Top

ಹಿಟ್​ಮ್ಯಾನ್​ ಕ್ಯಾಚ್​ಗೆ ಕಿಂಗ್​ ಕೊಹ್ಲಿ ಶಾಕ್​; ವೀಡಿಯೋ ವೈರಲ್​

ಹಿಟ್​ಮ್ಯಾನ್​ ಕ್ಯಾಚ್​ಗೆ ಕಿಂಗ್​ ಕೊಹ್ಲಿ ಶಾಕ್​; ವೀಡಿಯೋ ವೈರಲ್​
X

ಕೋಲ್ಕತ್ತಾ: ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದು ಇದನ್ನು ಕಂಡ ವಿರಾಟ್ ಕೊಹ್ಲಿ ಸ್ಟನ್ ಆದರು.

ಈಡೆನ್ ಗಾರ್ಡನ್​​ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಸಂಕಷ್ಟಕ್ಕೆ ಸಿಲುಕಿದೆ. ವೇಗಿ ಉಮೇಶ್ ಯಾದವ್ ಬೌಲಿಂಗ್​ನಲ್ಲಿ ಎದುರಾಳಿ ತಂಡದ ಬ್ಯಾಟ್ಸ್ ಮನ್ ಮೊಮಿನೂಲ್ ಡ್ರೈವ್ ಮಾಡಲು ಮುಂದಾದರು. ಗುಲಾಬಿ ಚೆಂಡು ಫಸ್ಟ್ ಸ್ಲಿಪ್​ನಲ್ಲಿ ಹೋಗುತ್ತಿದ್ದಾಗಲ ಎರಡನೇ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದು ಫಸ್ಟ್ ಸ್ಲಿಪ್ ನಲ್ಲಿದ್ದ ವಿರಾಟ್ ಕೊಹ್ಲಿ ಸ್ಟನ್ ಆಗಿ ನಿಂತರು.

ಭೋಜನ ವಿರಾಮಕ್ಕೆ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 73 ರನ್ ಪೇರಿಸಿದೆ. ಇಸ್ಲಾಂ 29 ಮತ್ತು ಲಿಟನ್ ದಾಸ್ 24 ರನ್ ಪೇರಿಸಿದ್ದು ಇನ್ನು ರ್ಯಾರು ಎರಡು ಅಂಕಿಯನ್ನು ಸಹ ದಾಟಲಿಲ್ಲ.

ಭಾರತ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಉಮೇಶ್ ಯಾದವ್ 3, ಇಶಾನ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ.

Next Story

RELATED STORIES