ಕ್ಯಾಪ್ಟನ್ ಕೊಹ್ಲಿ ಸ್ಪಿರಿಟ್ ಆಪ್ ಕ್ರಿಕೆಟ್ ಪ್ರಶಸ್ತಿಗೆ ಭಾಜನ.!

ನವದೆಹಲಿ: 2017, 18ರಲ್ಲಿ ವರ್ಷದ ಕ್ರಿಕೆಟಿಗನಾಗಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಈ ಬಾರಿ ಸ್ಪಿರಿಟ್ ಆಪ್ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬ್ಯಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷದ ನಿಷೇಧ ಶಿಕ್ಷೆಯನ್ನು ಎದುರಿಸಿರುದ್ದ ಸ್ಟೀವ್ ಸ್ಮಿತ್, 2019 ಏಕದಿನ ವಿಶ್ವಕಪ್ ವೇಳೆಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪುನರಾಗಮನ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಭಾರತ ಪಂದ್ಯದ ವೇಳೆ ಸ್ಟೀವ್ ಸ್ಮಿತ್ರನ್ನ ಚೀಟರ್ ಚೀಟರ್ ಹೀಯಾಳಿಸುತ್ತಿದ್ದ ಅಭಿಮಾನಿಗಳಿಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ಕೊಹ್ಲಿ, ಆ ರೀತಿ ಕರೆಯಬೇಡಿ ಚಪ್ಪಾಳೆ ಮೂಲಕ ಪ್ರೋತ್ಸಾಹಿಸುವಂತೆ ಕೈ ಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
ಈ ಕಾರಣಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅವರು ವಿರಾಟ್ ಕೊಹ್ಲಿಗೆ ಧನ್ಯವಾದ ಹೇಳಿದ್ರು. ಇದಲ್ಲದೇ ಕೊಹ್ಲಿ ಸ್ಮಿತ್ ಬಳಿ ಅಭಿಮಾನಿಗಳ ಪರವಾಗಿ ಕ್ಷಮೆ ಯಾಚಿಸಿದ್ದರು.
ಈಗ ಐಸಿಸಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರು ಶ್ಲಾಘಿಸಿದ್ದು, ಭಾರತದ ನಾಯಕ ಈ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಸಂತೋಷಪಟ್ಟರು. ಅಲ್ಲದೇ, ಐಸಿಸಿ ಟ್ವೀಟ್ ಮಾಡಿದ ಕೊಹ್ಲಿಯ ವಿಡಿಯೋಗೆ ಟ್ವೀಟ್ ಮಾಡಿ, ಶ್ರೇಷ್ಠ ಆಟಗಾರನಿಂದ ಉತ್ತಮ ಪದಗಳು ಎಂದು ಶಿರ್ಷಿಕೆ ನೀಡಿದ್ದಾರೆ.
Great words from great player
— Mohammad Amir (@iamamirofficial) January 15, 2020