ನ್ಯೂ ಇಯರ್ಗೆ ಎಣ್ಣೆ ಪ್ರಿಯರಿಗೆ ಬಿಎಂಆರ್ಸಿಎಲ್ ಶಾಕ್..!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ ಸೆಲೆಬ್ರೆಷನ್ ಇನ್ನೇನು ಕೌಂಟ್ಡೌನ್ ಶುರುವಾಗಿದೆ. ಈ ಬಾರಿ ಪಾರ್ಟಿ ಮುಗಿಸಿ ಸಿಕ್ಕಪಟ್ಟೆ ಫುಲ್ ಟೈಟ್ ಆಗಿ ಮೆಟ್ರೋಗೆ ಹೋಗೋಣ ಎಂದು ಪ್ಲ್ಯಾನ್ ಮಾಡಿದರೆ, ಆ ಕನಸು ಇಡೇರುವುದಿಲ್ಲ.
ಹೊಸ ವರ್ಷದ ಸಂಭ್ರಮಕ್ಕೆ ಸಿಲಿಕಾನ್ಸಿಟಿ ಸಜ್ಜಾಗುತ್ತಿದೆ. ಬೆಂಗಳೂರಿಗರ ಅನುಕೂಲಕ್ಕಾಗಿ ನ್ಯೂ ಇಯರ್ ಮಿಡ್ನೈಟ್ 2 ಗಂಟೆವರೆಗೆ ಮೆಟ್ರೋ ಸಂಚಾರ ವಿಸ್ತರಣೆಗೆ ಬಿಎಂಆರ್ಸಿಎಲ್ ನಿರ್ಧರಿಸಿದೆ. ಹಾಗೂ ಇದರ ಜೊತೆ ಎಚ್ಚರಿಕೆಯ ಹೆಜ್ಜೆಯನ್ನೂ ಇಟ್ಟಿದೆ.
ಹೊಸವರ್ಷದ ರಾತ್ರಿ ಫುಲ್ ಟೈಟ್ ಆಗಿ. ಪಾರ್ಟಿ ಮಾಡಿ. ಮೆಟ್ರೋದಲ್ಲಿ ಮನೆಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ದವರಿಗೆ ಬಿಎಂಆರ್ಸಿಎಲ್ ಶಾಕ್ ನೀಡಲು ಮುಂದಾಗಿದೆ. ಸಾಮಾನ್ಯ ದಿನಗಳಲ್ಲಿ ಮೆಟ್ರೋದಲ್ಲಿ ಕುಡುಕರ ಕಾಟ ಕೇಳಲು ಆಗ್ತಿಲ್ಲ. ಇನ್ನೂ ನ್ಯೂ ಇಯರ್ ದಿನ ಅವರನ್ನ ಹಿಡಿಯಲು ಆಗಲ್ಲ. ಹೀಗಾಗಿ ಕೆಲ ಮಹಿಳಾ ಸಂಘಟನೆಗಳು, ಕುಡುಕರಿಗೆ ಪ್ರವೇಶ ನೀಡಬಾರದು ಅಂತ ದೂರು ನೀಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಆರ್ಸಿಎಲ್, ಕುಡುಕರನ್ನು ಮೆಟ್ರೋ ಹತ್ತಿಸದಿರಲು ಚಿಂತನೆ ನಡೆಸಿದೆ ಎಂಂದು ಬಿಎಮ್ಆರ್ಸಿಎಲ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಬಿಎಂಆರ್ಸಿಎಲ್ನ ಈ ಚಿಂತನೆಯಿಂದ ಮಧ್ಯಪ್ರಿಯರಿಗೆ ನ್ಯೂ ಇಯರ್ ದಿನ ಮೆಟ್ರೋ ಬಾಗಿಲು ಮುಚ್ಚುತ್ತಾ ಎನ್ನುವ ಭಯ ಈಗಾಗಲೇ ಶುರುವಾಗಿದೆ.