Top

2019ನೇ ಸಾಲಿನಲ್ಲಿ ಭಾರತ ಕ್ರಿಕೆಟ್​ನಲ್ಲಿ ನಡೆದ ಪ್ರಮುಖ ಘಟನೆಗಳು

2019ನೇ ಸಾಲಿನಲ್ಲಿ ಭಾರತ ಕ್ರಿಕೆಟ್​ನಲ್ಲಿ ನಡೆದ ಪ್ರಮುಖ ಘಟನೆಗಳು
X

2019ರ ವರ್ಷ ಟೀಂ ಇಂಡಿಯಾ ಪಾಲಿಗೆ ಸಿಹಿ ಮತ್ತು ಕಹಿ ಎರಡು ದೊರೆತಿರುವ ವರ್ಷ ಎಂದೇ ಹೇಳಬಹುದು. ವರ್ಷಾರಂಭದಲ್ಲಿ ಆಸೀಸ್​ ನೆಲೆದಲ್ಲಿ ಟೆಸ್ಟ್​ ಸರಣಿ ಗೆದ್ದು ಬೀಗಿದ್ದ ಭಾರತ. ಇದೇ ಗೆಲುವಿನ ಓಟವನ್ನು ಮುಂದುವರೆಸಿಕೊಂಡು ಹೋಗಿ ವರ್ಷದ ಕೊನೆಯಲ್ಲಿ ಬಾಂಗ್ಲಾ ವಿರುದ್ಧ ಭಾರತ ಸರಣಿಯನ್ನು ಕ್ಲೀನ್​ ಸ್ವೀಪ್ ಮಾಡುವ​ ಮೂಲಕ ವರ್ಷಾಂತ್ಯಕ್ಕೆ ಗುಡ್​​ ಬೈ ಹೇಳಿದೆ.

ಟೆಸ್ಟ್​​ ಸೀರಿಸ್​​

  • ಭಾರತ ಆಡಿರುವ ನಾಲ್ಕು ಟೆಸ್ಟ್​ ಸರಣಿಯಲ್ಲಿಯೂ ಭರ್ಜರಿ ಗೆಲುವು (2019)
  • ಆಸೀಸ್​ ವಿರುದ್ಧ ಭಾರತಕ್ಕೆ 2-1 ಅಂತರದಿಂದ ಸರಣಿ ಜಯ (ಡಿಸೆಂಬರ್​-ಜನವರಿ)
  • ವೆಸ್ಟ್​​ ಇಂಡೀಸ್​​ ವಿರುದ್ಧ ಭಾರತಕ್ಕೆ 2-0 ಅಂತರದಿಂದ ಸರಣಿ ಗೆಲುವು (ಆಗಸ್ಟ್​)
  • ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 3-0 ಅಂತರದಿಂದ ಸರಣಿ ಜಯ (ಅಕ್ಟೋಬರ್)
  • ​ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 2-0 ಅಂತರದಿಂದ ಸರಣಿ ಕೈವಶ (ನವೆಂಬರ್​) ಇದರ ಮಧ್ಯೆ ಜೂನ್​-ಜುಲೈನಲ್ಲಿ ನಡೆದ ಐಸಿಸಿ ಏಕದಿನ ವಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್​ ವಿರುದ್ಧ ಸಮೀಫೈನಲ್​ನಲ್ಲಿ ಸೋತು ಕೋಟ್ಯಾಂತರ ಭಾರತೀಯ ಕನಸು ಭಂಗ ಮಾಡಿತ್ತು. ಐಸಿಸಿ ವಿಶ್ವಕಪ್​
  • ಭಾರತ ತಂಡ ಸೆಮಿ ಫೈನಲ್​ವರೆಗೂ ಪ್ರವೇಶ.
  • ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ ಸೋಲು, ವಿಶ್ವಕಪ್​ನಿಂದ ಹೊರಗೆ.
  • ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ವಿಶ್ವ ದಾಖಲೆಯ ಸತತ 5 ಶತಕ ದಾಖಲು.
  • ಮಹಮದ್​ ಶಮಿಗೆ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​.
  • ಫಸ್ಟ್​ ಟೀಂ ಇನ್​ ವಲ್ಡ್​​ಕಪ್​ ಮೊದಲ ಸೂಪರ್​ ಓವರ್​, ಸೂಪರ್​ ಓವರ್​ ಕೂಡ ಟೈ.
  • ಬೌಂಡರಿ ಕೌಂಟ್​​ ಮೂಲಕ ಮೊದಲ ಬಾರಿಗೆ ವಿಶ್ವಕಪ್​ ಗೆದ್ದ ಇಂಗ್ಲೆಂಡ್​​ ತಂಡ.
  • ವಿಶ್ವಕಪ್​ ಫೈನಲ್​ಗೆ ನ್ಯೂಜಿಲೆಂಡ್​​ ಮತ್ತು ಇಂಗ್ಲೆಂಡ್​​ ನಡುವೆ ಸೆಣಸಾಟ. ಪ್ರಸಕ್ತ ವರ್ಷದಲ್ಲಿ ಟೆಸ್​​ ಕ್ರಿಕೆಟ್​ನಲ್ಲಿ ತನ್ನ ಪ್ರಾಬಲ್ಯ ಮೇರೆದಿದ್ದ ಟೀಂ ಇಂಡಿಯಾ ಚುಟುಕು ಕ್ರಿಕೆಟ್​ನಲ್ಲೂ ಗೆಲುವಿನ ದಂಡೆಯಾತ್ರೆ ಮುಂದುವರೆಸಿದೆ. ಟಿ20 ಸರಣಿ
  • ಆಸೀಸ್​ ವಿರುದ್ಧ ಭಾರತಕ್ಕೆ 2-0 ಅಂತರದಿಂದ ಸರಣಿ ವಶ (ಫೆಬ್ರವರಿ)
  • ವೆಸ್ಟ್​​​ ಇಂಡೀಸ್ ವಿರುದ್ಧ ಭಾರತಕ್ಕೆ 3-0 ಅಂತರದಿಂದ ಸರಣಿ ಗೆಲುವು (ಆಗಸ್ಟ್​)
  • ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 1-1 ಅಂತರದಿಂದ ಸರಣಿ ಸಮಬಲಾ (ಸೆಪ್ಟಂಬರ್​)
  • ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 2-1 ಅಂತರದಿಂದ ಸರಣಿ ಜಯ (ನವೆಂಬರ್​)
  • ವೆಸ್ಟ್​ ಇಂಡೀಸ್​ ವಿರುದ್ಧ ಭಾರತಕ್ಕೆ 2-1 ಅಂತರದಿಂದ ಸರಣಿ ಗೆಲುವು (ಡಿಸೆಂಬರ್​) ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್​ನಲ್ಲಿ ಭಾರತ ಸೋಲು-ಗೆಲುವು ಎರಡನ್ನು ಕಂಡಿದೆ.
  • ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 4-1 ಅಂತರದಿಂದ ಸರಣಿ ಜಯ (ಜನವರಿ-ಫೆಬ್ರವರಿ)
  • ಭಾರತ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 3-2 ಅಂತರದಿದ ಸರಣಿ ಗೆಲುವು (ಮಾರ್ಚ್)
  • ವೆಸ್ಟ್​ ಇಂಡೀಸ್​ ವಿರುದ್ದ್ಧ ಭಾರತಕ್ಕೆ 2-0 ಅಂತರದಿಂದ ಜಯ (ಆಗಸ್ಟ್​)
  • ವೆಸ್​​ ಇಂಡೀಸ್​ ವಿರುದ್ಧ ಭಾರತ ಪಂದ್ಯ ನಡೆಯುತ್ತಿದೆ...

ಪ್ರಮುಖ ಬೆಳವಣಿಗೆಗಳು

  • ಬಿಸಿಸಿಐ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಆಯ್ಕೆ.
  • ಬಿಸಿಸಿಐ ಕಾರ್ಯದರ್ಶಿಯಾಗಿ ಜೈ ಶಾ ಆಯ್ಕೆ.
  • ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ರವಿಶಾಸ್ತ್ರಿ ಮರು ಆಯ್ಕೆ.
  • ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಎಂಎಸ್​ಕೆ ಪ್ರಸಾದ್​ ಅಧಿಕಾರ ಅವಧಿ ಮುಕ್ತಾಯ.
  • ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ್​ ಪಿಂಕ್​ ಬಾಲ್​ ಟೆಸ್ಟ್​​ ಆಯೋಜನೆ.

Next Story

RELATED STORIES