Top

ಬಿಜೆಪಿ ಕಾರ್ಯಕರ್ತರ ವಿರುದ್ಧ ತನಿಖೆಗೆ ಆದೇಶ - ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ

ಬಿಜೆಪಿ ಕಾರ್ಯಕರ್ತರ ವಿರುದ್ಧ ತನಿಖೆಗೆ ಆದೇಶ - ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ
X

ಬೆಂಗಳೂರು: ಜ್ಯೋತಿ ನಿವಾಸ ಕಾಲೇಜಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪರ ಸಹಿ ಹಾಕಲು ಬಿಜೆಪಿ ಕಾರ್ಯಕರ್ತರಿಂದ ಒತ್ತಾಯ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಆರೋಪ ವಿಚಾರದ ಬಗ್ಗೆ ಸ್ಥಳೀಯ ಪೋಲಿಸರು ತನಿಖೆ ನಡೆಸಲಿದ್ದಾರೆ. ಆದರೆ, ಮಾಜಿ ಸಚಿವ ರಾಮಲಿಂಗರೆಡ್ಡಿ ಅವರು ರಾಜಕೀಯ ಮಾಡಲು ಅಲ್ಲಿಗೆ ಹೋಗಿದ್ದಾರೆ. ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲು ಹುಡುಕುತ್ತಾರೆ. ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ ಎಂದು ಆರೋಪಿಸಿದರು.

ಅಂತೆಯೇ ಮಾತನಾಡಿ, ಕಾಲೇಜಿನ ವಿದ್ಯಾರ್ಥಿನಿಯೇ ದೂರು ನೀಡಿದ್ದಾರೆ. ವಿದ್ಯಾರ್ಥಿನಿ ಆಗಲಿ ಯಾರೇ ಆಗಲಿ ಬಂದು ದೂರು ಕೊಟ್ಟರೂ ತನಿಖೆ ನಡೆಯುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಈ ಹಿಂದೆ ಸಿಎಎ ಬೆಂಬಲಿಸುವಂತೆ ಕೋರಿ ಕಾಲೇಜ್ ಗೋಡೆಯ ಮೇಲೆ ಬ್ಯಾನರ್ ಹಾಕಿದ್ದರು. ಈ ವಿಚಾರಕ್ಕೆ ವಿದ್ಯಾರ್ಥಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನಮಕಿ ನಡೆದಿತ್ತು. ಅಲ್ಲದೇ, ಈ ಬ್ಯಾನರ್​ನ್ನು ಕಿತ್ತಿಕೊಂಡು ಹೋಗಿ ರಾಜಕೀಯ ಮಾಡಲು ಇಲ್ಲಿ ಬರಬೇಡಿ ಎಂದಿದ್ದರು.

Next Story

RELATED STORIES