Top

ನಾಳೆ ಗ್ರಾಹಕರಿಗೆ ಕೆಎಂಎಫ್​​ನಿಂದ ಬಿಗ್​ ಶಾಕ್..?

ನಾಳೆ ಗ್ರಾಹಕರಿಗೆ ಕೆಎಂಎಫ್​​ನಿಂದ ಬಿಗ್​ ಶಾಕ್..?
X

ಬೆಂಗಳೂರು: ಜನಸಾಮಾನ್ಯರು ಈಗಾಗ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ದಿನನಿತ್ಯ ಉಪಯೋಗಿಸುವ ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಇದೀಗ ನಂದಿನಿ ಹಾಲಿನ ದರವೂ ಹೆಚ್ಚಳ ಮಾಡುವ ಮುನ್ಸೂಚನೆ ಸಿಕ್ಕಿದೆ. ನಾಳೆ ನಡೆಯುವ ಕೆಎಂಎಫ್ ಬೋರ್ಡ್ ಮೀಟಿಂಗ್‌ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ದರ ಪರಿಷ್ಕರಣೆಗೆ ಮುಂದಾಗಿರುವ ಕೆಎಂಎಫ್, ಪ್ರತಿ ಲೀಟರ್‌ಗೆ 2 ರಿಂದ 3 ರೂಪಾಯಿ ಹೆಚ್ಚಿಸಲು ಚಿಂತಿಸಿದೆ. ರಾಜ್ಯದ 14 ಹಾಲು ಒಕ್ಕೂಟಗಳು ದರ ಹೆಚ್ಚಳದ ಪ್ರಸ್ತಾವ ಇಟ್ಟಿವೆ. ನಾಳೆಯ ಸಭೆಯಲ್ಲಿ ಸಾಧಕ- ಬಾಧಕ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ, ಸಾಗಾಣಿಕೆ ವೆಚ್ಚ ಏರಿಕೆಯಾಗಿರೋದ್ರಿಂದ ಹಾಲಿನ ದರ ಹೆಚ್ಚಳ ಅನಿವಾರ್ಯ ಅಂತ ಹೇಳಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತಾದಾರೂ ಗ್ರಾಹಕರಿಗೆ ಹೊರೆಯಾಗೋದ್ರಿಂದ ನಿರ್ಧಾರ ಕೈಬಿಡಲಾಗಿತ್ತು. ಆದರೆ, ಈಗ ದರ ಏರಿಕೆ ಅನಿವಾರ್ಯ ಆಗಿದೆ. ಆದರೆ, ಕೆಎಂಎಫ್ ಚಿಂತನೆ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಹೊಸ ವರ್ಷದ ಆರಂಭದಲ್ಲೇ ಜನರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಚಿನ್ನದ ರೇಟ್ ಬಳಿಕ ಇದೀಗ ಹಾಲಿನ ದರವೂ ಸಾಮಾನ್ಯ ಜನರನ್ನು ನಿದ್ದೆಗೆಡಿಸಿದೆ.

Next Story

RELATED STORIES