Top

ಕನ್ನಡ ಬಾಷೆ ನ್ಯಾಯಾಂಗಕ್ಕೆ ಮಾತ್ರ ಸೀಮಿತವಾಗಬಾರದು - ಸಿ.ಟಿ ರವಿ

ಕನ್ನಡ ಬಾಷೆ ನ್ಯಾಯಾಂಗಕ್ಕೆ ಮಾತ್ರ ಸೀಮಿತವಾಗಬಾರದು - ಸಿ.ಟಿ ರವಿ
X

ಬೆಂಗಳೂರು: ಬರೇ ನ್ಯಾಯಾಂಗದಲ್ಲಿ ಕನ್ನಡತೆ ಬಗ್ಗೆ ಸ್ವಂತಿಕೆ ಇದ್ದರೆ ಆಗಲ್ಲ. ವೈದ್ಯಕೀಯ ಕ್ಷೇತ್ರದಲ್ಲಿಯೂ ಕನ್ನಡತನ ಬರಬೇಕು ಎಂದು ಸಚಿವ ಸಿಟಿ ರವಿ ಅವರು ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿಂದು ನ್ಯಾಯಾಂಗದಲ್ಲಿ ಸಾಧನೆಗೈದ ಕನ್ನಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ಬರದುಕೊಡುವ ಚೀಟಿಯಲ್ಲಿ ರೋಗಿಗಳಿಗೆ ಏನೂ ಅರ್ಥ ಆಗಲ್ಲ. ವೈದ್ಯರು ಆ ತರಹದ ಬರವಣಿಗೆ ಬರೆದಿರುತ್ತಾರೆ. ಆಮೇಲೆ ಸರಿ ಆಗಿಲ್ಲ ಅಂದ್ರೆ ಮತ್ತೊಂದು ಚೀಟಿ ಕೊಡುತ್ತಾರೆ. ಹೀಗಾಗಿ ಎಲ್ಲ ಕ್ಷೇತ್ರದಲ್ಲೂ ಕನ್ನಡತನ ಇರಬೇಕು ಎಂದರು.

ಅಂತೆಯೇ ಮಾತನಾಡಿ, ಮುಂದಿನ ದಿನಗಳಲ್ಲಿ ಮನೆಯಲ್ಲಿನ ಅಮ್ಮನ್ನನ್ನು ಅಮ್ಮ ಎಂದು ಕರೆದು ಸನ್ಮಾನ ಮಾಡುವ ಸಂಭವ ಬರಬಹುದು ಎಂದು ಸಿ.ಟಿ ರವಿ ಅವರು ಕನ್ನಡ ಮರೆಮಾಚುತ್ತಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದರು.

ಇನ್ನು ಕನ್ನಡದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ ಏನು ಎಂದರೆ, ಯಾವ ಭಾಷೆಯಲ್ಲಿ ಕಲಿಬೇಕು ಎನ್ನೋದು ಅವರ ಪೋಷಕರಿಗೆ ಬಿಟ್ಟಿದ್ದು ಎಂದು, ಆದರೆ ಈ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವ ಸಂದರ್ಭ ಬಂದಿದೆ ಎಂದು ಅವರು ನುಡಿದರು.

Next Story

RELATED STORIES