Top

'ದೇಶದಲ್ಲಿ ಬಿಜೆಪಿಯ ನಡೆ ಚಿತ್ರ-ವಿಚಿತ್ರವಾಗಿದೆ'

ದೇಶದಲ್ಲಿ ಬಿಜೆಪಿಯ ನಡೆ ಚಿತ್ರ-ವಿಚಿತ್ರವಾಗಿದೆ
X

ಕೋಲಾರ: ಬಿಜೆಪಿ ಅಜೆಂಡಾ ದೇಶದ ವಿರುದ್ದಾಗಿದೆ ಎಂದು ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡ ಅವರು ಬುಧವಾರ ಹೇಳಿದ್ದಾರೆ.

ಮಾಲೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ದೇಶವನ್ನು ಬಿಜೆಪಿ ಏನು ಮಾಡುತ್ತೋ ಎಂಬ ಆತಂಕ ಸೃಷ್ಟಿಯಾಗಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಸದನದಲ್ಲಿ ಯತ್ನಾಳ್ ಹೇಳಿಕೆ ಮೇಲೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಿಗೆ ಬಿಜೆಪಿಯಿಂದ ಅಪಮಾನವಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಮೇಲೆ ಬಿಜೆಪಿಗೆ ನಂಬಿಕೆಯೇ ಇಲ್ಲ ಎಂದರು.

ಸದ್ಯ ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಡೆಗೆ ನಮ್ಮ ಬೆಂಬಲವಿದೆ. ದೇಶದಲ್ಲಿ ಬಿಜೆಪಿಯ ನಡೆ ಚಿತ್ರ-ವಿಚಿತ್ರವಾಗಿದೆ. ಪೌರತ್ವ ತಿದ್ದುಪಡಿ ಕಾನೂನು ಜಾರಿ ನಂತರ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಲೂರಿನಲ್ಲಿ ಶಾಸಕ ಕೆ.ವೈ. ನಂಜೇಗೌಡ ಅವರು ತಿಳಿಸಿದ್ದಾರೆ.

Next Story

RELATED STORIES