Top

2019ರಲ್ಲಿ ರಾಷ್ಟ್ರ ರಾಜಕಾರಣದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳು

2019ರಲ್ಲಿ ರಾಷ್ಟ್ರ ರಾಜಕಾರಣದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳು
X

2019ನೇ ವರ್ಷವು ಇನ್ನೇನು ಕೊನೆಯಾಗಲು ಕೇವಲ ಬೆರಳು ಏಣಿಕೆ ಎಷ್ಟೇ ಬಾಕಿ ಇದೆ. ಈ ವರ್ಷದಲ್ಲಿಸಾಕಷ್ಟು ರಾಷ್ಟ್ರ ರಾಜಕಾರಣದಲ್ಲಿ ಬೆಳವಣಿಗೆಗಳು ನಡೆದಿವೆ. ಅದರಲ್ಲಿ ಕೆಲವು ಪ್ರಮುಖ ಘಟನೆಗಳನ್ನು ಈ ಕೆಳಗೆ ನೀಡಲಾಗಿದೆ.

 • ಪ್ರಿಯಾಂಕ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​​ನ ಪ್ರಧಾನ ಕಾರ್ಯದರ್ಶಿ ಆಗಿ ಅಧಿಕಾರ ಸ್ವೀಕಾರ.
 • ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಬಹುಮತ.
 • ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ.
 • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಮುಖಭಂಗ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ರಾಜೀನಾಮೆ.
 • ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮತ್ತೆ ಆಯ್ಕೆ.
 • ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ಕಾಯ್ದೆ ರದ್ದು.
 • ಕಾಂಗ್ರೆಸ್​​ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಹುದ್ದೆ ದಿವ್ಯ ಸ್ಪಂದನ/ರಮ್ಯ ಔಟ್​.
 • ಕಾಂಗ್ರೆಸ್​​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ರೋಹನ್​ ಗುಪ್ತಾ ಆಯ್ಕೆ.
 • ದಶಕಗಳಿಂದ ಬಗೆಹರಿಯದೆ ಉಳಿದಿದ್ದ ಅಯೋಧ್ಯೆ ಐತಿಹಾಸಿಕ ತೀರ್ಪು ನವೆಂಬರ್​ 9ರಂದು ಪ್ರಕಟ.
 • ಸಿಎಬಿ( ಪೌರತ್ವ ಕಾಯ್ದೆ ತಿದ್ದುಪಡಿ).
 • ಕೇಂದ್ರ ಬಜೆಟ್​ನಲ್ಲಿ ದೇಶದ ಇತಿಹಾಸದಲ್ಲಿ ರಕ್ಷಣೆ ಇಲಾಖೆಗೆ 3 ಲಕ್ಷ ಕೋಟಿ ಮೀಸಲು.
 • ಸಿಬಿಐ ಮುಖ್ಯಸ್ಥರಾಗಿ ರಿಶಿ ಕುಮಾರ್‌ ಶುಕ್ಲಾ ನೇಮಕ.
 • ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್​ಗೆ ಭರ್ಜರಿ ಗೆಲುವು, ರಾಷ್ಟ್ರ ರಾಜಕಾರಣದಲ್ಲಿ ಸದ್ದು.
 • ಕೇಂದ್ರದ ಮಾಜಿ ಹಣಕಾಸು ಮಂತ್ರಿ ಅರುಣ್​ ಜೇಟ್ಲಿ ನಿಧನ( ಆಗಸ್ಟ್​​ 24).
 • ಕೇಂದ್ರದ ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್​ ವಿಧಿವಶ( ಆಗಸ್ಟ್​ 06).
 • ಮಾಜಿದ ಮಾಜಿ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್​ ನಿಧನ (ಮಾರ್ಚ್​ 17).
 • ಆಂಧ್ರಪ್ರದೇಶದಲ್ಲಿ ವೈ.ಎಸ್.​​ಜಗನ್​ ಮೋಹನ್​ ರೆಡ್ಡಿ ಮುಖ್ಯಮಂತ್ರಿ ಆಯ್ಕೆ.
 • ಮಹಾರಾಷ್ಟ್ರದಲ್ಲಿ ಎರಡನೇ ಬಾರಿಗೆ ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿ ಆಗಿ ಅಧಿಕಾರ, ಮತ್ತೆ ರಾಜೀನಾಮೆ.
 • ಮಹಾರಾಷ್ಟ್ರದಲ್ಲಿ ಶೀವಸೇನಾ-ಎನ್​ಸಿಪಿ-ಕಾಂಗ್ರೆಸ್​​ ಮೈತ್ರಿ ಸರ್ಕಾರ ರಚನೆ.
 • ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್​ ಠಾಕ್ರೆ ಆಯ್ಕೆ.
 • ಡಿ.ಕೆ ಶಿವಕುಮಾರ್ ದೆಹಲಿ ನಿವಾಸದ ಮೇಲೆ ಐಟಿ ದಾಳಿ, ಇಡಿ ಅಧಿಕಾರಿಗಳಿಂದ ಡಿಕೆಶಿ ಅರೆಸ್ಟ್​​
 • ಮಾಜಿ ಸಚಿವ ಡಿ.ಕೆ.ಶಿವಕುಮಾರ್​ 48 ದಿನಗಳ ತಿಹಾರ್​ ಜೈಲಿನಲ್ಲಿ ವಾಸ.
 • ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಚಿದಂಬರಂ ​​​105 ದಿನ ಜೈಲು ವಾಸ.
 • ಉನ್ನಾವ್ ಅತ್ಯಾಚಾರ ಪ್ರಕರಣ: A1 ಆರೋಪಿ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್​ ಸಿಂಗ್​ ಸೆಂಗಾರ್ ದೋಷಿ ಎಂದು ತೀರ್ಪು.
 • ಗೋದ್ರಾ ಹತ್ಯಾಖಂಡದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿಲ್ಲ ಎಂದು ನಾನಾವತಿ ಸಮಿತಿಯಿಂದ ಗುಜರಾತ್​ ಸರ್ಕಾರಕ್ಕೆ ವರದಿ.

Next Story

RELATED STORIES