Top

2020ರ ವರ್ಷದ ಭವಿಷ್ಯ: ಆ ಒಂದು ರಾಶಿಯವರಿಗೆ ಭರ್ಜರಿ ಜಾಕ್​ಪಾಟ್​

2020ರ ವರ್ಷದ ಭವಿಷ್ಯ: ಆ ಒಂದು ರಾಶಿಯವರಿಗೆ ಭರ್ಜರಿ ಜಾಕ್​ಪಾಟ್​
X

1. ಮೇಷ ರಾಶಿ:

ಆದಾಯ ಮತ್ತು ಖರ್ಚು ಸಮಾನ. ಒಳ್ಳೆಯ ಕಾಲ, ಸಂಕಷ್ಟ ನಿವಾರಣೆ. ಕುಟುಂಬ ಕಲಹ, ಆರೋಗ್ಯ ಸುಧಾರಣೆ, ಸಂತಾನ ಭಾಗ್ಯ. ಅಶ್ವಿನಿ, ಭರಣಿ, ಕೃತಿಕಾ ನಕ್ಷತ್ರದವರಿಗೆ ಕಂಕಣ ಭಾಗ್ಯ. ಗಲಾಟೆಗಳಿಂದ ದೂರವಿರುವುದು ಒಳ್ಳೆಯದು.

ಅದೃಷ್ಟದ ಸಂಖ್ಯೆ- 6

ಪರಿಹಾರ: ಅಶ್ವತ್ಥ ಕಟ್ಟೆಯಲ್ಲಿರು ನಾಗರ ಕಲ್ಲಿಗೆ ಮಂಗಳವಾರ ಮತ್ತು ಶನಿವಾರ ನಮಸ್ಕಾರ ಮಾಡಿ, ಕಪ್ಪು ಬಟ್ಟೆ ಧರಿಸದೆ ಇರುವುದು ಒಳ್ಳೆಯದು.

2. ವೃಷಭ ರಾಶಿ

ಆದಾಯ ಜಾಸ್ತಿ, ಖರ್ಚು ಕಡಿಮೆ, ಗೌರವ ಜಾಸ್ತಿ, ಕೃತಿಕಾ,ರೋಹಿನಿ, ಮೃಗಶಿರ ನಕ್ಷತ್ರದವಿರೆ ಸಾಲಭಾದೆ. ವಿದ್ಯಾರ್ಥಿಗಳಲ್ಲಿ ಗೊಂದಲ, ತಂದೆ-ತಾಯಿಯ ಜೊತೆ ವಾಗ್ವಾದ, ನಿರ್ಧಾರಗಳಲ್ಲಿ ಗೊಂದಲ.

ಅದೃಷ್ಟದ ಸಂಖ್ಯೆ- 3

ಪರಿಹಾರ: ರಾಘವೇಂದ್ರ ಸ್ವಾಮಿ ಮತ್ತು ಶಿರಡಿ ಸಾಯಿಬಾಬಾರ ಧ್ಯಾನ ಮಾಡಿ, ಕೆಂಪು ಬಣ್ಣದ ಬಟ್ಟೆ ಧರಿಸದೆ ಇರುವುದು ಒಳ್ಳೆಯದು.

3. ಮಿಥುನ ರಾಶಿ

ಆದಾಯ ಕಡಿಮೆ, ಖರ್ಚು ಜಾಸ್ತಿ. ಮೃಗಶಿರ, ಆದ್ರ, ಪುನರ್ವಸು ನಕ್ಷತ್ರದವರಿಗೆ ಸಾಲಭಾದೆ. ಮನಸ್ಸಿಗೆ ಕಿರಿಕಿರಿ, ರಾಜಕೀಯ ವರ್ಗದವರಿಗೆ ಹಿನ್ನಡೆ. ವಸ್ತುಗಳ ಖರದಿಯಲ್ಲಿ ಜಾಗೃತೆ.

ಅದೃಷ್ಟದ ಸಂಖ್ಯೆ- 7

ಪರಿಹಾರ: ದೇವಿಯ ದರ್ಶನ ಮತ್ತು ಆರಾಧನೆ ಮಾಡಿ ನೀಲಿ ಬಟ್ಟೆಗಳನ್ನು ಧರಿಸದೆ ಇರುವುದು ಒಳ್ಳೆಯದು.

4. ಕರ್ಕಾಟಕ (ಕಟಕ) ರಾಶಿ

ಆದಾಯದಲ್ಲಿ ಹೆಚ್ಚಳ, ಉಳಿತಾಯ ಜಾಸ್ತಿ , ಮಕ್ಕಳದಿಂದ ಕಿರಿಕಿರಿ. ಪುನರ್ವಸು, ಪುಷ್ಯ, ಆಶ್ಲೇಷ ನಕ್ಷತ್ರದವರಿಗೆ ಗೌರವ ಲಭಿಸಲಿದೆ. ಒಳ್ಳೆಯ ಉದ್ಯೋಗಗಳ ಅವಕಾಶ, ಪ್ರಮೋಷನ್ ಸಿಗುವ ಸಾಧ್ಯತೆ. ರಾಜಕೀಯ ವರ್ಗದವರಿಗೆ ಅದ್ಭುತ ಕಾಲ.

ಅದೃಷ್ಟದ ಸಂಖ್ಯೆ- 2

ಪರಿಹಾರ: ಶಿವನ ಆರಾಧನೆ ಮಾಡಿದರೆ ಒಳ್ಳೆಯದು, ಕಪ್ಪು ಬಟ್ಟೆಯನ್ನು ಧರಿಸದೆ ಇರುವುದು ಒಳ್ಳೆಯದು .

5. ಸಿಂಹ ರಾಶಿ

ಮಖಾ, ಕುಂಭ, ಉತ್ತರಾ ನಕ್ಷತ್ರದವರಿಗೆ ಹೆಚ್ಚು ಆದಾಯ. ಕೋಪ ಜಾಸ್ತಿ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ. ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಸ್ತ್ರೀಯರಿಗೆ ಗೌರವ, ವ್ಯಾಪಾರಿಗಳಿಗೆ ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲ.

ಅದೃಷ್ಟದ ಸಂಖ್ಯೆ-5

ಪರಿಹಾರ: ಪ್ರತಿ ನಿತ್ಯ ಸೂರ್ಯ ನಮಸ್ಕಾರ ಮಾಡಿ, ದೇವಸ್ಥಾನಗಳಿಗೆ ಧಾನಧರ್ಮ ಮಾಡಿ, ನೀಲಿ ಬಟ್ಟೆಯನ್ನು ಧರಿಸದೆ ಇರುವುದು ಒಳ್ಳೆಯದು.

6. ಕನ್ಯಾ ರಾಶಿ

ಪ್ರಾರಂಭಿಕ ಕಾಲ ಚೆನ್ನಾಗಿ ಇಲ್ಲ, ಆದಾಯ ಕಡಿಮೆ ಖರ್ಚು ಜಾಸ್ತಿ, ಉತ್ತರಾ, ಹಸ್ತ, ಚಿತ್ತಾ ನಕ್ಷತ್ರದವರಿಗೆ ವಿವಾಹ ಯೋಗ. ಕೋರ್ಟ್​ನ ಕೇಸುಗಳು ಇತ್ಯರ್ಥ, ಸಂಪಾದನೆಗೆ ತಕ್ಕಂತೆ ಖರ್ಚು ಮಾಡಿದರೆ ಒಳ್ಳೆಯದು.

ಅದೃಷ್ಟ ಸಂಖ್ಯೆ-

ಪರಿಹಾರ: ಹನುಮನ ಸ್ತೋತ್ರ ಪಠಣೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿದ್ರೆ ಒಳ್ಳೆಯದು.

7. ತುಲಾ ರಾಶಿ

ಆದಾಯ ಕಡಿಮೆ, ಅವಮಾನ ಜಾಸ್ತಿ. ಚಿತ್ತಾ, ಸ್ವಾತಿ, ವಿಶಾಖ ನಕ್ಷತ್ರದವರಿಗೆ ಶನಿ ಕಾಟ. ಜಾಗರೂಕತೆಯಿಂದ ವ್ಯವಹಾರ ನಡಿಸಿ, ಧಾನ ಧರ್ಮ ಮಾಡಿದ್ರೆ ಒಳ್ಳೆಯದು. ಕಪ್ಪು ಬಟ್ಟೆಯನ್ನು ಧರಿಸದೇ ಇರುವುದು ಒಳ್ಳೆಯದು.

ಅದೃಷ್ಟದ ಸಂಖ್ಯೆ- 1

ಪರಿಹಾರ- ಕುಲ ದೇವರ ಆರಾಧನೆ ಮಾಡಿದರೆ ಒಳ್ಳೆಯದು.

8. ವೃಶ್ಚಿಕ ರಾಶಿ

ಆದಾಯ ಮತ್ತು ಖರ್ಚಿನಲ್ಲಿ ಸಮಾನತೆ. ವಿಶಾಖ, ಅನೂರಾಧ, ಜೇಷ್ಠ ನಕ್ಷತ್ರದವರಿಗೆ ವಿವಾಹ ಯೋಗ. ಅಧಿಕಾರ ಬದಲಾವಣೆ, ಆಸ್ತಿ ವ್ಯವಹಾರದಲ್ಲಿ ಸುಧಾರಣೆ. ಹಣಕಾಸು ವ್ಯವಹಾರಗಳಿಂದ ಮುಕ್ತಿ. ರಾಜಕೀಯ ವ್ಯಕ್ತಿಗಳಿಗಳಿಗೆ ಮುನ್ನಡೆ, ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಕಿರಿಕಿರಿ.

ಅದೃಷ್ಟದ ಸಂಖ್ಯೆ- 9

ಪರಿಹಾರ: ದತ್ತಾತ್ರೇಯನ ಆರಾಧನೆ ಮಾಡಿ, ಧಾನ ಧರ್ಮ ಮಾಡಿದ್ರೆ ಒಳ್ಳೆಯದು.

9. ಧನಸ್ಸು ರಾಶಿ

ಆದಾಯ ಕಡಿಮೆ, ಖರ್ಚು ಜಾಸ್ತಿ. ಮೂಲ, ಉತ್ತರಾ ನಕ್ಷತ್ರ, ಸಾಕಷ್ಟು ಏರುಪೇರುಗಳು ಸಂಭವಿಸಬಹುದಾಗಿದೆ. ಆರೋಗ್ಯದ ಸಮಸ್ಯೆ, ಕುಟುಂಬದಲ್ಲಿ ಕಲಹ, ವಿವಾಹದಲ್ಲಿ ತೊಂದರೆ. ರಾಜಕೀಯದವರಿಗೆ ಒಳ್ಳೆಯ ಕಾಲ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸಿದರೆ ಒಳ್ಳೆಯದು. ಶನಿಯ ಕಾಟ ಇರುತ್ತೆ, ದಾನ ಧರ್ಮ ಮಾಡಬೇಕು.

ಅದೃಷ್ಟದ ಸಂಖ್ಯೆ- 8

ಪರಿಹಾರ: ಗೋ ಪೂಜೆ ಮಾಡಬೇಕು. ಕಪ್ಪು ಬಟ್ಟೆಯನ್ನು ಧರಿಸದೆ ಇರುವುದು ಒಳ್ಳೆಯದು.

10. ಮಕರ ರಾಶಿ

ಜಾಗರೂಕತೆಯಿಂದ ಇರುವುದು ಒಳ್ಳೆಯದು. ನಿರ್ಧಾರಗಳನ್ನು ಯೋಚನೆ ಮಾಡಿ ತೆಗೆದುಕೊಳ್ಳಿ. ಕುಟುಂಬದಲ್ಲಿ ಕಲಹ ಸಂಭವಿಸಬಹುದು. ಮಕ್ಕಳಿಂದ ಕಿರಿಕಿರಿ, ಆಷಾಡ, ಶ್ರಾವಣ, ಧನಿಷ್ಠ ನಕ್ಷತ್ರದವರಿಗೆ ಶನಿ ಕಾಟ.

ಅದೃಷ್ಟ ಸಂಖ್ಯೆ-

ಪರಿಹಾರ: ಶಿವನ ಆರಾಧನೆ, ಆಜನೇಯ ಸ್ತೋತ್ರ ಪಠಣೆ, ಧ್ಯಾನ ಮಾಡುವುದು ಒಳ್ಳೆಯದು.

11. ಕುಂಭ ರಾಶಿ

ಆದಾಯ ಜಾಸ್ತಿ, ಖರ್ಚು ಕಡಿಮೆ. ಒಳ್ಳೆಯ ಕೆಲಸಗಳು ನಡೆಯುವ ಸಾಧ್ಯತೆ. ರೈತರಿಗೆ, ಮತ್ತು ಮಹಿಳಾ ಸಣ್ಣ ಉದ್ಯಮಿಗಳಿಗೆ ಲಾಭ. ಧನಿಷ್ಠ, ಶತಾಭಿಷ, ಪೂರ್ವಭಾದ್ರ ನಕ್ಷತ್ರದವರು ಬೇರೆಯವರ ಕೆಲಸದಲ್ಲಿ ಕೈ ಹಾಕುವುದು ಬೇಡ. ಬೇರೆವರ ಕಿವಿ ಮಾತು ಕೇಳಬೇಡಿ. ವಾಹನ ಎಚ್ಚರಿಕೆಯಿಂದ ಚಲಾಯಿಸಬೇಕು. ಕೋಪ ಜಾಸ್ತಿ. ಆಯುಧಗಳಿಂದ ದೂರ ಇರುವುದು ಒಳ್ಳೆಯದು. ಸಂಗಾತಿಯಿಂದ ಹೊಂದಾಣಿಕೆಯಿಂದ ಇರುವುದು ಮುಖ್ಯ.

ಅದೃಷ್ಟದ ಸಂಖ್ಯೆ - 7

ಪರಿಹಾರ:

12. ಮೀನ ರಾಶಿ

ಅದೃಷ್ಟದ ಕಾಲ, ಅಂದುಕೊಂಡಿದ್ದ ಕೆಲಸಗಳಲ್ಲಿ ಯಶಸ್ವಿ. ಆದಾಯ ಜಾಸ್ತಿ, ಖರ್ಚು ಕಡಿಮೆ. ಪೂರ್ವಭಾದ್ರ, ಉತ್ತರ, ರೇವತಿ ನಕ್ಷತ್ರದವರಿಗೆ ವಿವಾಹ ಯೋಗ. ರಾಜಕೀಯ ವ್ಯಕ್ತಿಗಳಿಗೆ ಅದೃಷ್ಟದ ಕಾಲ. ಎಲ್ಲ ರಂಗದವರಿಗೂ ಒಳ್ಳೆಯ ಕಾಲ, ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಮಾಜ ಸೇವೆ ಮಾಡಿದ್ರೆ ಒಳ್ಳೆಯದು.

ಅದೃಷ್ಟದ ಸಂಖ್ಯೆ- 3

ಪರಿಹಾರ: ದುರ್ಗಾ ದೇವಿಯ ಆರಾಧನೆ ಮಾಡಿದ್ರೆ ಒಳ್ಳೆಯದು.

Next Story

RELATED STORIES