ ತ್ರಿವಳಿ ವೇಗಿಗಳ ದಾಳಿಯನ್ನ ತಡೆಯೊಡ್ಡಲಾಗದೆ ಟೀಮ್ ಇಂಡಿಯಾ ವೈಟ್ವಾಶ್ ಮುಖಭಂಗ ಅನುಭವಿಸಿದೆ.
ಟೀಮ್ ಇಂಡಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಡಲ್ ಆಗಿದ್ದ ಟಿಮ್ ಸೌಥಿ ಟೆಸ್ಟ್ ಸರಣಿಯ ಭರ್ಜರಿ ಕಮ್ಬ್ಯಾಕ್ ಮಾಡಿದರು. ಟಿ20 ಸರಣಿಯಲ್ಲಿ ಕಿವೀಸ್ ಪಾಲಿಗೆ ವಿಲನ್ ಆಗಿದ್ದ ಸೌತಿ, ಟೆಸ್ಟ್ ಸರಣಿಯಲ್ಲಿ ಮಾತ್ರ ಟೀಮ್ ಇಂಡಿಯಾಕ್ಕೆ ವಿಲನ್ ಆಗಿಬಿಟ್ಟರು. ಅದರಲ್ಲೂ ಟ್ರೆಂಟ್ ಬೌಲ್ಟ್ ಜೊತೆ ವಿಕೆಟ್ ಬೇಟೆಯ ರೇಸ್ ನಡೆಸಿದ ಸೌಥಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್ ಎನಿಸಿದರು. ವೆಲ್ಲಿಗ್ಟನ್ ಟೆಸ್ಟ್ನಲ್ಲಿ 9 ವಿಕೆಟ್ ಉರುಳಿಸಿದ ಸೌಥಿ, ಕ್ರೈಸ್ಟ್ ಚರ್ಚ್ನಲ್ಲೂ ಪ್ರಮುಖ ಬ್ಯಾಟ್ಸ್ಮನ್ಗಳನ್ನ ಬೇಟೆಯಾಡಿ ಟೀಮ್ ಇಂಡಿಯಾಕ್ಕೆ ಕಂಟಕವಾಗಿದರು. ಸರಣಿ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ವಿಶೇಷ ಅಂದ್ರೆ ಸೌಥಿ ಉರುಳಿಸಿದ ಅರ್ಧ ವಿಕೆಟ್ಗಳನ್ನೂ ಸಹ ಟೀಮ್ ಇಂಡಿಯಾದ ಯಾವೊಬ್ಬ ಬೌಲರ್ ಕೂಡ ಬೇಟೆಯಾಡಲಿಲ್ಲ.
2 ಟೆಸ್ಟ್ ಪಂದ್ಯಗಳಿಂದ 65.1 ಓವರ್ ಎಸೆದ ಸೌಥಿ, 18 ಓವರ್ ಮೇಡನ್ ಸಹಿತ, 14 ವಿಕೆಟ್ ಉರುಳಿದಿದ್ದಾರೆ. ಇದರಲ್ಲಿ 61 ರನ್ ನೀಡಿ 5 ವಿಕೆಟ್ ಕಬಳಿಸಿದ್ದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ.
ಟಿ20 ಹಾಗೂ ಏಕದಿನ ಸರಣಿಯಿಂದ ದೂರ ಉಳಿದಿದ್ದ ನ್ಯೂಜಿಲೆಂಡ್ ತಂಡದ ಟ್ರಂಪ್ ಕಾರ್ಡ್ ಟ್ರೆಂಟ್ ಬೌಲ್ಟ್, ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಗ್ರೇಟ್ಕಮ್ಬ್ಯಾಕ್ ಮಾಡಿದ್ರು.. ಅದ್ರಲ್ಲೀ 2ನೇ ಇನ್ನಿಂಗ್ಸ್ನಲ್ಲಿ ಅದ್ಬುತ ಸ್ಪೆಲ್ ಮಾಡಿದ್ದ ಬೌಲ್ಟ್ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್ಆಪ್ ನೆಲಕಚ್ಚುವಂತೆ ಮಾಡಿದ್ರು.. ಅದ್ರಲ್ಲೂ ತಮ್ಮ ಇಷ್ಟದ ಕ್ರೈಸ್ಟ್ಚರ್ಚ್ ಅಂಗಳದಲ್ಲಿ ವಿಜೃಭಿಸಿದ ಟ್ರೆಂಟ್ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳನ್ನ ಪೆವಿಲಿಯನ್ ಸೇರುವಂತೆ ಮಾಡಿದರು. ಈ ಮೂಲಕ ಕ್ರೈಸ್ಟ್ಚರ್ಚ್ನ ಟಾಪ್ ವಿಕೆಟ್ ಟೇಕರ್ ಬೌಲರ್ ಟ್ರೆಂಟ್ ಬೌಲ್ಟ್ ಸರಣಿಯಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ಹೆಗ್ಗಳಿಕೆ ಪಾತ್ರರಾದರು
2 ಟೆಸ್ಟ್ ಪಂದ್ಯಗಳಿಂದ 71 ಓವರ್ ಎಸೆದ ಟ್ರೆಂಟ್ ಬೌಲ್ಟ್, 16 ಓವರ್ ಮೇಡನ್ ಸಹಿತ, 11 ವಿಕೆಟ್ ಉರುಳಿದಿದ್ದಾರೆ. ಇದರಲ್ಲಿ 28 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ.
ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಕಾಡಿದ್ದ ಕೈಲ್ ಜಮ್ಮೀಸನ್, ಟೆಸ್ಟ್ ಸರಣಿಯಲ್ಲೂ ಟೀಮ್ ಇಂಡಿಯಾಕ್ಕೆ ವಿಲನ್ ಆಗಿ ಕಾಡಿದರು. ಅದರಲ್ಲೂ ಟೀಮ್ ಇಂಡಿಯಾದ ಪ್ರಮುಖ ವಿಕೆಟ್ಗಳನ್ನೇ ಬೇಟೆಯಾಡಿದ ಜಮ್ಮೀಸನ್, ವಿಶ್ವ ನಂ.1 ತಂಡದ ಮಧ್ಯಮ ಕ್ರಮಾಂಕವನ್ನೇ ಹೆಚ್ಚು ಟಾರ್ಗೆಟ್ ಮಾಡಿದರು. ವಿರಾಟ್ ಕೊಹ್ಲಿಯನ್ನು ಒಮ್ಮೆ. ಪೂಜಾರರನ್ನ 2 ಬಾರಿ ಹಾಗೂ ಪಂತ್, ವಿಹಾರಿಗೆ ತಲಾ ಒಮ್ಮೆ ಪೆವಿಲಿಯನ್ ಹಾದಿ ತೋರಿಸಿದರು. ಕ್ರೈಸ್ಟ್ಚರ್ಚ್ ಅಂಗಳದಲ್ಲಿ ಅದ್ಬುತ ಸ್ಪೆಲ್ನಿಂದ ಮ್ಯಾಚ್ ವಿನ್ನರ್ ಬೌಲರ್ ಎನಿಸಿದರು.
2 ಟೆಸ್ಟ್ ಪಂದ್ಯಗಳಿಂದ 57 ಓವರ್ ಎಸೆದ ಕೈಲ್ ಜಮ್ಮೀಸನ್, 17 ಓವರ್ ಮೇಡನ್ ಸಹಿತ, 09 ವಿಕೆಟ್ ಉರುಳಿದಿದ್ದಾರೆ. ಇದರಲ್ಲಿ 45 ರನ್ ನೀಡಿ 5 ವಿಕೆಟ್ ಕಬಳಿಸಿದ್ದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ.