Top

ನನ್ನದೇ ಡೇಟ್​ ಆಫ್ ಬರ್ತ್​ ಇಲ್ಲ, ​ಅಪ್ಪ, ಅಮ್ಮಂದು ಎಲ್ಲಿಂದ ತರುವುದು.? - ಸಿದ್ದರಾಮಯ್ಯ

ನನ್ನದೇ ಡೇಟ್​ ಆಫ್ ಬರ್ತ್​ ಇಲ್ಲ, ​ಅಪ್ಪ, ಅಮ್ಮಂದು ಎಲ್ಲಿಂದ ತರುವುದು.? - ಸಿದ್ದರಾಮಯ್ಯ
X

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಬೇರೆಯಲ್ಲ ಎರಡೂ ಒಂದೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಹೇಳಿದರು.

ಪೌರತ್ವ ಕಾಯ್ದೆ ವಿರುದ್ಧ ಕೆಪಿಸಿಸಿಯಲ್ಲಿಂದು ಕಾಂಗ್ರೆಸ್ ಕಾರ್ಯಾಗಾರ ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊರಗಿನ ಬರ್ಮಾ, ಭೂತಾನ್, ಪಾಕ್, ಶ್ರೀಲಂಕಾದಿಂದಲೂ ದೇಶದಿಂದ ಹಲವರು ಭಾರತಕ್ಕೆ ಬಂದಿದ್ದಾರೆ. ಆದರೆ ಈಗ ಹಿಂದು, ಕ್ರೈಸ್ತ ಇತರರಿಗೆ ಪೌರತ್ವ ನೀಡ್ತಾರಂತೆ. ಆದರೆ, ಮುಸ್ಲಿಂರಿಗೆ ಮಾತ್ರ ನೀಡಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

ಅಂತೆಯೇ ಮಾತನಾಡಿ, ಬಿಜೆಪಿ ಬಂದಿದ್ದೆ 1980 ರಿಂದ ಇಚೇಗೆ, ಅದಕ್ಕೂ ಮೊದಲು ಇದ್ದಿದ್ದು ಜನಸಂಘ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬಿಜೆಪಿಯವರಲ್ಲ. ಬಿಜೆಪಿಯವರು ಸಂವಿಧಾನಕ್ಕೆ ಬದ್ಧವಾಗಿದ್ದವರಲ್ಲ. ಮನುಸ್ಮೃತಿಗೆ ಪೂರಕ ಸಂವಿಧಾನ ಬಯಸಿದ್ದವರು ಎಂದು ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು.

ಇನ್ನು ಬಿಜೆಪಿಯು ಪ್ರಣಾಳಿಕೆಯಲ್ಲಿ ಹೇಳಿದ್ದನ್ನ ಜಾರಿಗೆ ತರಲಿಲ್ಲ. ಬೇರೆ ಎಲ್ಲವನ್ನೂ ಜಾರಿಗೆ ತರುತ್ತಿದ್ದಾರೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ. ಸಮಸ್ಯೆಗಳನ್ನ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ನನಗೆ ನನ್ನ ಜನ್ಮ ದಿನ ಗೊತ್ತಿಲ್ಲ. ಮೇಷ್ಟ್ರು ಬರೆದುಕೊಂಡಿರುವುದೇ ನನ್ನ ಹುಟ್ಟಿದ ದಿನಾಂಕ ಇದೆ. ಇನ್ನು, ನನ್ನ ಅಪ್ಪ, ಅಮ್ಮಂದು ಎಲ್ಲಿಂದ ತರುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಜಾರಿಗೆ ತಂದಿರುವ ಸಿಎಎ ವಿರುದ್ಧ ವಿರುದ್ಧ ಕಿಡಿಕಾರಿದರು.

Next Story

RELATED STORIES