Top

ಪಾಪ್‌ಕಾರ್ನ್ ಮಂಕಿ ಟೈಗರ್ ನೋಡಿದ ಪ್ರೇಕ್ಷಕ ಹೇಳಿದ್ದೇನು..? ಹೇಗಿದೆ ಸಿನಿಮಾ..?

ಪಾಪ್‌ಕಾರ್ನ್ ಮಂಕಿ ಟೈಗರ್ ನೋಡಿದ ಪ್ರೇಕ್ಷಕ ಹೇಳಿದ್ದೇನು..? ಹೇಗಿದೆ ಸಿನಿಮಾ..?
X

ದುನಿಯಾ ಸೂರಿ ಕಲ್ಪನೆಯ ಹಸಿ ಹಸಿ ಭೂಗತ ಜಗತ್ತು 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮೂಲಕ ಅನಾವರಣವಾಗಿದೆ. ಟೀಸರ್​ನಿಂದ ಹುಚ್ಚೆಬ್ಬಿಸಿಕೊಂಡ ಪ್ರೇಕ್ಷಕ ಭರ್ಜರಿಯಾಗಿ ಡಾಲಿ ಧನಂಜಯ್ ಬಳಗವನ್ನು ಬಾಚಿ ಅಪ್ಪಿಕೊಂಡಿದ್ದಾನೆ.

ರಾಜ್ಯಾದ್ಯಂತ ಗ್ರ್ಯಾಂಡ್ ಓಪನಿಂಗ್ ಪಡೆದ PMT

ಸೂರಿ ಕಲ್ಪನೆಯ ಹಸಿ ಹಸಿ ಭೂಗತ ಲೋಕ ಇದು..!

ಅಬ್ಬಬ್ಬಾ ಡಾಲಿ ಧನಂಜಯ ನಿಜಕ್ಕೂ ನಟ ರಾಕ್ಷಸ..!

ಅಂದು ಡಾಲಿ.. ಇಂದು ಮಂಕಿ ಟೈಗರ್ ಸೀನ..

ಸೂರಿ ಕಲ್ಪನೆಯ ಭೂಗತ ಲೋಕವೇ ಬೇರೆ. ನಿಜವಾದ ಅಂಡರ್​​ವರ್ಲ್ಡ್​ ಮೀರಿದ ಅಪ್ ಗ್ರೇಡ್ ಅವರ ಸಿನಿ ಕಲ್ಪನೆ. ಸಿನಿಮಾದಿಂದ ಸಿನಿಮಾಕ್ಕೆ ರಾನೇಸ್ ಅನ್ನು ಹೆಚ್ಚೆಚ್ಚು ತೋರಿಸುತ್ತ ಪ್ರೇಕ್ಷಕರಿಗೆ ಚಿರಪರಿಚಿತರಾದವರು ನಿರ್ದೇಶಕ ಸೂರಿ. ಅದಕ್ಕೆ ಅವರನ್ನ ಸುಕ್ಕ ಸೂರಿ ಎನ್ನುತ್ತೆ ಚಿತ್ರರಂಗ. 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿಯೂ ರಾ ನೇಸ್ ಎದ್ದು ಕಾಣುತ್ತದೆ , ಸೂರಿ ಅಂಡರ್​ವರ್ಲ್ಡ್ ಕಲ್ಪನೆ ನೆಕ್ಸ್ಟ್​​ ಲೆವೆಲ್ಲಿಗೆ ಹೋಗಿದೆ.

PMT ಸ್ಟೋರಿ ಏನ್ ಗುರು..?

ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಸ್ಟೋರಿ ಏನು ಅನ್ನೋದನ್ನು ಸ್ಪಷ್ಟವಾಗಿ ಹೇಳೋದು ಕಷ್ಟ. ಜೈಲು ಶಿಕ್ಷೆಯನ್ನು ಅನುಭವಿಸಿದ ದೇವಿಕಾ ಮತ್ತು ಆಕೆಯ ಪುಟ್ಟ ಕಂದಮ್ಮ , ಬಿಸಿ ರಕ್ತದ ಟೈಗರ್ ಸೀನ , ಸೀನನಿಗೊಬ್ಬಳು ಲವ್ವರು , ಹೆಂಡತಿ , ದೇವಿಕಳೋಟ್ಟಿಗೆ ಲವ್ ಅಫೇರ್, ಅವನ ಸ್ನೇಹಿತ ಮೂಗ , ಅಕ್ಕ-ಭಾವ , ಅಮ್ಮ , ಬೆಂಗಳೂರು ಡಾನ್ , ಹಾವು ರಾಣಿ ಹಿಂಗೆ ಸೂರಿಯವರ ಕಲ್ಪನೆ ಒಂದೇ ಬಾರಿಗೆ ಅಂದಾಜಿಗೆ ಸಿಗೋಲ್ಲ.

ಬೆಳ್ಳಿತೆರೆ ಮೇಲೆ ಮಂಕಿ ಸೀನನ ದರ್ಬಾರ್ ಜೋರು

ಸೂರಿ ಮ್ಯಾಜಿಕ್​- ಡಾಲಿ ಅಬ್ಬರಕ್ಕೆ ಪ್ರೇಕ್ಷಕ ಏನಂದ..?

ಸ್ಟೋರಿ ಕನ್​​ಫ್ಯೂಸ್ ಆಗಿದ್ರು ರಾ ನೇಸ್ ಸಿನಿಮಾದ ಉದ್ದಕ್ಕೂ ಎದ್ದು ಹೊಡೆಯುತ್ತೆ. ಧನಂಜಯ ತಾನೇನು ತಾನೆಂಥ ನಟ ರಾಕ್ಷಸ ಎಂಬುದನ್ನು ಅದ್ಭುತವಾಗಿ ಸಾಬೀತು ಮಾಡಿದ್ದಾರೆ. ಪ್ರತಿಭನ್ವಿತ ನಟಿ ನಿವೇದಿತಾ , ದೇವಕಿ ಪಾತ್ರದಲ್ಲಿ ಆರ್ಭಟಿಸಿದ್ದಾರೆ. ಅಮೃತ್ ಐಯರ್ , ಸುಧಿ , ಸ್ಫರ್ಶ ರೇಖಾ ಜೊತೆಗೆ ಗಿರಿಜಾ ಪಾತ್ರಧಾರಿ ಸಪ್ತಮಿ ನೋಡಗರ ಮನಸಿನಲ್ಲಿ ಉಳಿಯುತ್ತಾರೆ.

ಡೈಲಾಗ್ ಕಡಿಮೆ , ಮಾಂಟೇಜ್ ಸಿಚ್ಯುವೇಷನ್ ಸೀನ್ಸ್ ಜಾಸ್ತಿ. ಹಾಡುಗಳು ಕಡಿಮೆ , ಬ್ಯಾಗ್ರೌಂಡ್ ಮೂಸಿಕ್ ಜಾಸ್ತಿ. ಧೂಮಪಾನ , ಮದ್ಯಪಾನಗಳ ನಡುವೆ ಆ್ಯಕ್ಷನ್ ಸಿಕ್ವೇನ್ಸ್. ಶೇಖರ್ .ಎಸ್ ಕ್ಯಾಮೆರಾ ವರ್ಕ್ ಜೊತೆಗೆ ಚರಣ್ ರಾಜ್ ಮ್ಯೂಸಿಕ್ , ದೀಪು ಎಸ್​ ಕುಮಾರ್ ಎಡಿಟಿಂಗ್ ಪ್ಯಾಟ್ರನ್​​​​​​ ಮಗದೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತೆ.

ಸುಧೀರ್ ನಿರ್ಮಾಣದಲ್ಲಿ ಸಾಕಷ್ಟು ಶ್ರಮವಹಿಸಿ ಅದ್ಭುತವಾಗಿ ಸಿದ್ದವಾಗಿ ನಿಂತಿದೆ ಪಾಪ್ ಕಾರ್ನ್ ಮಂಕಿ ಟೈಗರ್. ಮ್ಯೂಸಿಕ್ , ಮೇಕಿಂಗ್ ಎಲ್ಲವೂ ಎಕ್ಸ್​​ಲೆಂಟ್. ಡೈಲಾಗ್ಸ್​​​​ , ಧೂಮಪಾನ , ಮದ್ಯಪಾನ ಕೊಂಚ ಅತೀ ಅನ್ನಿಸೋದು ಸುಳ್ಳಲ್ಲ. ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್​​ ಇದು ಪಡ್ಡೆ ಹೈಕ್ಳಾ ಮಾಸ್ ಎಂಟರ್​​​ಟೈನರ್ ಎನ್ನಬಹುದು.

TV5 ರೇಟಿಂಗ್: 3.5/5

ಒಟ್ಟಾರೆ ಮೊದಲ ದಿನ ಪಾಪ್​ಕಾರ್ನ್​ ಮಂಕಿ ಟೈಗರ್​​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಸುಕ್ಕಾ ಸೂರಿ ಟೇಕಿಂಗು, ಡಾಲಿ ಆ್ಯಕ್ಟಿಂಗು ಅಭಿಮಾನಿಗಳಿಗೆ ಸಖತ್​ ಕಿಕ್​ ಕೊಡ್ತಿದೆ.

ಶ್ರೀಧರ್ ಶಿವಮೊಗ್ಗ _ಎಂಟರ್​​​​​​​​​​ಟೈನ್ಮೆಂಟ್ ಬ್ಯೂರೋ _ಟಿವಿ5

Next Story

RELATED STORIES