Top

'ರಾಜಕೀಯ ನಿಂತ ನೀರಲ್ಲ ಹರಿಯುವ ನೀರು, ಒಂದು ಕಡೆ ನಿಂತ್ರೆ ಕೊಳೆಯುತ್ತೇವೆ'

ರಾಜಕೀಯ ನಿಂತ ನೀರಲ್ಲ ಹರಿಯುವ ನೀರು, ಒಂದು ಕಡೆ ನಿಂತ್ರೆ ಕೊಳೆಯುತ್ತೇವೆ
X

ಹಾಸನ: ರಾಜಕಾರಣ ನಿಂತ ನೀರಲ್ಲ. ಇದು ಹರಿಯುವ ನೀರಾಗಿದೆ. ಆಕಸ್ಮಾತ್​ ಒಂದು ಕಡೆ ನಿಂತರೆ ಕೊಳೆಯುತ್ತೇವೆ ಎಂದು ಕಾಂಗ್ರೆಸ್​ನ ಮಾಜಿ ಸಚಿವ ವಿಜಯ್ ಶಂಕರ್ ಅವರು ಭಾನುವಾರ ಹೇಳಿದ್ದಾರೆ.

ಹಾಸನಾಂಬೆ ದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಜನರ ಮಧ್ಯೆ ಜೀವಂತವಾಗಿರಬೇಕು ಅಂದರೆ ಕಾಲಕಾಲಕ್ಕೆ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಅಂತಹ ತೀರ್ಮಾನ ಕೈಗೊಳ್ಳಬೇಕಾದ ರಾಜಕೀಯದ ಅನಿವಾರ್ಯತೆಯಲ್ಲಿ ನಾನಿದ್ದೇನೆ ಎಂದು ಅವರು ಹೇಳಿದ್ದಾರೆ.

ಇನ್ನು ಯಾವುದೇ ಪಕ್ಷಕ್ಕೆ ಹೋಗಬೇಕೆಂದು ಅಂತಿಮ ತೀರ್ಮಾನವನ್ನು ನಾನು ಮಾಡಿಲ್ಲ. ಸೂಕ್ತ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಈ ಬಗ್ಗೆ ಹುಣಸೂರಿನಲ್ಲಿ ಸಭೆ ಮಾಡಿದ್ದೇನೆ, ಮೈಸೂರಿನಲ್ಲಿ ಬೆಂಬಲಿಗರು ಹಿತೈಷಿಗಳ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

ನಾನು ಹುಣಸೂರಿನಿಂದ ಶಾಸಕನಾಗಿದ್ದವನು, ಹೀಗಾಗಿ ಅಲ್ಲಿಂದ ನಾನು ಅಭ್ಯರ್ಥಿಯಾಗುತ್ತೇನೆ ಎನ್ನುವ ಚರ್ಚೆ ಸಹಜ, ಸಿದ್ದರಾಮಯ್ಯ ಮಾತುಕೊಟ್ಟಂತೆ ಅವರು ನನಗೆ ಅವಕಾಶ ಕೊಟ್ಟಿದ್ದಾರೆ. ನನ್ನನ್ನು ಬಿಜೆಪಿಯ ಕೆಲವರು ಸಂಪರ್ಕ ಮಾಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದಿದ್ದಾರೆ, ಆದರೂ ಆತುರದ ನಿರ್ಧಾರ ಮಾಡಲ್ಲ ಎಂದು ಅವರು ನುಡಿದಿದ್ದಾರೆ.

ಅಲ್ಲದೇ ಸಾರ್ವಜನಿಕ ಬದುಕಿನಲ್ಲಿ, ಕಚ್ಚೆ, ಕೈ ಬಾಯಿ ಸರಿಯಾಗಿರಬೇಕು. ಇದನ್ನು ನಾನೆಂದು ಕೆಡಿಸಿಕೊಂಡಿಲ್ಲ. ಸಿದ್ದರಾಮಯ್ಯರಿಗೆ ಕೈಕೊಟ್ಟ ವಿಜಯ ಶಂಕರ್ ಎನ್ನುವ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯರಿಗೆ ಅವರದೇ ಆದ ಶಕ್ತಿಯಿದೆ. ನನ್ನ ನಿರ್ಧಾರದ ಬಗ್ಗೆ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡುತ್ತೇನೆ ಎಂದು ವಿಜಯ ಶಂಕರ್ ಅವರು ಹೇಳಿದ್ದಾರೆ.

Next Story

RELATED STORIES