Top

2019ರಲ್ಲಿ ರಾಜ್ಯ ರಾಜಕಾರಣದ ನಡೆದ ಪ್ರಮುಖ ಘಟನೆಗಳು

2019ರಲ್ಲಿ ರಾಜ್ಯ ರಾಜಕಾರಣದ ನಡೆದ ಪ್ರಮುಖ ಘಟನೆಗಳು
X

2019ನೇ ವರ್ಷವು ಇನ್ನೇನು ಕೊನೆಯಾಗಲು ಕೇವಲ ಬೆರಳು ಏಣಿಕೆ ಎಷ್ಟೇ ಬಾಕಿ ಇದೆ. ಈ ವರ್ಷದ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಅದರಲ್ಲಿ ಕೆಲವು ಪ್ರಮುಖ ಘಟನೆಗಳನ್ನು ಈ ಕೆಳಗೆ ನೀಡಲಾಗಿದೆ.

  • ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಥಮ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು.
  • ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್​​​​ನ ಒಬ್ಬ ಅಭ್ಯರ್ಥಿ ಆಯ್ಕೆ (ಡಿ.ಕೆ. ಸುರೇಶ್​​)
  • ಜೆಡಿಎಸ್​ನಿಂದ ಪ್ರಜ್ವಲ್​ ರೇವಣ್ಣ ಹಾಗೂ ಬಿಜೆಪಿಯಿಂದ ತೇಜಸ್ವಿ ಸೂರ್ಯ ಪ್ರಥಮ ಬಾರಿಗೆ ಸಂಸತ್​ ಪ್ರವೇಶ.
  • ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನ.
  • ಮೈತ್ರಿ ಸರ್ಕಾರ ಪತನದ ಬಳಿಕ ಬಿಜೆಪಿ ಸರ್ಕಾರ ರಚನೆ, ಬಿಎಸ್​​ ಯಡಿಯೂರಪ್ಪ ಮೂರನೇ ಬಾರಿಗೆ ಸಿಎಂ ಆಗಿ ಆಯ್ಕೆ.
  • 17 ಜನ ಶಾಸಕರನ್ನು ಅನರ್ಹ ಎಂದು ವಿಧಾನಸಭಾ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಆದೇಶ​.
  • ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೇಟ್ಟಿಲೇರಿದ 17 ಜನ ಶಾಸಕರು.
  • ಅನರ್ಹತೆ ಎತ್ತಿಹಿಡಿದ ಸುಪ್ರೀಂಕೋರ್ಟ್​, ಉಪಚುನಾವಣೆಯಲ್ಲಿ ನಿಲ್ಲಲು ಅವಕಾಶ.
  • ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಹೀನಾಯ ಸೋಲು ಹಿನ್ನೆಲೆ: ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ​ರಾಜೀನಾಮೆ.
  • ಡಾ.ಉಮೇಶ್​ ಜಾಧವ್ ಕಾಂಗ್ರೆಸ್​​ ಪಕ್ಷ ತ್ಯಜಿಸಿ, ಬಿಜೆಪಿ ಸೇರ್ಪಡೆಗೊಂಡು ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ.
  • ಮೊಲದ ಬಾರಿ ರಾಜ್ಯದಿಂದ ಸಂಸತ್​ಗೆ ಪಕ್ಷೇತರೆಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದ ಮೊದಲ ಮಹಿಳೆ ಸುಮಲತಾ ಅಂಬರೀಶ್.

Next Story

RELATED STORIES