Top

ಬಾಂಗ್ಲಾ ವಿರುದ್ಧದ ಡೇ ಆ್ಯಂಡ್​ ನೈಟ್​ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ.!

ಬಾಂಗ್ಲಾ ವಿರುದ್ಧದ ಡೇ ಆ್ಯಂಡ್​ ನೈಟ್​ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ.!
X

ಕೊಲ್ಕತ್ತಾ: ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಡೇ ಆ್ಯಂಡ್​ ನೈಟ್​ ಪಂದ್ಯದಲ್ಲಿ ಟೀಮ್ ಇಂಡಿಯಾವು 46 ರನ್‌ಗಳ ಅಂತರದಿಂದ ಭರ್ಜರಿ ಜಯಗಳಿಸಿದೆ.

ಬಾಂಗ್ಲಾ-ಭಾರತ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತವು 2-0 ಅಂತರದಿಂದ ಬಾಂಗ್ಲಾವನ್ನು ಮಣಿಸಿದ್ದಲ್ಲದೇ, ಟೆಸ್ಟ್​ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್​ 106 ಅಲೌಟ್​ ಆದರೆ, ಭಾರತವು ಮೊದಲ ಇನ್ನಿಂಗ್​ನಲ್ಲಿ 347 ರನ್​ ಕಲೆಹಾಕಿ ಇನ್ನು ಒಂದು ವಿಕೆಟ್​ ಇರುವಾಗಲೇ ಡಿಕ್ಲೇರ್​ ತೆಗೆದುಕೊಂಡಿತ್ತು.

3 ದಿನದಲ್ಲಿ ಬ್ಯಾಟಿಂಗ್​ ಆರಂಭಿಸಿದ ಬಾಂಗ್ಲಾವು ಭಾರತದ ಬಾಲಿಂಗ್​​ ದಾಳಿಗೆ 195 ರನ್​ ಗೆ ಸರ್ವಪತನ ಕಂಡಿತು. ಮುಷ್ಫಿಕರ್ ರಹೀಮ್ 76 ರನ್​ ಕಲೆಹಾಕಿದರೆ, ಮಹ್ಮದುಲ್ಲಾ 36 ರನ್​ ಕಲೆ ಹಾಕಿ ಬಾಂಗ್ಲಾ ತಂಡವನ್ನು ಸಂಕಷ್ಟದಿಂದ ಪಾರುಮಾಡಿದರು. ಭಾರತ ಪರ ಉಮೇಶ್ ಯಾದವ್​ 5 ವಿಕೆಟ್​​ ಪಡೆದರೆ, ಇಶಾಂತ್ ಶರ್ಮಾ 4 ವಿಕೆಟ್​ ಪಡೆಯುವ ಮೂಲಕ ಟೀಮ್ ಇಂಡಿಯಾ ಗೆಲ್ಲಲು ಪ್ರಮುಖ ಪಾತ್ರ ವಹಿಸಿದಿರು.

Next Story

RELATED STORIES