Top

ಅನರ್ಹ ಎಂಬ ಕಳಂಕ, ನಾಳೆಯಿಂದ ಇವರಿಗೆ ಸಲ್ಲುತ್ತದೆ - ಶಿವರಾಮ್​ ಹೆಬ್ಬಾರ್​

ಅನರ್ಹ ಎಂಬ ಕಳಂಕ, ನಾಳೆಯಿಂದ ಇವರಿಗೆ ಸಲ್ಲುತ್ತದೆ - ಶಿವರಾಮ್​ ಹೆಬ್ಬಾರ್​
X

ಶಿರಸಿ: ನನ್ನ ಕ್ಷೇತ್ರದ ಮತದಾರರು ಅಭಿವ್ಯಕ್ತಿ ಶೀಲ ರಾಜಕೀಯ ವ್ಯಕ್ತಿಗಳನ್ನು ಬೆಂಬಲಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್​ ನಮ್ಮನ್ನು ಕೆಟ್ಟವರನ್ನಾಗಿ ಬಿಂಬಿಸಿದೆ. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರಿಸುತ್ತೇವೆ ಎಂದು ಯಲ್ಲಾಪೂರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ ಅವರು ಹೇಳಿದರು.

ಉಪಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 16 ತಿಂಗಳ ಹಿಂದೆ ಕಾಂಗ್ರೆಸ್​ನಲ್ಲಿರುವಾಗ ನಾನು ಒಳ್ಳೆಯನಾಗಿದ್ದೆ, ಆದರೆ ಈ ಚುನಾವಣೆಯಲ್ಲಿ ಕೆಟ್ಟವನಾಗಿದ್ದೇನೆ ಎಂದು ಬಿಂಬಿಸಿ, ನನ್ನ ವಿರುದ್ಧ ಅಪಪ್ರಚಾರ ಮಾಡಿದರು ಎಂದರು.

ಅಂತೆಯೇ ಮಾತನಾಡಿ, ಅನರ್ಹ ಶಾಸಕರು ಎಂಬ ಕಳಂಕವು ಇಂದು ಹೋಗುತ್ತದೆ. ಈ ಕಳಂಕವು ಯಾರು ನಮಗೆ ಕೊಟ್ಟಿದ್ದಾರೆ ಅವರಿಗೆ ಇಂದಿನಿಂದ ಕಳಂಕವು ಶುರುವಾಗುತ್ತದೆ ಎಂದು ಶಿವರಾಮ್​ ಹೆಬ್ಬಾರ ಅವರು ಪರೋಕ್ಷವಾಗಿ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಿರುದ್ಧ ಕಿಡಿಕಾರಿದರು.

Next Story

RELATED STORIES