Top

ಕಾಂಗ್ರೆಸ್​ನಲ್ಲಿ ಡಿ.ಕೆ ಶಿವಕುಮಾರ್ ಯಾವಾಗಲೂ ಸ್ಟ್ರಾಂಗೇ

ಕಾಂಗ್ರೆಸ್​ನಲ್ಲಿ ಡಿ.ಕೆ ಶಿವಕುಮಾರ್ ಯಾವಾಗಲೂ ಸ್ಟ್ರಾಂಗೇ
X

ಬೆಂಗಳೂರು: ರಾಜಕೀಯ ಬಗ್ಗೆ ಮಾತನಾಡಿಲ್ಲ, ಫಾರ್ಮಲಿಟಿಸ್​​ಗೆ ಬಂದಿದ್ದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ತಿಳಿಸಿದ್ದಾರೆ.

ಇಲ್ಲಿನ ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ನಿವಾಸದ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ಅರೆಸ್ಟ್ ಮಾಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಿದ್ದೆ. ಇಂದು ಬಂದು ಭೇಟಿಯಾದೆ. ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್​​​ನಲ್ಲಿ ಯಾವಾಗಲೂ ಸ್ಟ್ರಾಂಗೇ ಎಂದು ಅವರು ಹೇಳಿದರು.

ಕಾಂಗ್ರೆಸ್​ ಮುಖಂಡ, ಕನಕಪುರ ಬಂಡೆ ಎಂದೇ ಖ್ಯಾತಿ ಪಡೆದಿರುವ ಡಿ.ಕೆ. ಶಿವಕುಮಾರ್ ಅವರು ಇಡಿ ಅಧಿಕಾರಿಗಳ ವಿಚಾರಣೆಯಲ್ಲಿ ಇದ್ದರು ಜೊತೆಗೆ ಕೆಲವು ದಿನಗಳ ವರೆಗೆ ಜೈಲುವಾಸ ಕೂಡ ಅನುಭವಿಸಿದ್ದರು. ಅಕ್ಟೋಬರ್ 27ರಂದು ದೆಹಲಿ ವಿಶೇಷ ಕೋರ್ಟ್​​ ಜಾಮೀನು ನೀಡಿತ್ತು.

ಜಾಮೀನು ಮಂಜೂರು ಆದ ಬಳಿಕ ಡಿಕೆ ಶಿವಕುಮಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಸಂಭ್ರಮಿಸಿದರು. ಅಲ್ಲದೇ ಕಾಂಗ್ರೆಸ್​ ಮುಖಂಡರು ಸಹ ಡಿಕೆಶಿ ಅವರಿಗೆ ಜಾಮೀನು ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು. ಕೆಲವು ನಾಯಕರು ದೆಹಲಿಗೆ ಹೋಗದಿದ್ದ ಕಾರಣ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದರು.

Next Story

RELATED STORIES